September 6, 2026
ಧಾರ್ಮಿಕವರದಿ

ಬಳಂಜ ಶಾಲಾ ಶಿಕ್ಷಣ ಚಟುವಟಿಕೆಗಳಿಗಾಗಿ,ಯಕ್ಷಪ್ರಿಯ ಸಮಿತಿಯಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ “ನಾಗಾರತಿ”:ಅರುವ ಕೊರಗಪ್ಪ ಶೆಟ್ಟಿ,ಲಲಿತಾ ಟೀಚರ್,ಉಸ್ಮಾನ್ ಕೆ ಅವರಿಗೆ ಸನ್ಮಾನ,ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ:ಸಾವಿರಾರು ಕಲಾಭಿಮಾನಿಗಳಿಂದ ಯಕ್ಷಗಾನ ವಿಕ್ಷಣೆ,ಅಚ್ಚುಕಟ್ಟಾದ ವ್ಯವಸ್ಥೆ,ಸಾರ್ವಜನಿಕ ಅನ್ನಸಂತರ್ಪಣೆ

ಬಳಂಜ:ಯಕ್ಷಪ್ರಿಯ ಸಮಿತಿ ನಾಲ್ಕೂರು-ಬಳಂಜ ಇದರ ಸಹಯೋಗದೊಂದಿಗೆ ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ನಾಲ್ಕೂರು-ಬಳಂಜ, ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಜ್ಯೋತಿ ಮಹಿಳಾ ಮಂಡಲ,ಊರವರ ಹಾಗೂ ದಾನಿಗಳ ಸಹಕಾರದೊಂದಿಗೆ ಬಳಂಜ ಶಾಲಾ ಶಿಕ್ಷಣ ಚಟುವಟಿಕೆಗಳ ಸಹಾಯಾರ್ಥವಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದ “ನಾಗಾರತಿ” ಯಕ್ಷಗಾನ ಬಯಲಾಟವು ಅತ್ಯಂತ ವೈಭವದಿಂದ ಬಳಂಜ ಯುವಕ ಮಂಡಲದ ಮುಂಬಾಗದಲ್ಲಿ ಎ.18ರಂದು ನಡೆಯಿತು.

ಬಳಂಜ ಒಂದು ವಿಶೇಷವಾದ ಊರು. ಹಲವಾರು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಊರು ಬಳಂಜ. ಹಾಗಾಗಿ ಇಲ್ಲಿನ ಕಾರ್ಯಕ್ರಮ ಅತ್ಯಂತ ವಿಶೇಷ ಮತ್ತು ವಿನೂತನವಾಗಿ ಕೂಡಿರುತ್ತದೆ.ಕಳೆದೆರೆಡು ವರ್ಷದ ಹಿಂದೆ ಬಳಂಜ ಶಾಲೆಯಲ್ಲಿ ಪ್ರಾರಂಭಗೊಂಡ ಆಂಗ್ಲಮಾಧ್ಯಮ ಶಾಲೆಯಲ್ಲಿ ಈಗಾಗಲೇ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಗೊಂಡು ಉಚಿತ ಶಿಕ್ಷಣದೊಂದಿಗೆ ಗುಣಮಟ್ಟದ, ಸಂಸ್ಕಾರಯುತವಾದ ವಿದ್ಯೆ ಸಿಗುತ್ತಿದೆ. ಹಾಗಾಗಿ ಶೈಕ್ಷಣಿಕವಾಗಿ ಬಳಂಜ ಶಾಲೆಗೆ ಸಹಕಾರ,ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯಕ್ಷಪ್ರಿಯ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರೋತ್ಸಾಹದೊಂದಿಗೆ ಯಕ್ಷಗಾನ ಆಯೋಜಿಸಿ ಸಹಕಾರ ನೀಡುವ ಒಳ್ಳೆಯ ಉದ್ದೇಶ ಊರವರ ಮೆಚ್ಚುಗೆಗೆ ಪಾತ್ರವಾಯಿತು.

