ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಮಡಂತ್ಯಾರು: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ

ಮಡಂತ್ಯಾರು: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಏಪ್ರಿಲ್ 15ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ಎ.15ರಂದು ಉದ್ಘಾಟನೆಗೊಂಡಿತು.

ಸಮಾರಂಭವನ್ನು ಶಾಸಕ ಹರೀಶ್ ಪೂಂಜ ಅವರು ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆಗಳು ಪೂರಕ. ಹಾಗಾಗಿ ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು, ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದು, ತನ್ನ ಸಾಧನೆಗೂ ಈ ಕಾಲೇಜಿನ ಒತ್ತಾಸೆ ಇದೆ ಎಂಬುದಾಗಿ ತನ್ನ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು.

ಮುಖ್ಯ ಅತಿಥಿ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ದೈಹಿಕ ನಿರ್ದೇಶಕ ಡಾ. ಕರುಣಾಕರ್ ಶೆಟ್ಟಿ ಮಾತನಾಡಿ “ಅನೇಕ ವರ್ಷಗಳಿಂದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಆಯೋಜಿಸುತ್ತ ಈ ಸಂಸ್ಥೆಯು ಬ್ಯಾಡ್ಮಿಂಟನ್ ಆಟಗಾರರನ್ನು ಪ್ರೋತ್ಸಾಹಿಸಿ ಕ್ರೀಡಾಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದೆ. ಪ್ರತಿಭೆಗೆ ಪೂರಕವಾಗಿ ಬೆಳೆಸುವ ಗುಣ ಈ ಸಂಸ್ಥೆಗೆ ಇದೆ”ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.

ಮುಖ್ಯ ಅತಿಥಿಗಳಾದ ಪ್ರೊಫೆಸರ್ ರಾಜನ್ ವಿ ಎನ್, ಫಾ |ಲ್ಯಾರಿ ಪಿಂಟೋ, ಫಾ| ದೀಪಕ್ ಡೇಸಾ, ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಶ್ರೀ ಸೂರಜ್ ಚಾರ್ಲ್ಸ್ ನ್ಯೂನಸ್,ಶ್ರೀ ನೆಲ್ಸನ್ ಲೆಸ್ರಾದೋ, ಶ್ರೀ ವಿಲ್ಸನ್ ರೂಪೇಶ್ ಮೊರಾಸ್ ಉಪಸ್ಥಿತರಿದ್ದು ಶುಭ ಹಾರೈಸಿದರು

ಸೇಕ್ರೆಡ್ ಹಾರ್ಟ್ ಕಾಲೇಜ್ ನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಕಾಶ್ ಡಿಸೋಜ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಈಶ್ವರ್ ಗೌಡ ಧನ್ಯವಾದವಿತ್ತರು. ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸ.ಸಂಘದ-ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಹರೀಶ್ ರಾವ್ ಕಾಯಡ ಆಯ್ಕೆ

Suddi Udaya

ನಾರಾವಿ ಶ್ರೀ ಕ್ಷೇ.ಧ. ಜನಮಂಗಳ ಕಾರ್ಯಕ್ರಮದಡಿಯಲ್ಲಿ ಯು ಶೇಪ್ ವಾಕರ್ ವಿತರಣೆ

Suddi Udaya

ಬೆಳ್ತಂಗಡಿ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ

Suddi Udaya

ಕಳೆಂಜದಲ್ಲಿ ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ಕೊಲೆ ಯತ್ನ ಖಂಡನೀಯ: ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ರ ಕೆ.

Suddi Udaya

ಪಿಡಬ್ಲ್ಯೂ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ- ಶ್ರೀಮತಿ ಚಂಪಾ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಅ.2: ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿರುವ ನಿವೃತ್ತ ಯೋಧ ಮಂಜುನಾಥ ಹಾಗೂ “ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಪುರಸ್ಕೃತ ವಿ.ಕೆ. ವಿಟ್ಲ ರವರಿಗೆ ನಾಗರಿಕ ಅಭಿನಂದನಾ ಸಮಾರಂಭ:ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!