ಮಚ್ಚಿನ: 2025-26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸತತವಾಗಿ 16 ನೇ ಬಾರಿ 100% ಫಲಿತಾಂಶ ದಾಖಲಿಸಿದೆ.
618(98.9%) ಅಂಕ ಪಡೆದ ಕೌಶಿಕ್ ಶೆಟ್ಟಿ ಪ್ರಥಮ ಸ್ಥಾನಿಯಾಗಿದ್ದು 615(98.4%) ಅಂಕ ಪಡೆದ ಎ ನಿಧಿಶ್ರಿ ಕೆ ಎಸ್ ದ್ವಿತೀಯ ಸ್ಥಾನ, 613(98.1%) ಅಂಕ ಪಡೆದ ಶಾನ್ವಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 37 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಬೋಧಕ – ಬೋಧಕೇತರ ಸಿಬ್ಬಂದಿಗಳನ್ನು ಪ್ರಾಚಾರ್ಯೆ ಅಕ್ಷತಾ ಕೆ ಇವರು ಅಭಿನಂದಿಸಿದ್ದಾರೆ.













