September 6, 2026
ತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಡಿಟಿಯು ಆಟೋ ಯೂನಿಯನ್ ಬಾಜಾರ್ ಘಟಕ ಅಸ್ಥಿತ್ವಕ್ಕೆ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಬಾಜಾರುವಿನಲ್ಲಿ ನೂತನ ಎಸ್‌ಡಿಟಿಯು ಆಟೋ ಯೂನಿಯನ್ ರಚನೆ ಮಾಡಲಾಯಿತು.

ವೀಕ್ಷಕರರಾಗಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಲೀಮ್ ಜಿ.ಕೆ. ರವರು ಎಸ್‌ಡಿಟಿಯು ಆಟೋ ಯೂನಿಯನ್‌ನ ಬಗ್ಗೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ನಂತರ ಎಸ್‌ಡಿಟಿಯು ಆಟೋ ಯೂನಿಯನ್ ಬಾಜಾರ್ ಘಟಕದ ಎಲ್ಲಾ ಸದಸ್ಯರಲ್ಲಿ ಚರ್ಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ರಝಾಕ್, ಉಪಾಧ್ಯಕ್ಷರಾಗಿ ಬಾತಿಷ್ ಬಾಜಾರ್, ಕಾರ್ಯದರ್ಶಿಯಾಗಿ ಮಹಮ್ಮದ್ ಕೆ, ಜತೆ ಕಾರ್ಯದರ್ಶಿಯಾಗಿ ಸುಧರ್ಶನ್ ಬಾಜಾರ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಕುಟ್ಟಿಕ್ಕಳ, ಸಲಹೆಗಾರರಾಗಿ ರಶೀದ್ ಬದಿಬಿತ್ತಿಲು ರವರನ್ನು ಆಯ್ಕೆ ಮಾಡಲಾಯಿತು.
ಒಟ್ಟು 20 ಮಂದಿ ಆಟೋ ಚಾಲಕ ಮಾಲಕರು ಈ ಸಂಧರ್ಭದಲ್ಲಿ ಎಸ್‌ಡಿಟಿಯು ಆಟೋ ಯೂನಿಯನ್‌ನ ಸದಸ್ಯತ್ವವನ್ನು ಸ್ವೀಕರಿಸಿದರು.

ಅಬ್ದುಲ್ ರಝಾಕ್ ಸ್ವಾಗತಿಸಿ, ಮುಹಮ್ಮದ್ ಕೆ. ಧನ್ಯವಾದ ಗೈದರು.

Related posts

2024-25 ನೇ ಸಾಲಿನ ಬೆಳೆ ವಿಮೆಯನ್ನು ಕೃಷಿಕರಿಗೆ ನೀಡುವಂತೆ ಆಗ್ರಹಿಸಿ ಕೊಕ್ಕಡ ಕೃಷಿಕರಿಂದ ಬೆಂಗಳೂರು ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ

Suddi Udaya

ಸಬರಬೈಲು ಶಾಲಾ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ಮಾರ್ಗದಲ್ಲಿ ಹರಿಯುತ್ತಿರುವ ನೀರು: ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಅಗ್ರಹ

Suddi Udaya

ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಬಲಿ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಕಿಂಡರ್‌ಗಾರ್ಟನ್ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಂಭ್ರಮ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya
error: Content is protected !!