ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ರಾಜ್ಯಮಟ್ಟದ ಹ್ಯಾಂಡ್‌ಬಾಲ್ : ಉಜಿರೆಯ ಎಸ್.ಡಿ.ಎಂ ಗೆ ಅವಳಿ ಪ್ರಶಸ್ತಿ

ಉಜಿರೆ: ಮಂಡ್ಯ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಆಯೋಜಿಸಿದ್ದ 42ನೇ ರಾಜ್ಯಮಟ್ಟದ ಮಹಿಳೆ ಹಾಗೂ ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಮಹಿಳೆಯರ ಹಾಗೂ ಪುರುಷರ ತಂಡ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಅವಳಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಫೈನಲ್ ಹಂತದ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಉಜಿರೆ ಎಸ್.ಡಿ.ಎಂ ತಂಡದ ದಕ್ಷಿಣ ಕನ್ನಡ ಜಿಲ್ಲೆಯು ಹಾಸನ ಮಹಿಳೆಯರ ತಂಡವನ್ನು ಎದುರಿಸಿ 5 – 6 ಅಂಕಗಳ ಅಂತರದಿಂದ ದ್ವಿತೀಯ ಸ್ಥಾನವನ್ನು ಪಡೆಯಿತು. ಹಿಂದೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತುಮಕೂರಿನ ಪಾವಗಡ ಮಹಿಳಾ ತಂಡವನ್ನು ಸೋಲಿಸುವ ಮೂಲಕ ತಂಡ ಜಯಶಾಲಿಯಾಗಿತ್ತು. ಜಿಲ್ಲೆಯನ್ನು ಪ್ರತಿನಿಧಿಸಿದ ಮಹಿಳಾ ತಂಡದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ 13 ಜನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಪ್ರಶಸ್ತಿ ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ವರ್ಷಿತ, ರಶ್ಮಿ , ಮನಿಷಾ, ಸುರಕ್ಷಾ ಆಚಾರ್ಯ, ಪಲ್ಲವಿ , ಧನುಶ್ರೀ ಎಚ್ ಆರ್ , ಸಹನಾ , ಭೂಮಿಕಾ ಶೆಟ್ಟಿ, ಪೂಜಾಶ್ರೀ , ಸಿಂಚನ , ಸ್ಪೂರ್ತಿ ಎನ್.ಆರ್ , ಸುಪ್ರಿಯಾ ಎಚ್.ಎಸ್ ಭಾಗವಹಿಸಿದ್ದರು.

ಪುರುಷ ವಿಭಾಗದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಏಳು ಜನ ವಿದ್ಯಾರ್ಥಿಗಳನ್ನು ಹೊಂದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಸೆಮಿಫೈನಲ್ ಪಂದ್ಯದಲ್ಲಿ ಹಾಸನ ಜಿಲ್ಲೆಯ ಪುರುಷರ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶ ಪಡೆಯಿತು. ಫೈನಲ್ ಪಂದ್ಯದಲ್ಲಿ ಬೆಂಗಳೂರು ಗ್ರಾಮೀಣ ತಂಡವನ್ನು ಎದುರಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು. ತಂಡದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಾದ ಚಿಂತನ್ ಬಿ.ಸಿ, ಪುನೀತ್ ಕುಮಾರ್, ಸಿ ಎಚ್ ದಿನೇಶ್, ಸಾತ್ವಿಕ್ ಶೆಟ್ಟಿ, ಸುರೇಶ್ ವರ್ತಿ, ಅಭಿಷೇಕ್ ಎಚ್, ಪ್ರವೀಣ್ ಬಿಲ್ಲೂರು, ಶ್ರೀಕಾಂತ್ ಗೌಡ, ಮೋನಿಶ್ ಪಿಜಿ, ಶ್ರೀನಿವಾಸ, ಚಿನ್ಮಯ್, ತೇಜಸ್ ಆರ್ , ಸಂಜಯ್ ಎಸ್., ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.ಜಿಲ್ಲೆಯನ್ನು ಪ್ರತಿನಿಧಿಸಿದ ಪುರುಷರ ತಂಡದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ 13 ಜನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಎರಡೂ ತಂಡಗಳು ಫೈನಲ್ ಹಂತವನ್ನು ತಲುಪಿ ಪ್ರಶಸ್ತಿಯನ್ನು ಪಡೆಯುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಶಸ್ತಿ ವಿಜೇತ ಮಹಿಳಾ ಹಾಗು ಪುರುಷರ‌ ಹ್ಯಾಂಡ್ ಬಾಲ್ ತಂಡಕ್ಕೆ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿಯನ್ನು ನೀಡಿರುತ್ತಾರೆ. ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾರದಾ, ಸುದೀನ್ ಪೂಜಾರಿ, ಸಂದೇಶ್ ಪೂಂಜ, ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Related posts

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಕಲಿಕೆಯಲ್ಲಿ ಕಲೆ’ ಕಾರ್ಯಾಗಾರ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Suddi Udaya

ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ ಮಳಿಗೆ ಲೋಕಾರ್ಪಣೆ

Suddi Udaya

ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ‘ಸುರಭಿ’ ಉದ್ಘಾಟನೆ

Suddi Udaya

ಆರೋಗ್ಯ ಸಮಸ್ಯೆಯಿಂದ ಬಳಲಿ ಗುಣಮುಖರಾಗುತ್ತಿರುವ ಗಿಂಡಾಡಿ ಗುರುರಾಜ್ ಹೆಗ್ಡೆಯವರಿಗೆ ಅಳದಂಗಡಿ ಪ್ರಾ.ಕೃ.ಪ.ಸ. ಸಂಘದಿಂದ ರೂ. 50 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಲಾಯಿಲದಲ್ಲಿ ನಡೆದಿರುವುದು ವಾಮಾಚಾರ ಅಲ್ಲ, ದೋಷ ಪರಿಹಾರದ ಪೂಜೆ

Suddi Udaya
error: Content is protected !!