September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ 18ನೇ ವರ್ಷದ ವಾರ್ಷಿಕೋತ್ಸವ-ವಿಶ್ವಕರ್ಮ ಪೂಜೆ

ಅಳದಂಗಡಿ: ಸಂಘದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದ್ದಲ್ಲಿ ಅಂತಹ ಸಂಘಟನೆ ಒಂದಾಗಲು ಸಾಧ್ಯವೇ ಇಲ್ಲ. ಆದರೆ ಅಳದಂಗಡಿಯ ಈ ಸಂಘಟನೆ ಆರಂಭದಿAದಲೂ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಈ ಹಂತಕ್ಕೆ ಬೆಳೆದು ನಿಂತಿದೆ ಎಂದು ಕಟಪಾಡಿ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಗಳವರು ನುಡಿದರು.

ಅವರು ಏ.17ರಂದು ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಇದರ ೧೮ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿಶ್ವಕರ್ಮ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನಗೈದು ಹೇಳಿದರು.

ಶಾಸಕ ಹರೀಶ್ ಪೂಂಜ ಭಾಗವಹಿಸಿ ಮಾತನಾಡಿ, ಪೂಜ್ಯ ಸ್ವಾಮೀಜಿಯವರ ಆಗಮನದ ಸುದ್ದಿ ಕೇಳಿ ಅವರಿಂದ ಆಶೀರ್ವಾದ ಪಡೆದು ತೆರಳುವ ನಿಮಿತ್ತ ನಾನು ಆಗಮಿಸಿದ್ದೇನೆ. ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ಕಟ್ಟಡ ನಿರ್ಮಾಣ ಹಂತದಲ್ಲಿ ರೂ. ೧೦.ಲಕ್ಷ ದೇಣಿಗೆಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಎಸ್.ಕೆ.ಜಿ. ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಮಾತನಾಡಿ, ಅವಮಾನ ಮತ್ತು ಸನ್ಮಾನ ಎರಡೂ ವಿಭಿನ್ನ ಸನ್ನಿವೇಶವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗಲೇ ಸಂಘಟನೆ ಬಲಗೊಳ್ಳುತ್ತದೆ. ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಎಸ್.ಕೆ.ಜಿ. ಕೋ ಆಪರೇಟಿವ್ ಸೊಸೈಟಿ ವತಿಯಿಂದ ದೊಡ್ಡ ಪ್ರಮಾಣದ ದೇಣಿಗೆ ನೀಡುವಲ್ಲಿ ನಾನು ಶ್ರಮಿಸುತ್ತೇನೆ ಎಂದರು.

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ಅಧ್ಯಕ್ಷ ಸುಂದರ ಆಚಾರ್ಯ ಕುದ್ಯಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವೇಲಾಪುರಿ ವಿಶ್ವನಾಥ ಶರ್ಮ, ಸ್ವಸ್ತಿಕ್ ಆರ್ಯ ಶುಭ ಹಾರೈಸಿದರು.

ಉದಯ ಭಾಸ್ಕರ್ ಸುಳ್ಯ ನಿರೂಪಸಿದರು. ಗಣೇಶ್ ಆಚಾರ್ಯ ಸ್ವಾಗತಿಸಿದರು. ಮಂಜುನಾಥ ಆಚಾರ್ಯ ಪ್ರಸ್ತಾವಿಸಿ ವರದಿ ವಾಚಿಸಿದರು. ಸದಾನಂದ ಆಚಾಯಾ ವಂದಿಸಿದರು.

Related posts

ಉಜಿರೆ ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಎಫ್.ಡಿ.ಪಿ ಕಾರ್ಯಾಗಾರದ ಮಾಹಿತಿ ಕೈಪಿಡಿ ಬಿಡುಗಡೆ

Suddi Udaya

ಕಳೆಂಜ: ಮಣಿಗೇರಿ, ಕುಲಾಡಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಅಂತಿಮ

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಚಂದ್ರಹಾಸ ಬಳಂಜರಿಗೆ ಪ್ರಶಸ್ತಿ

Suddi Udaya

ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಗೆ ಮಂಜುಶ್ರೀ ಸೀನಿಯರ್ ಚೇಂಬರಿಂದ ಸನ್ಮಾನ

Suddi Udaya

ಯೋಗಾಸನ ಸ್ಪರ್ಧೆಯಲ್ಲಿ ಶ್ರೀ ಧ. ಮ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಬಿ.ಸಿ.ರೋಡ್ ಬಸ್‌ ನಿಲ್ದಾಣದಲ್ಲಿ ಯುವತಿಯ ಹತ್ಯೆ : ಆರೋಪಿ ಪರಾರಿ

Suddi Udaya
error: Content is protected !!