24.7 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಪಿಯುಸಿ ಫಲಿತಾಂಶ: ಎಸ್‌ಡಿಎಂ ಪ.ಪೂ. ‘ರೋವರ್ಸ್ ಮತ್ತು ರೇಂಜರ್ಸ್’ ಘಟಕದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಉಜಿರೆ: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ಇತ್ತೀಚೆಗೆ ಪ್ರಕಟಿಸಿದ 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌.ಡಿ.ಎಂ.) ಪದವಿಪೂರ್ವ ಕಾಲೇಜಿನ ‘ರೋವರ್ಸ್ ಮತ್ತು ರೇಂಜರ್ಸ್’ ಘಟಕದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಮತ್ತು ಘಟಕಕ್ಕೆ ಅಪೂರ್ವ ಕೀರ್ತಿ ತಂದಿದ್ದಾರೆ.

ಪಠ್ಯೇತರ ಚಟುವಟಿಕೆಗಳಾದ ಸಮಾಜ ಸೇವೆ,ಶಿಸ್ತು ಮತ್ತು ಸಾಹಸ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಈ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿಯೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಮಧ್ವಿತ ಬಿ. ಟಿ. ಅವರು 600ಕ್ಕೆ 580 (96.67%) ಅಂಕಗಳನ್ನು ಪಡೆಯುವ ಮೂಲಕ ಘಟಕಕ್ಕೆ ಅಗ್ರಸ್ಥಾನಿಯಾಗಿದ್ದಾರೆ.

ಸಾಧಕರ ವಿವರ:
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಈ ಕೆಳಗಿನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮಧ್ವಿತ ಬಿ. ಟಿ. 580 (96.67%), ಇ. ಸಿ. ವಿಕಾಸ್ 576 (96.00%), ವಿಶಾನ್ ಎನ್. ಗೌಡ 560 (93.33%),ರೋಹಿತ್ ಡಿ. ನಾಯ್ಕ 545 (90.83%), ಸಮೃದ್ ಜೈನ್ 539 (89.83%),ತನ್ಮಯ್ ಎಸ್ 532 (88.57%),ಸಪ್ತಮಿ ಕೆ. ಎಸ್ 522 (87.00%) ಹರ್ಷ ಹೆಚ್. ಎಸ್.515 (85.83%) ಅಂಕಗಳನ್ನು ಪಡೆಯುವ ಮೂಲಕ ಪಠ್ಯೇತರ ಚಟುವಟಿಕೆಗಳು ಶೈಕ್ಷಣಿಕ ಸಾಧನೆಗೆ ಪೂರಕವೇ ಹೊರತು ಮಾರಕವಲ್ಲ ಎಂಬುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.

ವಿಶೇಷವಾಗಿ ಈ ಮೇಲಿನ ಎಲ್ಲಾ ವಿದ್ಯಾರ್ಥಿಗಳು ಇತ್ತೀಚೆಗೆ ದಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ನಡೆಸಿದ ಜಿಲ್ಲಾ ಮಟ್ಟದ ನಿಪುನ್‌ ಪರೀಕ್ಷೆಯಲ್ಲಿಯೂ ಸಹ ಅರ್ಹತೆ ಗಳಿಸಿರುವುದು ಗಮನಾರ್ಹ.
“ಸ್ಕೌಟ್ಸ್ ಮತ್ತು ಗೈಡ್ಸ್ ತತ್ವಗಳನ್ನು ಪಾಲಿಸುತ್ತಾ, ಸಮಯ ಪ್ರಜ್ಞೆ ಮತ್ತು ಕಠಿಣ ಪರಿಶ್ರಮದಿಂದ ಈ ವಿದ್ಯಾರ್ಥಿಗಳು ಮಾದರಿ ಸಾಧನೆ ಮಾಡಿದ್ದಾರೆ, “ಶಿಸ್ತು ಮತ್ತು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡಿರುವ ನಮ್ಮ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿಯೂ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ,” ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳ ಈ ಎರಡೂ ಗಮನಾರ್ಹ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ರೋವರ್ಸ್ ಮತ್ತು ರೇಂಜರ್ಸ್ ಘಟಕದ ನಾಯಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದ್ದಾರೆ.

Related posts

ಜ.19-21: ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

Suddi Udaya

ಉಜಿರೆ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ( ಸಿ.ಬಿ.ಎಸ್‌.ಇ ) ಯಲ್ಲಿ ಶಿಕ್ಷಕರಿಗೆ ಯೋಗ ತರಬೇತಿ

Suddi Udaya

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ, ಪೆಟ್ರೋಲ್-ಡೀಸೆಲ್ ಮಿತವಾಗಿ ಬಳಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Suddi Udaya

ಉಜಿರೆ: ಚರಂಡಿಗೆ ಬಿದ್ದ ಕಾರು

Suddi Udaya

ಕಳೆದ ರಾತ್ರಿ ಸುರಿದ ಗುಡುಗು ಸಹಿತ ಜೋರಾದ ಗಾಳಿ ಮಳೆ: ಮುಂಡಾಜೆ- ಕಲ್ಮಂಜದಲ್ಲಿ 2 ಮನೆಗಳಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya

ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವ

Suddi Udaya
error: Content is protected !!