September 6, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಏ.16-22: ಶ್ರೀ ಧ.ಮಂ. ಯೋಗ – ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ನಿಂದ ಕಳಸದಲ್ಲಿ 46ನೇ ಬೃಹತ್ ಬೇಸಿಗೆ ಯೋಗೋತ್ಸವ

ಬೆಳ್ತಂಗಡಿ: ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಆರೋಗ್ಯ ಮತ್ತು ನೈತಿಕ ಮೌಲ್ಯಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ಈ ವರ್ಷದ 46ನೇ ಬೃಹತ್ ಬೇಸಿಗೆ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದೊಂದಿಗೆ ಕಳಸ ತಾಲೂಕಿನ ನಗರ ಹಾಗೂ ಹಳ್ಳಿಗಳ ಒಟ್ಟು 50 ಕೇಂದ್ರಗಳಲ್ಲಿ ಏ.16ರಿಂದ ಏ.22ರವರೆಗೆ ಈ ಯೋಗ ಯಜ್ಞವು ಏಕಕಾಲದಲ್ಲಿ ಜರುಗಲಿದೆ.ಈ ಬೃಹತ್ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಏ.16ರಂದು ಬೆಳಿಗ್ಗೆ 11ಕ್ಕೆ ಕಳಸದ ಶ್ರೀ ಕಲ್ಯಾಣ ಕಳಸೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಶ್ರೀ ಕ್ಷೇತ್ರ ಹೊರನಾಡಿನ ರಾಜಲಕ್ಷ್ಮೀ ಬಿ. ಜೋಷಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕಲ್ಯಾಣ ಕಳಸೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಮ್. ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿಬಿರದ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ: ವಿದ್ಯಾರ್ಥಿಗಳಿಗಾಗಿ ಪಂಚಮುಖಿ ಶಿಬಿರ: ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಹಾಗೂ ಅಧ್ಯಾತ್ಮಿಕ ವಿಕಸನಗಳ ಸಮಗ್ರ ಸಮನ್ವಯವಾಗಿದೆ. ಈ ಐದು ಆಯಾಮಗಳ ಸಮತೋಲನ ಬೆಳವಣಿಗೆಯ ಮೂಲಕ ವಿದ್ಯಾರ್ಥಿಗಳು ಸಂಪೂರ್ಣ, ಶಿಸ್ತಿನ ಮತ್ತು ಮೌಲ್ಯಾಧಾರಿತ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇಂದಿನ ಯುವ ಪೀಳಿಗೆಯ ಬೆಳವಣಿಗೆಗಾಗಿ ‘ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರ’ ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಅನುಭವಿ ಯೋಗ ಶಿಕ್ಷಕರಿಂದ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ನೀಡಲಾಗುವುದು. ಕಳಸ ತಾಲೂಕಿನ 50 ಕೇಂದ್ರಗಳಲ್ಲಿ ಏಕಕಾಲಕ್ಕೆ ತರಬೇತಿ ನಡೆಯಲಿದೆ. ಶಿಬಿರದಲ್ಲಿ 2000 ಜನ ಭಾಗವಸಲಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ನ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಉದ್ಯಮಿ ಸುರೇಶ್ ದೇವಾಡಿಗರವರು ತೋಟತ್ತಾಡಿ ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಭಜನಾ ತಂಡದವರಿಗೆ ನೀಡಿದ ಸಮವಸ್ತ್ರದ ಬಿಡುಗಡೆ

Suddi Udaya

ಯೋಧ ಎ ಸಿ ಪಿ ಹವಾಲ್ದಾರ್ ದೇವಪ್ರಸಾದ್ ಗೌಡರವರಿಗೆ ಮೊಗ್ರು ಒಕ್ಕೂಟದ ವತಿಯಿಂದ ಅಭಿನಂದನೆ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya

ಶಿರ್ಲಾಲು: ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ಮಹಿಳೆಗೆ ಜಾತಿ ನಿಂದನೆ: ಪ್ರಕರಣ ದಾಖಲು

Suddi Udaya

ಡಿ. 30: ಬಳಂಜ ಬೊಂಟ್ರೋಟ್ಟು ಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ವಾರ್ಷಿಕ ಪ್ರತಿಷ್ಠಾ ವರ್ಧಂತಿ

Suddi Udaya

ರಾಜ್ಯ ಸರ್ಕಾರ ದ ಜನ ವಿರೋಧಿ ನೀತಿ ಖಂಡಿಸಿ ಚಾರ್ಮಾಡಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya
error: Content is protected !!