22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಭಿನಂದನೆತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಸಾಧನೆಯ ಶಿಖರ: ದ್ವಿತೀಯ ಪಿಯುಸಿಯಲ್ಲಿ 32 ರ‍್ಯಾಂಕ್‌:ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಟಾಪ್ 10 ರ‍್ಯಾಂಕ್‌

ಮೂಡಬಿದಿರೆ: ಏಪ್ರಿಲ್ 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ಕಾಲೇಜಿನ ಒಟ್ಟು 32 ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ಮೊದಲ ಹತ್ತು ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಕಾಲೇಜಿನ ಶಿಸ್ತುಬದ್ಧ ಶಿಕ್ಷಣ ಮತ್ತು ತಾಂತ್ರಿಕ ಆಧಾರಿತ ಬೋಧನೆಯ ಫಲವಾಗಿ ಈ ಕೆಳಗಿನ ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದು ಮಿಂಚಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ತನ್ಮಯಿ ಎ ಕೋಟಿ – 597 ಅಂಕಗಳು (99.50%), ನಕ್ಷಾ ವಿಜೀತ್ ಪಟೇಲ್ – 593 ಅಂಕಗಳು (98.83%),ಗೋಕುಲ್ ಎಂ – 593 ಅಂಕಗಳು (98.83%)ಪೂರ್ವಿ ಪಿ ಶೆಟ್ಟಿ – 593 ಅಂಕಗಳು (98.83%)ವರುಣ್ ಆರ್ – 593 ಅಂಕಗಳು (98.83%)ಸಾತ್ವಿಕ್ ದತ್ತ ಬೋಯ – 592 ಅಂಕಗಳು(98.67%)ಹಂಸಿಕಾ ಹೆಚ್ ಎಸ್ – 592 ಅಂಕಗಳು (98.67%)ಸಮರ್ಥ ಕೆ ಎಸ್ – 592 ಅಂಕಗಳು (98.67%)ಶ್ಯಾಮಕಲ್ಯಾಣ್ ಬೆಣ್ಣೂರು – 592 ಅಂಕಗಳು (98.67%)ತರುಣಿಕಾ ಎಸ್ – 592 ಅಂಕಗಳು (98.67%)ಎಂ ಆರ್ ಅಶ್ಮಿತಾ ರಾಮ್ – 591 ಅಂಕಗಳು(98.50%)ಸ್ವರೂಪ ಎಂ ಸಜ್ಜನಶೆಟ್ಟಿ – 591 ಅಂಕಗಳು (98.50%)ಕುಸುಮ ಎಸ್ – 591 ಅಂಕಗಳು (98.50%)ಭಾರ್ಗವ್ ಎಸ್ ಭಟ್ – 590 ಅಂಕಗಳು (98.33%)ಹಿಮವಂತ್ ಪಿ – 590 ಅಂಕಗಳು (98.33%)ಗುರುಚರಣ್ ಎಂ ಶೆಟ್ಟಿ – 590 ಅಂಕಗಳು (98.33%)ಹಿಮೇಶ್ ಶಂಕರ್ – 590 ಅಂಕಗಳು (98.33%)ಹೇಮಾ ಯು – 589 ಅಂಕಗಳು (98.17%)ಸಂಜನಾ ಹಳ್ಳದಮನಿ – 589 ಅಂಕಗಳು (98.17%)ರಿತಿಶಾ ಜೈರಾಮ್ ಕೊಚ್ರೇಕರ್ – 589 ಅಂಕಗಳು (98.17%)ನಿಖಿಲ್ ಎಸ್ ಎಸ್ – 589 ಅಂಕಗಳು (98.17%)ಲಾಕ್ಷ ವೈ – 589 ಅಂಕಗಳು (98.17%) ಗಳಿಸುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಕೆ.ಎಚ್. ಅದಿತಿ ಭೂಷಣ್: 597 ಅಂಕಗಳು – 99.50%, ಶೇಕ್ ಮೊಹಮ್ಮದ್ ರಮೀಜ್: 595 ಅಂಕಗಳು – 99.17%, ಸುವಿತ್ ಭಂಡಾರಿ: 594 ಅಂಕಗಳು – 99.00%, ಶ್ರಾವಣಿ ಎಂ.: 594 ಅಂಕಗಳು – 99.00%,ಸುಹಾನ ಸಚಿನ್: 593 ಅಂಕಗಳು – 98.83%, ಶಮಂತ್ ಕೆ. ಎಂ.: 592 ಅಂಕಗಳು – 98.67%,ಹೃತಿಕ್ ಎಂ. ಎನ್.: 592 ಅಂಕಗಳು – 98.67%, ಹರ್ಷಿತ್ ಕಲಾಲ್: 592 ಅಂಕಗಳು – 98.67% ವಿಕ್ರಮ್: 592 ಅಂಕಗಳು – 98.67%, ಕಾರ್ತಿಕ್ ಸುರೇಶ್ ಅಗಡಿ: 591 ಅಂಕಗಳು – 98.50% ಅಂಕ ಪಡೆದಿದ್ದಾರೆ.

ಅಧ್ಯಕ್ಷರ ಮೆಚ್ಚುಗೆ: ಈ ಅದ್ಭುತ ಸಾಧನೆಯ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರು, “ನಮ್ಮ ಕಾಲೇಜಿನ ಆಧುನಿಕ ಗುರುಕುಲ ಪದ್ಧತಿ, ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಛಲ ಈ ಯಶಸ್ಸಿಗೆ ಕಾರಣ. ಕೇವಲ ಅಂಕಗಳಿಗಾಗಿ ಮಾತ್ರವಲ್ಲದೆ, ಜ್ಞಾನ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ನಾವು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಈ ಸಾಧನೆ ನಮ್ಮ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಸಂಸ್ಥೆಯ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ವೃಂದದವರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಅಭಿನಂದಿಸಿದ್ದಾರೆ.

Related posts

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

Suddi Udaya

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಉಜಿರೆ ಗ್ರಾಮ ಪಂಚಾಯತ್‌ಗೆ ಶೈಕ್ಷಣಿಕ ಅಧ್ಯಯನ ಭೇಟಿ

Suddi Udaya
error: Content is protected !!