September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪುತ್ತೂರುವರದಿ

ಎ.16-19: ಪುತ್ತೂರು-‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’

ಪುತ್ತೂರು:- ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ತಿಂಗಳಾಡಿ ಎಂಬಲ್ಲಿ ನಡೆಯುವ ರಾಜ್ಯಮಟ್ಟದ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’ವನ್ನು ಈ ಬಾರಿ ಏ.16 ರಿಂದ 19 ರ ವರೆಗೆ ನಡೆಸಲಾಗುತ್ತಿದೆ. ಕಾಡಿನ ರಹಸ್ಯ ತಿಳಿಯುವಿಕೆಯ ಜೊತೆಗೆ ಟ್ರೆಷರ್ ಹಂಟ್, ವರ್ಲಿ ಆರ್ಟ್, ನೀರಾಟ, ಗೋವು ಮೇವು, ಗೋ ಪೂಜೆ, ನಿತ್ಯ ಪೂಜೆ, ರಾಮಾಯಣ ದೃಶ್ಯ ಕಾವ್ಯ, ಭಗವದ್ ಗೀತೆ ಜೊತೆಗೆ ಜೀವನ ಕೌಶಲ್ಯಗಳನ್ನು ತಿಳಿಸುವ ಹತ್ತು ಹಲವು ಕುತೂಹಲಕಾರಿ ಮನರಂಜನಾ ಆಟಗಳನ್ನು ಜೋಡಿಸಿಕೊಳ್ಳಲಾಗಿದೆ. ಆಕಾಶ ವೀಕ್ಷಣೆ-ನಿದ್ರೆ, ರಂಗೋಲಿ, ಸೌದೆ ಒಲೆ ಅಡಿಗೆ ಕಲಿಕೆ, ಗೆರಟೆ ಚಿತ್ರ, ವ್ಯವಹಾರದ ಪಾಠದ ಜೊತೆ ಮಕ್ಕಳ ನಿತ್ಯ ಕರ್ಮಗಳ ಅಭ್ಯಾಸವು ಸಾಧ್ಯವಾಗುತ್ತಿದೆ.

ಇದರ ಸಂಪೂರ್ಣ ನಿರ್ವಹಣೆಯ ರಾಮಕೃಷ್ಣ ಮಠದ ಭಕ್ತರು ಹಾಗೂ ಮನಃಶಾಸ್ತ್ರಜ್ಞರಾದ ಲಕ್ಷ್ಯ ಸಂಸ್ಥೆಯ ಸಂಸ್ಥಾಪಕ, ಶ್ರೀ ದುರ್ಗಾ ಪರಮೇಶ್ವರ ಭಟ್ ಇವರು ವಹಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಜೊತೆಗಿನ ಸಂಪರ್ಕ ಶಾಲಾ ಮಕ್ಕಳಿಗೆ ಕಡಿತವಾಗುತ್ತಿರುವುದರಿಂದ ಸುಬ್ಬಜ್ಜನ ಮನೆ ಶಿಬಿರವು ಮಕ್ಕಳಿಗೆ ಪ್ರಕೃತಿ ಒಡಲಿನ ಅವಶ್ಯಕತೆಯನ್ನು ಹಾಗೂ ಅಗಾಧತೆಯನ್ನು ತಿಳಿಸುತ್ತದೆ. ಮೊದಲು ನೋಂದಾಯಿಸಿಕೊಳ್ಳುವ ಆಸಕ್ತ 30 ಮಕ್ಕಳಿಗೆ ಅವಕಾಶವನ್ನು ನೀಡಲಾಗುತ್ತಿದೆ. ದೂರವಾಣಿ ಸಂಖ್ಯೆ 9740645095 / 9663826972 ಕರೆ ಮಾಡುವುದರ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related posts

ಸಂಬೋಳ್ಯದ ಸುಮಂತ್ ಸಾವಿನ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ: ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ ಪತ್ರಿಕಾ ಹೇಳಿಕೆ

Suddi Udaya

ಶ್ರೀ ದೈವ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತುಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ- ಬ್ರಹ್ಮಕುಂಭಾಭಿಷೇಕ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶೃಂಗೇರಿ ಶಾರದಾ ಮಠಕ್ಕೆ ಭೇಟಿ, ಪುಂಡಿ ಪಣವು ಸಮರ್ಪಣೆ

Suddi Udaya

ಹುಣಸೆಕಟ್ಟೆಯ ರಸ್ತೆ ಬದಿಯ ಒಣ ಹುಲ್ಲಿಗೆ ಬೆಂಕಿ : ಬೆಂಕಿ ನಂದಿಸಿದ
ಅಗ್ನಿಶಾಮಕ ದಳ

Suddi Udaya

ಕಾರಿಂಜ ಮಧ್ವ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೆಳ್ತಂಗಡಿಯ ಯುವಕ ಸ್ಥಳದಲ್ಲೆ ಸಾವು

Suddi Udaya
error: Content is protected !!