September 6, 2026
Uncategorized

ಎಸ್ಐಆರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಜಾತಂತ್ರದ ಕಗ್ಗೊಲೆ ಮಾಡಲು ಯತ್ನಿಸುತ್ತಿದೆ. ರಕ್ಷಿತ್ ಶಿವರಾಂ

ಬೆಳ್ತಂಗಡಿ. ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಲಾಯಿಲ ಸಂಗಮ ಸಭಾಭವನದಲ್ಲಿ, ನಡೆದ BLA-2 ಹಾಗೂ ಪಕ್ಷದ ಮುಖಂಡರುಗಳಿಗೆ SIR ಮತ್ತು ವೋಟ್ ಮ್ಯಾಪಿಂಗ್ ಬಗ್ಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಗಾರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವರಾಂ ಮಾತನಾಡಿ ಎಸ್‌ಐಆರ್‍‌ ಎನ್ನುವುದು ಬಿಜೆಪಿಯ ವಿರೋಧಿ ಮತಗಳನ್ನೇ ಮತಪಟ್ಟಿಯಿಂದ ಹೊರಹಾಕುವ ಹುನ್ನಾರ. ಚುನಾವಣಾ ಆಯೋಗವು, ‘ಮತದಾರರ ಪಟ್ಟಿಯಲ್ಲಿ ತಪ್ಪುಗಳಿವೆ’ ಅದನ್ನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿದೆ. ಆದರೆ, ಇದು ಪರಿಷ್ಕರಣೆ ಅಲ್ಲ. ಪರಿಷ್ಕರಣೆ ಎಂದರೇನು? ಈಗಿರುವ ಪಟ್ಟಿಯಲ್ಲಿ ತಿದ್ದುಪಡಿ ಮಾಡುವುದು, ಇರುವುದಕ್ಕೆ ಒಂದಷ್ಟು ಸೇರಿಸಿ ಒಂದಷ್ಟು ತೆಗೆದು ಪರಿಷ್ಕರಿಸುವುದು. ಆದರೆ, ಈ ಎಸ್‌ಐಆರ್, ಹೊಸದಾಗಿ ಖಾಲಿ ಕಾಗದದಲ್ಲಿ ಮಾಡುತ್ತಿರುವ ಹೊಸ ಮತದಾರರ ಪಟ್ಟಿ. ಅಂದರೆ, ನೀವು ಈಗಾಗಲೇ 15 ಚುನಾವಣೆಗಳಲ್ಲಿ ವೋಟ್‌ ಮಾಡಿರುವವರಾಗಿದ್ದರೂ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ನೀವು ಪಾಲ್ಗೊಳ್ಳದಿದ್ದರೆ ನಿಮ್ಮ ಹೆಸರು ಡಿಲೀಟ್‌ ಆಗುತ್ತದೆ. ಈ ಮೂಲಕ ಎಸ್ಐಆರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಜಾತಂತ್ರದ ಕಗ್ಗೊಲೆ ಮಾಡಲು ಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮೆಸ್ಕಾಂ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ತರಬೇತಿಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕೆಂದರುತರಬೇತಿ ಮತ್ತು ಮಾಹಿತಿ ಕಾರ್ಯಾಗಾರದಸಂಪನ್ಮೂಲ ವ್ಯಕ್ತಿಗಳಾಗಿಡಾ. ಎಚ್.ವಿ ವಾಸು, ಬೆಂಗಳೂರು ಮೋಹನ್ ಜಿ.ಕೆ, ಮೈಸೂರು ಸಂತೋಷ್‌.ಜಿ, ಬೆಂಗಳೂರು ನಿಜಾರ್‌ ಅಹಮ್ಮದ್, ಬೆಂಗಳೂರು ನಡೆಸಿಕೊಟ್ಟರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಟಣ, ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಉಪಸ್ಥಿತರಿದ್ದರು . ಕಾರ್ಯಾಗಾರದಲ್ಲಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಗ್ರಾಮ ಸಮಿತಿ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಬಿಎಲ್ಎ 2 ಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷ ನಿಷ್ಪಿಷ್ಟ ಸ್ಥಿತಿಗೆ ತಲುಪಿದಾಗ ಪಕ್ಷವನ್ನು ಕಟ್ಟಿ ಬೆಳೆಸಿದವರು ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್: ರಾಜಕೀಯ ನಿವೃತ್ತಿಯೆಂದು ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರಿಂದ ಆಗ್ರಹ: ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

Suddi Udaya

ಮೇ 23 ಕುತ್ಲುರು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಸ್ತಾಂತರ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಡ (ಆಟಿ) ಮೆಗಾ ಡಿಸ್ಕೌಂಟ್ ಸೇಲ್: ಹೊಚ್ಚ ಹೊಸ ಸಂಗ್ರಹದೊಂದಿಗೆ 10% ರಿಂದ 50% ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ: ಉಜಿರೆಯಲ್ಲಿ ಮ್ಯಾರಥಾನ್ ಓಟ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

Suddi Udaya

ಗುಂಡ್ಯ – ಉಪ್ಪಿನಂಗಡಿ ಮಾರ್ಗದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರ ಕೆ.ಎಸ್.ಆರ್.ಟಿ.ಸಿ ಬಸ್ ಸಮಸ್ಯೆ: 2 ದಿನಗಳಲ್ಲಿ ಬಸ್ ಸಮಸ್ಯೆ ಸರಿಪಡಿಸದಿದ್ದಲ್ಲಿ ಎಂಜಿರದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

Suddi Udaya
error: Content is protected !!