September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಏ.18: ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಮಂದಾರ ಸಂಭ್ರಮ-2026

ಬೆಳ್ತAಗಡಿ; ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ ಇವರ ಶುಭಾಶೀರ್ವಾದಗಳೊಂದಿಗೆ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ಆಯೋಜಿಸುವ ಮಂದಾರ ಸಂಭ್ರಮ-2026 ಏ.18ರಂದು ಬೆಳ್ತಂಗಡಿ ಸಂತೆಕಟ್ಟೆ ಮಾರಿಗುಡಿ ಮೈದಾನದಲ್ಲಿ ಜರಗುವುದು ಎಂದು ಸಂಘಟಕರು ತಿಳಿಸಿರುತ್ತಾರೆ.

ಬೆಳಿಗ್ಗೆ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಗ್ರಾಮ ಸೀಮಿತ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಮಂದಾರ ಟ್ರೋಫಿ-2026 ಜರುಗಲಿದ್ದು ವಾಲಿಬಾಲ್ ಅಂಕಣದ ಉದ್ಘಾಟನೆಯನ್ನು ಬೆಳ್ತಂಗಡಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ ನೆರವೇರಿಸುವರು.

ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.

ಸಂಜೆ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ಆಯೋಜಿಸುವ ಮಂದಾರ ಸಂಭ್ರಮ 2026 ಕಾರ್ಯಕ್ರಮ ಜರುಗಲಿದ್ದು ಉದ್ಘಾಟನೆಯನ್ನು ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇದರ ಧರ್ಮದರ್ಶಿ ಹರೀಶ್ ಆರಿಕೋಡಿ ನೆರವೇರಿಸುವರು. ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಿವಿಧ ಕೇತ್ರದ ಗಣ್ಯರು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಟ ಹಾಗೂ ತುಳುರಂಗಭೂಮಿಯ ಪ್ರಸಿದ್ಧ ಹಾಸ್ಯ ಕಲಾವಿದ, ಕುಸಲ್ದರಸೆ ಖ್ಯಾತಿಯ ನವೀನ್ ಡಿ ಪಡೀಲ್ ರವರು ಮಂದಾರ ತಂಡದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆಗೊಳಿಸಲಿರುವರು.

ಸಾಧಕರಿಗೆ ಸನ್ಮಾನ; ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಖ್ಯಾತ ವೈದ್ಯ ಡಾ. ರವೀಂದ್ರ ಪ್ರಭು, ಬೆಳ್ತಂಗಡಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ರಾಷ್ಟಿçÃಯ ಕಬಡ್ಡಿ ತೀರ್ಪುಗಾರರಾದ ಕೃಷ್ಣಾನಂದ ರಾವ್ ಮುಂಡಾಜೆ ರವರುಗಳಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Suddi Udaya

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾದರಿಯಾದ ಸುಪ್ರಾಶ್ವರಾಜ್ ಜೈನ್ ಶಿರ್ಲಾಲು

Suddi Udaya

ನಾವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಆಯ್ಕೆ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬಟ್ಲಡ್ಕ ಯುನಿಟ್ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

Suddi Udaya

ಮೇ 31: ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ ಶೋರೂಮ್ ಉದ್ಘಾಟನೆ

Suddi Udaya
error: Content is protected !!