September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಂಕಕಾರಂದೂರು: ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿಯವರಿಗೆ ಸನ್ಮಾನ

ತೆಂಕಕಾರಂದೂರು: ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿಯವರನ್ನು ತೆಂಕಕಾರಂದೂರುವಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ನಾಗಾರತಿ ಯಕ್ಷಗಾನದ ಯಕ್ಷರಂಗ ವೇದಿಕೆಯಲ್ಲಿ ಎ 19ರಂದು ಗೌರವಿಸಿ, ಸನ್ಮಾನಿಸಲಾಯಿತು.

ಡಾ. ಸದಾನಂದ ಪೂಜಾರಿಯವರ ಸಾಧನೆ ಬಗ್ಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಯಿಲಪ್ಪ ಪೂಜಾರಿ ದಂಪತಿ, ರಮಾನಾಥ ರೈ, ಶೀಲಾವತಿ ಲಿಂಗಪ್ಪ ಪೂಜಾರಿ, ಉದ್ಯಮಿ ಸಂತೋಷ್ ಹೆಗ್ಡೆ, ಮಾರುತಿ ನಿಲಯ,ಗುತ್ತಿಗೆದಾರ ರಫೀಕ್ ತೆಂಕಕಾರಂದೂರು, ಉದ್ಯಮಿ ಖಾಸಿಂ ಕಟ್ಟೆ, ವಿಷ್ಣು ಸಂಪಿಗೆತ್ತಾಯ ದಂಪತಿ, ಉದ್ಯಮಿ ಜಿನ್ನಪ್ಪ ಪೂಜಾರಿ ಕಾಪಿನಡ್ಕ, ಗೆಜ್ಜೆಗಿರಿ ಮೇಳದ ಮ್ಯಾನೇಜರ್ ನಿತಿನ್ ತೆಂಕಕಾರಂದೂರು, ವಿದ್ಯಾನಂದ ಅಂಗಡಿಬೆಟ್ಟು,ರಮಾನಂದ ಬೆಂಗಳೂರು, ಬೇಬಿ ಪೂಜಾರಿ ಪುಣ್ಕೆತ್ಯಾರು,ಲೀಲಾ ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.

ಬಳಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

Related posts

ಬೆಳ್ತಂಗಡಿ ಪಿಎಂ ಶ್ರೀ ಮಾದರಿ ಶಾಲಾ ವಾರ್ಷಿಕೋತ್ಸವ

Suddi Udaya

ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ರಸಪ್ರಶ್ನೆ ಕ್ವಿಜ್ ಸ್ಪರ್ಧೆ: ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿನಿ ಕು. ಮನ್ವಿ.ಕೆ. ಆರ್ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya

ಅಳದಂಗಡಿ ಪೇಟೆಯಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ

Suddi Udaya

ಉಜಿರೆ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಸಚಿವರ ಸಂವಾದ

Suddi Udaya

ಗುರಿಪಳ್ಳ ಒಕ್ಕೂಟದ ವತಿಯಿಂದ ನಿಡಿಗಲ್ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

Suddi Udaya

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!