September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪುತ್ತೂರುಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಕಲಾವಿದರಿಗೆ ಕರೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದನೆ: ತಿಮರೋಡಿ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ನಾಟಕದಲ್ಲಿ ಮಾಡಿದ ಬುರುಡೆ ಗ್ಯಾಂಗ್ ಕುರಿತ ಹಾಸ್ಯ ನಾಟಕದ ತುಣುಕಿನ ವಿಚಾರದಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಕಲಾವಿದರಿಗೆ ಫೋನ್ ಮೂಲಕ ಕರೆ ಮಾಡಿ ಅವ್ಯಾಚ ಮತ್ತು ಅಸಭ್ಯ ರೀತಿಯಲ್ಲಿ ಬೈದು ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಉಜಿರೆ ಮಹೇಶ್ ಶೆಟ್ಟಿ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಸಾರಾಂಶ: ಕಲಾವಿದ ಸುಂದರ್ ರೈ ಮಂದಾರ ಸ್ನೇಹಿತ ದಿನೇಶ್ ಕೊಡಪದವು ರವರು ವಾಟ್ಸಪ್‌ ನಲ್ಲಿ ಧ್ವನಿಮುದ್ರಿಕೆಯೊಂದನ್ನು ಕಳುಹಿಸಿದ್ದನ್ನು ಸುಂದರ್ ರೈ ಮಂದಾರ ಏ.12 ರಂದು 10 ಗಂಟೆಯ ಸಮಯಕ್ಕೆ ಕೇಳಿಸಿಕೊಂಡಾಗ ಗುರುವಾಯನಕೆರೆ ಪ್ರಜ್ವಲ್ ಮತ್ತು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿರವರು ನಡೆಸಿದ ಫೋನ್ ಕರೆಯ ಸಂಭಾಷಣೆಯುಳ್ಳ ಆಡಿಯೋವನ್ನು ಪ್ರಜ್ವಲ್ ಕಳುಹಿಸಿರುವುದಾಗಿದ್ದು. ಅದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿರವರು ಪ್ರಜ್ವಲ್ ಕುಮಾರ್ ರವರಿಗೆ ಫೋನ್ ಕರೆ ಮಾಡಿ ನಿನ್ನ ಒಂಜಿ ವೀಡಿಯೋ ತೂತೆ(ನಿನ್ನ ಒಂದು ವೀಡಿಯೋ ನೋಡಿದ್ದೇನೆ) ಎಂದು ತುಳು ಭಾಷೆಯಲ್ಲಿ ಮಾತು ಆರಂಭಿಸಿ ನಿನ್ನ ತಂದೆಯ ಕಥೆ ಹೇಳುವುದಾ ಎಂದು ಪ್ರಶ್ನಿಸಿ ಮುಂದುವರೆದು ಬುರುಡೆಯ ಒಂದು ವೀಡಿಯೋ ಮಾಡಿರುತ್ತೀಯಾ ಎಂದು ಕೇಳಿ, “ಅಕ್ಲೆನ ಸಂತಾನ ಮುತ್ತಿಯೆರೆ ಸೂಳೆಬಲ್ಲೆನಾ, ಬುರುಡೆ ಬೇರೆನ ಅಲ್ಲಿನ ಅಮ್ಮೆರೆನಾ’ ‘ ಎಂಬುವುದೆಲ್ಲ ಅವಾಚ್ಯ ಶಬ್ದಗಳಿಂದ ಬೈಯುತ್ತಾ “ಆಯೆ ಉಲ್ಲೆ ಅತ್ತಾ ಕೋಡಪದವು, ಮಂದಾರ ಸುಂದರ್ ರೈ ಮೆಕ್ಲ್ ಶೆಟ್ರ್ ನಕ್ಲೆಗ್ ಪುಟ್ಟಿನಕ್ಲ್ ಅತ್ತ ಎಂದೆಲ್ಲಾ ಕೀಳು ಮಟ್ಟದ ಶಬ್ದಗಳಿಂದ ಬೈದಿರುತ್ತಾರೆ ಸದ್ರಿ ಸಂಭಾಷಣೆಯಲ್ಲಿ ಸುಂದರ್ ರೈ ಗೆ ಬೈದು ದಮ್ಮಿ ಹಾಕಿರುತ್ತಾರೆ. ಇದು ಸುಂದರ್ ರೈ ಗೌರವಕ್ಕೆ ಅಭಿಮಾನಕ್ಕೆ ಧಕ್ಕೆ ಬರುವ ರೀತಿಯಲ್ಲಿ ಬೈದಿದ್ದಲ್ಲದೆ ಸಮಾಜದ ಬೇರೆ ಬೇರೆ ಜಾತಿ ಮಧ್ಯೆ ಗಲಭೆಗಳನ್ನು ದೊಂಬಿಯನ್ನು ದ್ವೇಷವನ್ನು ಉಂಟು ಮಾಡುವ ರೀತಿಯ ಮಾತುಗಳನ್ನಾಡಿರುತ್ತಾರೆ. ತಾಯಿಯ ಬಗ್ಗೆ ಆಕೆಗೆ ಅಪಮಾನವಾಗುವ ರೀತಿಯಲ್ಲಿ,ಹೆಣ್ಣು ಹೆಂಗಸಿನ ಚಾರಿತ್ರ್ಯಕ್ಕೆ ಮಸಿ ಬಳಿಯುವ,ಕಳಂಕ ಬರುವ ಅವಹೇಳನಕರವಾದ ಮಾತನಾಡಿದ್ದು,ಜಾತಿ ವೈಷಮ್ಯಕ್ಕೆ, ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವಂತೇ ಕುಮ್ಮಕ್ಕು ನೀಡಿರುತ್ತಾರೆ. ಸುಂದರ್ ರೈ ಮಂದಾರ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಉತ್ತಮ ಸ್ಥಾನಮಾನವನ್ನು ಹೊಂದಿದ್ದು ಇದೇ ಕಾರಣಕ್ಕೆಈ ರೀತಿಯಾಗಿ ಮಾನಹಾನಿಕರವಾದ ಪದಗಳನ್ನು ಬಳಸಿ ಅವರ ಪತ್ನಿ ಹಾಗೂ ತಾಯಿ ಬಗ್ಗೆ ಕೂಡ ತಿಮರೋಡಿ ಮಹೇಶ್ ಶೆಟ್ಟಿ ಕೆಟ್ಟದಾಗಿ ಮಾತನಾಡಿರುತ್ತಾರೆ.

