September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸರಸ್ವತಿ ಗೋಮಂದಿರ ಲೋಕಾರ್ಪಣೆ: ಅಳಿವಿನಂಚಿನಲ್ಲಿರುವ ದೇಸಿ ಮಲೆನಾಡು ಗಿಡ್ಡ ತಳಿಯ ಗೋವುಗಳನ್ನು ಸಾಕಿ ಬೆಳೆಸುವ ವಿಶಿಷ್ಟ ಯೋಜನೆ :ಕಾಲೇಜು ಕ್ಯಾಂಪಸ್ ನಲ್ಲಿ ಗೋಶಾಲೆ, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ

ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು. ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಜನ್ಮ ದಿನಾಚರಣೆಯ ಶುಭವಸರದಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರವನ್ನು ಲೋಕಾರ್ಪಣೆಗೊಳಿಸಲಾಯಿತು.

ದೇಸಿ ಮಲೆನಾಡು ಗಿಡ್ಡ ತಳಿಯ ಹಸು ಕರುಗಳಿಗೆ ಗೋಪೂಜೆ ನೇರವೇರಿಸಿ,ಗೋಶಾಲೆಗೆ ಚಾಲನೆ ನೀಡಲಾಯಿತು.ಕಾಲೇಜು ಕ್ಯಾಂಪಸ್ ನಲ್ಲಿ ಗೋಶಾಲೆ ಆರಂಭಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆಗೋ ಮಂದಿರವನ್ನು ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ ಆಳ್ವ ಅವರು ಲೋಕಾರ್ಪಣೆಗೊಳಿಸಿ ಮಾತಮಾಡಿ ದೇಸಿ ತಳಿ ಗೋವುಗಳ ಸಂರಕ್ಷಣೆ ಭಾರತೀಯರಾದ ನಮ್ಮ ಆದ್ಯ ಕರ್ತವ್ಯ ಎಂದರು.

ಮುಖ್ಯ ಅತಿಥಿಗಳಾದ ವಿಶ್ರಾಂತ ಪಶು ವೈದ್ಯಾಧಿಕಾರಿ ಆನಂದ ಶೆಟ್ಟಿ ಅವರು ಹಾಗೂ ಮಂಗಳೂರು ಜನತಾ ಬಜಾರ್ ನ ಅಧ್ಯಕ್ಷರಾದ ಕೆ ಪ್ರಸನ್ನ ಭಟ್ ಅವರು ಶುಭಾಶಂಸನೆ ಮಾಡಿದರು. ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ ಕೃಷಿ ಕುಟುಂಬದಿಂದ ಬಂದ ನಾನು ಹೈನುಗಾರಿಕೆಯನ್ನು ಬಹಳವಾಗಿ ಇಷ್ಟ ಪಟ್ಟವನು. ಇದೀಗ ಮಲೆನಾಡು ಗಿಡ್ಡ ಹಸುಗಳನ್ನೇ ನಮ್ಮ ಕ್ಯಾಂಪಸ್ ನಲ್ಲಿ ಸಾಕಿ ಬೆಳೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆನಂದ ಶೆಟ್ಟಿ ವಾತ್ಸಲ್ಯ, ಸುನೀಶ್ ಕುಮಾರ್ ಕಡಂಬು,ಎಕ್ಸೆಲ್ ಸಂಸ್ಥೆಯ ಸಹನಾ ಜೈನ್ ಸೇರಿದಂತೆ, ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕಿ ಅನನ್ಯ ಜೈನ್ ನಿರೂಪಿಸಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ. ಪ್ರಜ್ವಲ್ ಕಜೆ ವಂದಿಸಿದರು.

Related posts

ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಷ್ಠಾಪನೆಗೆ ಮೂಹೂರ್ತ ನಿಗದಿ: ಜ.21ರಿಂದ 3 ದಿನ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಭಾಗಿ

Suddi Udaya

ಕೊಕ್ಕಡ ವಿಶ್ವ ಹಿಂದೂ ಪರಿಷದ್ , ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್, ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಶಿಶಿಲ :2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಹಿರಿಯ ದಲಿತ ಮುಖಂಡ ಎಂ.ದೇವದಾಸ್ ನಿಧನಕ್ಕೆ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿಯಿಂದ ಸಂತಾಪ

Suddi Udaya

ಬೆಳ್ತಂಗಡಿ: ಕೋಟು೯ ರಸ್ತೆ ಬಳಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿ

Suddi Udaya

ಕೊಜಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!