September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ನ್ಯೂ ವೈಬ್ರೆಂಟ್ ಕಾಲೇಜು ಪಿಯು ಫಲಿತಾಂಶದಲ್ಲಿ ಸರ್ವಶ್ರೇಷ್ಠ ಸಾಧನೆ: ಧನುಷ್ ಗುತ್ತಿ 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆ – 1 ರಲ್ಲಿ ಧನುಷ್ ಗುತ್ತಿ 600 ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಸಂಸ್ಥೆಯು ಆರಂಭಗೊಂಡು ತನ್ನ ಎರಡನೇ ಪಿಯು ಫಲಿತಾಂಶದಲ್ಲೇ ರಾಜ್ಯಮಟ್ಟದಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಿರುತ್ತದೆ. ಅಲ್ಲದೆ ಈ ವರ್ಷದ ಜೆ ಇ ಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ಆದಿತ್ಯ ಅನಿಲ್ ಕೆಂಚಣ್ಣವರ್ 99.8044 ಪರ್ಸೆಂಟೈಲ್ ಪಡೆಯುವ ಮೂಲಕ ಮೂಡುಬಿದಿರೆ ತಾಲೂಕಿಗೆ ಪ್ರಥಮ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದರು. ಸಂಸ್ಥೆಯು ಬೋರ್ಡ್ ಪರೀಕ್ಷೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಮತ್ತು ಇಲ್ಲಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ಸತತ ಪರಿಶ್ರಮದ ಫಲವೇ ಈ ಎಲ್ಲ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ವಿಜ್ಞಾನದಲ್ಲಿ ವಿದ್ಯಾರ್ಥಿ ಧನುಷ್ ಗುತ್ತಿ 598, ಸರಸ್ವತಿ ಎಂ. ಸಿ. 593 , ತಸ್ನೀಂ ಎಸ್. ಎಂ. 592, ಯಶಸ್ ಎಸ್ 589, ಕಿಶನ್ ಎಸ್. ಮಾತಾಡ್ 589, ರವಿತೇಜ್ ಎಸ್. 589, ಶ್ರೇಯಸ್ ಯು. ಶಾನಭಾಗ್ 588, ಅನ್ವಿತ್ ಕಾಮತ್ 588, ಅನುಷಾ ಒ. ಸಿ. 588, ಮನ್ವಿತ್ ಎಸ್. ಪದ್ಮಶಾಲಿ 588, ಪ್ರಕೃತಿ ಎಸ್ 587, ವಿವೇಚನ್ ಡಿ. ಎಂ. 587, ಕಾವ್ಯ ಎನ್. ಆರ್. 586, ಶಿವಪ್ರಸಾದ್ ರಟ್ಟಿ 586, ದಿಲೀಪ್ ಆರ್. ಎಂ. 586, ಇಂಚರ ಆರ್. 585, ನಿರೀಕ್ಷಾ ಎಲ್ 585 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 397 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 209 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

“ರಾಜೇಂದ್ರ ಗುತ್ತಿ ಮತ್ತು ಆಶಾ ಗುತ್ತಿ ದಂಪತಿಯ ಮಗನಾದ ಧನುಷ್ ಗುತ್ತಿ ನಾನು” ವಿಜ್ಞಾನ ವಿಭಾಗದಲ್ಲಿ 598 ಅಂಕಗಳನ್ನು ಗಳಿಸಲು ನನ್ನ ಕಾಲೇಜಿನ ಕೊಡುಗೆ ಮಹತ್ತರವಾದುದು. ಕಾಲೇಜಿನಲ್ಲಿ ನಡೆಯುವ ಗೈಡೆಡ್ ಸ್ಟಡಿ ನನಗೆ ಉತ್ತಮ ಅಂಕ ಗಳಿಸಲು ಸಹಾಯ ವಾಯಿತು.” ಎಂಬ ಸಂತಸದ ಮಾತುಗಳನ್ನು ವ್ಯಕ್ತ ಪಡಿಸಿದರು. ಐಐಟಿ ಬಾಂಬೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಇಚ್ಛೆಯನ್ನು ಹೊಂದಿದ್ದೇನೆ.” – ಧನುಷ್ ಗುತ್ತಿ, ಬೆಂಗಳೂರು

ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದರು.

Related posts

ಕಾಶಿಪಟ್ಣ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸ್ವಾಗತ ಗೋಪುರ ಲೋಕಾರ್ಪಣೆ ರೂ. 25ಲಕ್ಷ ಅನುದಾನ ನೀಡಿ ಸಹಕರಿಸಿದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿ ವೀಲ್ ಚಯರ್ ವಿತರಣೆ

Suddi Udaya

ಬೆಳ್ತಂಗಡಿ: ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಓಡಿಲ್ನಾಳ ಸ. ಉ ಪ್ರಾ. ಶಾಲಾ ಸಂಸತ್ತು ಚುನಾವಣೆ

Suddi Udaya

ವಾಣಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya
error: Content is protected !!