September 18, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಡ ರಾತ್ರಿ ಹಂಚು ತೆಗೆದು ದೇಗುಲದೊಳಗೆ ನುಗ್ಗಿ ದಾಂಧಲೆ

ಬಳಂಜ: ತಡರಾತ್ರಿ ಕಿಡಿಗೇಡಿಯೊಬ್ಬ ಏಕಾಎಕಿ ದಾಂಧಲೆ ಎಬ್ಬಿಸಿ, ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಕ್ಕೆ ನುಗ್ಗಿ ದೇವರ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಎ.22ರಂದು ತಡರಾತ್ರಿ ನಡೆದಿದೆ.

ಘಟನೆ ವಿವರ: ಕಳೆದ ರಾತ್ರಿ ಸಮಯ ಎರಡು ಗಂಟೆಗೆ ಕಪ್ಪು ಕಲರಿನ ಥಾರ್ ವಾಹನದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದ ಅಜೇಯ್ ಎಂಬ ಕೀಡಿಗೇಡಿ “ಎನನ್ ಬಚಾವ್ ಮಲ್ಪಿ” ಎಂದು ಜೋರಾಗಿ ಕೂಗಾಡಿ ಮನೆಗೆ ನುಗ್ಗಲು ಯತ್ನಿಸಿದಾಗ ಮನೆಯರು ಜೋರು ಮಾಡಿದ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ಕೀಡಿಗೇಡಿ ಬಳಂಜ ದೇವಸ್ಥಾನದ ಪವಿತ್ರವಾದ ದೇವರ ಜಲಕದ ಕೆರೆಗೆ ಹಾರಿ ಅಲ್ಲಿಂದ ಸೀದಾ ದೇವಸ್ಥಾನಕ್ಕೆ ಬಂದು ಕಂಬದ ಮೂಲಕ ದೇವಸ್ಥಾನದ ಮೇಲೆ ಹೋಗಿ ಹಂಚು ತೆಗೆದು ಒಳನುಗ್ಗಿ ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು ದೈವದ ಮಣೆ ಮಂಚದಲ್ಲಿದ್ದ ಘಂಟಾಮಣಿಯನ್ನು ತೆಗೆದು ದೇವಸ್ಥಾನ ಮೇಲ್ಚಾವಣಿಯಲ್ಲಿ ಹಂಚುಗಳ ಪಕ್ಕದಲ್ಲಿ ಇಟ್ಟು ವಿಕೃತಿ ಮೆರೆದಿದ್ದಾನೆ.

ಬಳಿಕ ದೇವಸ್ಥಾನ ತೀರ್ಥ ಮಂಟಪದ ಬಳಿಯಿರುವ ದೊಡ್ಡ ಘಂಟೆಯನ್ನು ಬಾರಿಸಿ, ಗೋಪಾಲಕೃಷ್ಣ ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹವನ್ನು ತೆಗೆದು ನೆಲಕ್ಕೆ ಎಸೆದು ಭಗ್ನಗೊಳಿಸಿದ್ದಾನೆ. ಗುಡಿಯೊಳಗಿದ್ದ ದೇವರ ಪರಿಕರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ವಿಕೃತಿ ಮರೆದಿದ್ದಾನೆ.

ಈ ಘಟನೆಯ ಬಗ್ಗೆ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್ ಅವರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯಿಂದ ಸ್ಥಳೀಯರ ದೇವಸ್ಥಾನದ ಭಕ್ತ ವರ್ಗದಲ್ಲಿ ದಿಗ್ಭ್ರಮೆ ಮೂಡಿಸಿದ್ದು ಈ ಘಟನೆಯಿಂದ ಆತಂಕ ಕೂಡ ನಿರ್ಮಾಣವಾಗಿದೆ.

ಪೋಲಿಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಿಡಿಗೇಡಿಯ ಈ ಕೃತ್ಯಕ್ಕೆ ಕಾರಣವೇನು ಎಂಬುದು ನಿಗೂಢವಾಗಿದೆ.ಇತ್ತಿಚೀನ ದಿನಗಳಲ್ಲಿ ರಾತ್ರಿ ತಿರುಗುವ ವಾಹನ, ಗಾಂಜಾ, ಡ್ರಗ್ಸ್ ಬಗ್ಗೆ ಗಾಳಿ ಸುದ್ದಿಯಿದ್ದು ಇದರ ಬಗ್ಗೆಯೂ ತನಿಖೆ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೀಡಿಗೇಡಿಯ ಕಪ್ಪು ಬಣ್ಣದ ಥಾರ್ ವಾಹನ ಸುಬ್ರಹ್ಮಣ್ಯ ಭಟ್ ಅವರ ಮನೆಯಂಗಳದಲ್ಲಿದೆ.

Related posts

ಕಲ್ಮಂಜ ಶ್ರೀ ಸತ್ಯನಾರಾಯಣ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

Suddi Udaya

ನಾರಾವಿ ಗ್ರಾ.ಪಂ. ನಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

Suddi Udaya

ಪಿಲ್ಯ: ಉದ್ಯಮಿ ಆರಿಸ್ ಬಿಜೆಪಿ ಸೇರ್ಪಡೆ

Suddi Udaya

ಪಡಂಗಡಿ ಸ್ವಾತಂತ್ರ್ಯ ಹೋರಾಟಗಾರ ದಿ. ಭೋಜರಾಜ ಹೆಗ್ಡೆಯವರ ಸೊಸೆ ವನಿತಾ ಹೃದಯಾಘಾತದಿಂದ ನಿಧನ

Suddi Udaya

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬಂದಾರು ಗ್ರಾ.ಪಂ. ಅಧ್ಯಕ್ಷರಾಗಿ ದಿನೇಶ್ ಗೌಡ , ಉಪಾಧ್ಯಕ್ಷರಾಗಿ ಪುಷ್ಪಾವತಿ ಆಯ್ಕೆ

Suddi Udaya
error: Content is protected !!