September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

9/11 ಅರ್ಜಿಗಳನ್ನು ಕಾಲ ಮಿತಿಯಲ್ಲಿ ಇತ್ಯರ್ಥಕ್ಕೆ ತಾಲೂಕಿಗೆ ಮೂರು ದಿನಗಳ ಅಧಿಕಾರಿಗಳ ಭೇಟಿಗೆ ಉಸ್ತುವಾರಿ ಸಚಿವರ ಸೂಚನೆ

ಬೆಳ್ತಂಗಡಿ. ಏಕನಿವೇಶನ ಹಾಗೂ 9/11 ಅರ್ಜಿಗಳನ್ನು ದೀರ್ಘಕಾಲದಲ್ಲಿ ಕಚೇರಿಗಳಲ್ಲಿ ಇಟ್ಟುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾದ ದೂರಿನ ಬಗ್ಗೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆದರು. ಸಚಿವರು ಕೂಡಲೇ ಅಧಿಕಾರಿಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿ ಪ್ರಸ್ತುತ ತಾಲೂಕಿಗೆ ಅಧಿಕಾರಿಗಳು ಒಂದು ದಿನ ಮಾತ್ರ ಭೇಟಿ ನೀಡುತ್ತಿದ್ದು. ಮುಂದಿನ ದಿನಗಳಲ್ಲಿ ಮೂರು ದಿನ ತಾಲೂಕಿಗೆ ಅಧಿಕಾರಿಗಳು ಭೇಟಿ ನೀಡಿ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ. ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಟ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ ಕಾಶಿಪಟ್ಟಣ ಹಾಗೂ ದೇವಿ ಪ್ರಸಾದ್ ಶೆಟ್ಟಿ ಅಳದಂಗಡಿ, ಸುದರ್ಶನ್ ಮಂಜೀಲ ಆರಂಬೋಡಿ ಉಪಸ್ಥಿತರಿದ್ದರು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಮಕ್ಕಳಿಂದ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಕನ್ನಡಿಕಟ್ಟೆ ಬಳಿ ಬೈಕ್- ಕಾರು ನಡುವೆ ಭೀಕರ ರಸ್ತೆ ಅಪಘಾತ: ಮಹಿಳೆ ಸಾವು

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ 517ನೇ ಜನ್ಮ ದಿನಾಚರಣೆ

Suddi Udaya

ಅಸೋಸಿಯೇಷನ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಬೆಳ್ತಂಗಡಿ- ಪುತ್ತೂರು ಸೆಂಟರ್ ವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ,ಸಾಧಕರಿಗೆ ಸನ್ಮಾನ, ವಾಹನ ಜಾಥ, ಸಂಭ್ರಮ-2024

Suddi Udaya

ನಿಡ್ಲೆ: ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ ನಿಧನ

Suddi Udaya

ಕನ್ಯಾಡಿ ಗ್ರಾಮದ ಪಾರ್ನಡ್ಕ ದಲ್ಲಿ ದಿ| ರಾಜೇಂದ್ರ ಎಸ್ ಸುರಕ್ಕ್ಯೆಗುತ್ತು ಇವರ ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

Suddi Udaya
error: Content is protected !!