ಸನ್ಮಾನ:ಯಕ್ಷರಂಗ ವೇದಿಕೆಯಲ್ಲಿ ಯಕ್ಷಗಾನದ ಭೀಷ್ಮ ಎಂದೆ ಪ್ರಸಿದ್ದಿ ಪಡೆದ ಅರುವ ಕೊರಗಪ್ಪ ಶೆಟ್ಟಿ,ನಿವೃತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಲಿತಾ ಟೀಚರ್, ಹಿರಿಯರಾದ ಉಸ್ಮಾನ್ ಮಾಸ್ಟ್, ಹಿರಿಯ ಪುರುಷ ಕಲಾವಿದ ಚೆನಮು ಪೂಜಾರಿ ನಾಲ್ಕೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಗೌರವಾರ್ಪಣೆ:ಬಳಂಜ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿಯರಾದ ಹೇಮ ರವೀಂದ್ರ ಅಮೀನ್,ಕೀರ್ತಿ, ಶಾಲೆಯ ಅಡುಗೆ ಸಿಬ್ಬಂದಿಗಳಾದ ಜಯಶ್ರೀ,ನವೀಲ,ಧನವತಿ,ಸಹಾಯಕಿ ಗೋಪಿ ಇವರನ್ನು ಗೌರವಿಸಲಾಯಿತು. ಯಕ್ಷಗಾನಕ್ಕೆ ವಿಶೇಷವಾಗಿ ಸಹಕಾರ ನೀಡಿದ ಕ್ರೀಡಾಪಟು ಅಶ್ರಫ್ ಬಳಂಜ‌ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ,ಕಾರ್ಯದರ್ಶಿ ರತ್ನರಾಜ್ ಜೈನ್ ಪೆರಂದಬೈಲು, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ,ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ ನಿಟ್ಟಡ್ಕ, ಶಿಕ್ಷಣ ಟ್ರಸ್ಟ್ ಪ್ರವೀಣ್ ಕುಮಾರ್ ಹೆಚ್‌ ಎಸ್, ಕೃಷಿಕ ರಮಾನಾಥ ರೈ ಪಂಬಾಜೆ,ಉದ್ಯಮಿ ಪ್ರದೀಪ್ ಕೋಟ್ಯಾನ್, ಇಂಜಿನಿಯರ್ ಸೂರಾಜ್ ಹಾನಿಂಜ, ಯಕ್ಷಪ್ರಿಯ ಸಮಿತಿ ನಾಲ್ಕೂರು ಬಳಂಜ ಇದರ ಅಧ್ಯಕ್ಷ ಸಂಜೀವ ಶೆಟ್ಟಿ,ಬಳಂಜ ಗ್ರಾ.ಪಂ ಮಾಜಿ ಸದಸ್ಯ ರವೀಂದ್ರ ಬಿ ಅಮಿನ್, ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಮಿತಿ ಪ್ರಮುಖರಾದ ಸುನಿಲ್ ಶೆಟ್ಟಿ ನಾಲ್ಕೂರು,ಪುರಂದರ ಪೂಜಾರಿ ಪೆರಾಜೆ, ರಾಮಣ್ಣ ಹೆಗ್ಡೆ ತೋಟದಪಲ್ಕೆ, ಹರೀಶ್ ಪೂಜಾರಿ ಮಜ್ಜೇನಿ,ವಸಂತ ಪೂಜಾರಿ ನಿರೋಳ್ಬೆ,ಪ್ರವೀಣ್ ದೇವಾಡಿಗ ಗಾಂದೋಟ್ಟು, ಹರ್ಷಿತ್ ದೇವಾಡಿಗ ಗಾಂದೋಟ್ಟು , ಜಗದೀಶ್ ಹೆಗ್ಡೆ ಗಾಂಧಿನಗರ, ಯಶವಂತ್ ಹೆಗ್ಡೆ ಗಾಂಧಿನಗರ,ಸದಾನಂದ ತೋಟದಪಲ್ಕೆ, ಸತೀಶ್ ದೇವಾಡಿಗ ಶಾರಬೈಲು,ಸುಂದರ ಹೆಗ್ಡೆ ಬಳಂಜ,ಹರೀಶ್ ಟಿಕೆ, ಅಭಿಜಿತ್ ಶೆಟ್ಟಿ,ಅಶ್ರೀತ್ ಶೆಟ್ಟಿ, ನವೀನ್ ತೋಟದಪಲ್ಕೆ,ಪ್ರಶಾಂತ್ ಶೆಟ್ಟಿ ಕಜೆಕೋಡಿ,ರಾಜು ದೇವಾಡಿಗ ಅಟ್ಲಾಜೆ,ಅಶೋಕ್ ಕುಲಾಲ್ ತೋಟದಪಲ್ಕೆ, ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಚಂದ್ರಪ್ಪ‌ ಅವರು ಕಾರ್ಯಕ್ರಮ ನಿರೂಪಿಸಿ,ಚೇತನಾ ಜೈನ್ ಸನ್ಮಾನಪತ್ರ ವಾಚಿಸಿ,ರವೀಂದ್ರ ಬಿ ಅಮೀನ್ ವಂದಿಸಿದರು.

Related posts

ಉಜಿರೆಯಲ್ಲಿ ಗಾಳಿ- ಮಳೆಗೆ ವಾಹನಗಳ ಮೇಲೆ ಬಿದ್ದ ಮರ, ಒರ್ವರಿಗೆ ಗಾಯ, ಸಂಚಾರ ಅಸ್ತವ್ಯಸ್ಥ

Suddi Udaya

ಉಜಿರೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಂಗಳೂರು ಬಂದರಿಗೆ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪೂರ್ಣ ಪ್ರಮಾಣದ ಸಭೆ

Suddi Udaya

ಮಚ್ಚಿನ :ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ರೂ.4 ಕೋಟಿ ಅನುದಾನ ಮಂಜೂರು

Suddi Udaya

ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದ ಉಜಿರೆಯ ಎಬಿವಿಪಿ ನಾಯಕರ ಮೇಲೆ ಎಫ್‌ಐಆರ್ ದಾಖಲು

Suddi Udaya

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya
error: Content is protected !!