September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೇರಳ ಹೊಟೇಲ್ ಮಾಲಕನ ಹತ್ಯೆ ಪ್ರಕರಣ: ಹೊಟೇಲ್ ಕೆಲಸಗಾರ ಬೆಳ್ತಂಗಡಿಯ ಯುವಕ ಬಂಧನ

ಬೆಳ್ತಂಗಡಿ: ತಾನು ಕೆಲಸ ಮಾಡುತ್ತಿದ್ದ ಕೇರಳದ ಹೊಟೇಲಿನ ಮಾಲಕನನ್ನೇ ಏ.6 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಪೆರ್ದಾಡಿ ನಿವಾಸಿ ಉಮರಬ್ಬ ಎಂಬವರ ಪುತ್ರ ಇರ್ಷಾದ್ (32) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಚಡಯಮಂಗಳ- ಕುರಿಯೋಡು ಸ್ವೈಸಿ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲೀಕ ಶಕೀ‌ರ್ ಹುಸೈನ್ ಎಂಬವರನ್ನು ಇರ್ಷಾದ್ ಎಂಬಾತ ಕೊಲೆ ಮಾಡಿರುವ ಘಟನೆ ನಡೆದಿದೆ.

ಪ್ರಕರಣದ ವಿವರ: ಕುಝಿ ಮಂದಿ ಬಿರಿಯಾಣಿ ಪಾಕ ತಜ್ಞನಾಗಿದ್ದ ಬೆಳ್ತಂಗಡಿಯ ಇರ್ಷಾದ್ ತಾನು ಕೆಲಸ ಮಾಡುತ್ತಿದ್ದ ಹೋಟೇಲ್‌ಗೆ ಬರುತ್ತಿದ್ದ ಅಕ್ಕಿ ಮೂಟೆಯಲ್ಲಿರುವ 50,100,150 ರೂಪಾಯಿಗಳ ಕೂಪನ್ ಗಾಗಿ ನಡೆದ ಜಗಳದಿಂದ ಈ ಕೃತ್ಯವೆಸಗಿದ್ದಾನೆ. ಅಕ್ಕಿಮೂಟೆಯಲ್ಲಿ ಬರುತ್ತಿದ್ದ ಕೂಪನ್ ಒಟ್ಟು ಸೇರಿಸಿ ಮಾಲಕರಿಗೆ ಕೊಡಬೇಕೆಂದು ಹೊಟೇಲ್ ಮಾಲಕ ಕೇರಳದ ಆಕಲ್ ನಿವಾಸಿ ಶಕೀರ್ ಹುಸೈನ್ ನಿರ್ದೇಶನ ನೀಡಿದ್ದರು. ಅದಾಗ್ಯೂ ಇರ್ಷಾದ್ ಕೂಪನ್ ಗಳನ್ನು ತಾನೇ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸುವ ಸಲುವಾಗಿ ಪತ್ನಿಯೊಂದಿಗೆ ಆತ ವಿಶ್ರಾಂತಿ ಪಡೆಯುತ್ತಿದ್ದ ವಸತಿ ಗೃಹದ ಎರಡನೇ ಮಹಡಿಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇರ್ಷಾದ್ ಚಾಕು ತೆಗೆದು ಮಾಲಕನ ಎದೆಗೆ ಬಲವಾಗಿ ಚುಚ್ಚಿದ್ದಾನೆ ಎನ್ನಲಾಗಿದೆ.

ಕೇರಳ ಹೊಟೇಲ್ ಮಾಲೀಕ ಶಕೀರ್ ಹುಸೈನ್ ನನ್ನು ಏ.6 ರಂದು ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿ ಅದೇ ಹೊಟೇಲ್‌ನ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗುವಾಗ ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಹಾಗೂ ಊರವರ ಸಹಕಾರದೊಂದಿದೆ ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿ ಪ್ರಯಾಣಿಸುತ್ತಿದ್ದಾಗ ಇರ್ಷಾದ್ ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕೊಲ್ಲಂ ಜೈಲಿಗೆ ಕಳುಹಿಸಲಾಗಿದೆ.

Related posts

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರ ನಿಯೋಜನೆ: ಪ್ರವಾಸಿಗರ ಮೋಜು ಮಸ್ತಿಗೆ ತಡೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ 25 ವಿದ್ಯಾರ್ಥಿಗಳು ಉತ್ತೀರ್ಣ

Suddi Udaya

ಮೇ 25 : ಪೊಸಂದೋಡಿ ಶ್ರೀಮತಿ ಜಾಜೀವಿ ಮತ್ತು ಪಿ ದುಗ್ಗಪ್ಪ ಗೌಡ ರವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮ: ಸಹಸ್ರ ಚಂದ್ರದರ್ಶನ

Suddi Udaya

ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಅಧ್ಯಕ್ಷರಾಗಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಪ್ರ‌.ಕಾರ್ಯದರ್ಶಿಯಾಗಿ ಶುಭರಾಜ್ ಹೆಗ್ಡೆ ಮರೋಡಿ

Suddi Udaya
error: Content is protected !!