ಸದ್ರಿಯವರು ತೇಜೋವದೆ, ಮಾನಭಂಗ ಮಾಡಬೇಕು ಎಂಬ ಕುರಿತಾದ ಉದ್ದೇಶದಿಂದಲೇ ಸದ್ರಿ ಕೆಟ್ಟ ಶಬ್ದಗಳನ್ನು ಬಳಸಿದ್ದು ಈ ಸಂಭಾಷಣೆಯಿಂದ ಸುಂದರ್ ರೈ ಮಂದಾರ ಅವರ ಪತ್ನಿ ಹಾಗೂ ತಾಯಿ ಹಾಗೂ ಮನೆಯವರಿಗೆ ತೀವ್ರವಾದ ಆಘಾತವಾಗಿರುತ್ತದೆ, ಮನಸ್ಸಿಗೆ ನೋವಾಗಿರುತ್ತದೆ, ಅಲ್ಲದ ಆರೋಪಿ “ಆಕ್ಲ್‌ ರಡ್ಜ್ ಜನ ಭಾರೀ ರಾವೊಂದು ಉಲ್ಲೇರ್. ಸುಂದರ್ ರೈಕ್ ಲಾ ಉಂಡು, ಕೋಡಪದವುಗ್ ಲಾ ಉಂಡು” ಎಂದು ಪದೇ ಪದೆ ಸುಂದರ್ ರೈ ಮಂದಾರ ಮತ್ತು ದಿನೇಶನ ಹೆಸರು ಹೇಳಿ ಜೀವಬೆದರಿಕೆ ಹಾಕಿರುವುದಾಗಿ”ಅಲ್ಲೆಗ್ ಎನ್ನ ಪೆದಂಬು ಗೊತ್ತಿಜ್ಜಿ’ ಎಂದು ತಾನು ಭಾರೀ ಡೇಂಜರ್ ಎಂಬಂತೇ ಬಿಂಬಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಂದರ್ ರೈ ಮಂದಾರ ಅವರ ಸ್ನೇಹಿತನ ಮೂಲಕ ಪ್ರಜ್ವಲ್‌ ರವರನ್ನು ಸಂಪರ್ಕಿಸಿದಾಗ ಪ್ರಜ್ವಲ್ ಮೊಬೈಲ್ ಸಂಖ್ಯೆಗೆ ಮಹೇಶ್ ಶೆಟ್ಟಿ ತಿಮರೋಡಿ ಏ.11ರಂದು ಸಾಯಂಕಾಲ 6:16 ಗಂಟೆಗೆ ಫೋನ್ ಕರೆ ಮಾಡಿ ಮಾತನಾಡಿರುವುದಾಗಿದೆ ತಿಳಿದುಬಂದಿದೆ.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಾವಿದ ಸುಂದರ್ ರೈ ಮಂದಾರ ನೀಡಿದ ದೂರಿನ ಮೇರೆಗೆ ಏ.15 ರಂದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಲಂ 196(1),352,351(4),79 BNS ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಕುಪ್ಪೆಟ್ಟಿ ಸಮೀಪ ಗುಡ್ಡ ಜರಿದು ಅಪಾಯದ ಸ್ಥಿತಿ ನಿರ್ಮಾಣ

Suddi Udaya

ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

Suddi Udaya

ಮದ್ದಡ್ಕ ಸಮೃದ್ಧಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

Suddi Udaya

ಬದ್ಯಾರುನಲ್ಲಿ ಕಾರುಗಳ ನಡುವೆ ಅಪಘಾತ

Suddi Udaya

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗ ಳ ಒಕ್ಕೂಬಂಗಾಡಿ: :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಬೆಳ್ತಂಗಡಿ ಇದರ ಸಹಯೋಗ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಜು.26: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ಪಂಜಿನ ಮೆರವಣಿಗೆ

Suddi Udaya
error: Content is protected !!