September 6, 2026
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಏ.26: ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ಸ್ ಶುಭಾರಂಭ

ಅಳದಂಗಡಿ: ಇಲ್ಲಿಯ ಶ್ರೀ ಗೌರೀಶ್ವರ ಆವರಣದಲ್ಲಿ “ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ಸ್ ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್‌ಗಳು, ಕಂಪೌಂಡ್ ವಾಲ್‌ಗಳು,ಕಾಂಕ್ರೀಟ್ ಕಂಬಗಳು, ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳ ತಯಾರಿಕಾ ಕಾರ್ಖಾನೆಯ ಉದ್ಘಾಟನಾ ಸಮಾರಂಭವು ಏ.26ರಂದು ಜರುಗಲಿದೆ ಎಂದು ಸಂಸ್ಥೆಯ ಪಾಲುದಾರರಾದ ಅವನೀಶ ಕಟ್ಟೂರು, ಬಿ.ಇ. ಮತ್ತು ಅನುರುದ್ಧ ಕಟ್ಟೂರು, ಬಿ.ಇ.(ಸಿವಿಲ್) ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಂಕ್ರೀಟ್ ಸಾಲಿಡ್ ಬ್ಲಾಕ್ಸ್ 4″, 6″, 8″,ಕಾಂಕ್ರೀಟ್ ಕಂಪೌಂಡ್ ವಾಲ್,ಕಾಳುಮೆಣಸು ಕಂಬ,ಬೇಲಿ ಕಂಬ ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳನ್ನು ಲೋಡೀಂಗ್ ಮತ್ತು ಅನ್ಲೋಡಿಂಗ್ ಸೌಲಭ್ಯ ಇರುವ ಕ್ರೇನ್ ಮೂಲಕ ಡೆಲಿವರಿ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಉದ್ಘಾಟನೆಯನ್ನು ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಭಾಗವಹಿಸಲಿರುವರು.

ಉದ್ದಿಮೆಯ ವಿಶೇಷತೆಗಳು:
ಕಾಂಕ್ರೀಟ್ ಸಾಲಿಡ್ ಬ್ಲಾಕುಗಳನ್ನು ಮೊದಲನೇ ಮಹಡಿಗೆ ಲಾರಿಯಿಂದ ನೇರವಾಗಿ ಸ್ವಯಂಚಾಲಿತ ಯಂತ್ರದ ಮೂಲಕ ಇಡುವುದು.ಅತ್ಯಾಧುನಿಕ ರೀತಿಯಲ್ಲಿ ತಯಾರಿಸಿ ಕ್ಯೂರಿಂಗ್ ಮಾಡಲಾದ ಕಂಪೌಂಡ್ ವಾಲ್ಗಳನ್ನು ಅಳವಡಿಸಿಕೊಡುವುದು.ವೈಜ್ಞಾನಿಕ ರೀತಿಯಲ್ಲಿ ಕಾಳುಮೆಣಸು ಬೆಳೆಯಲು ಕಾಂಕ್ರೀಟ್ ಕಂಬಗಳನ್ನು ಅಳವಡಿಸಿಕೊಡುವುದು.ಬೇಲಿ ಕಂಬಗಳು, “ವೈ” ಕಂಬಗಳು, ಟಾಯ್ಲೆಟ್ ಪಿಟ್‌ಗಳು, ಲಿಂಟಲ್‌ಗಳು, ವಾಸ್ತು ರೀತಿಯಲ್ಲಿ ತುಳಸಿಕಟ್ಟೆ ಮತ್ತು ಇತರೇ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಿ ಕೊಡುವುದು.

Related posts

ಸಂಬೋಳ್ಯದ ಮೃತ ಬಾಲಕ ಸುಮಂತ್ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ಒಂದು ದಿನದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮ: ಕಲಿಕೆಯ ನಿಖರತೆಗೆ ಅತ್ಯಾಧುನಿಕ ಮೌಲ್ಯಮಾಪನ ಪೂರಕ: ಎಸ್. ಎನ್. ಕಾಕತ್ಕರ್

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಬಜಿರೆ: ನಾಟಿ ವೈದ್ಯ ದುಗ್ಗಪ್ಪ ಗೌಡ ನಿಧನ

Suddi Udaya

ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ನಿಧನಕ್ಕೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya
error: Content is protected !!