September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ನಿವೃತ್ತ ಸರಕಾರಿ ನೌಕರರ ಸಂಘದ ರಜತ ಸಂಭ್ರಮ: ರೂ.40 ಲಕ್ಷ ವೆಚ್ಚದ ಪ್ರಬುದ್ಧ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಘ ಬೆಳ್ತಂಗಡಿ ಇದರ ರಜತ ಸಂಭ್ರಮ' ಹಾಗೂ ರೂ.40 ಲಕ್ಷ ವೆಚ್ಚದಲ್ಲಿ ಅಚ್ಚಿನಡ್ಕ ಕೆಲ್ಲಗುತ್ತು ಎಂಬಲ್ಲಿ ಸಂಘದ ಸದಸ್ಯೆ ಅಚ್ಚಿನಡ್ಕ ಶ್ರೀಮತಿ ವೀರಮ್ಮನವರು ತನ್ನ ತಾಯಿಯ ಹೆಸರಿನಲ್ಲಿ ದಾನವಾಗಿ ನೀಡಿದ ಜಾಗದಲ್ಲಿ ನಿರ್ಮಿಸಲಾದ ಸಂಘದ ನೂತನ ಕಟ್ಟಡಪ್ರಬುದ್ಧ’ ಇದರ ಉದ್ಘಾಟನೆ ಎ.25ರಂದು ನಡೆಯಿತು .

ನೂತನ ಕಟ್ಟಡವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ವಹಿಸಿದ್ದರು.

ಎಂಎಲ್ಸಿಸಿ ಪ್ರತಾಪಸಿಂಹ ನಾಯಕ್ ಪ್ರಬುದ್ಧ-3 ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಎಕ್ಷೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ದಾನಿಗಳ ಫಲಕ ಅನಾವರಣ ಮಾಡಿದರು.

ಮುಖ್ಯ ಅಭ್ಯಾಗತರಾಗಿ ಕ.ರಾ.ಸ.ನೌ.ಸಂಘದ ಜಯರಾಜ್ ಜೈನ್, ಪುತ್ತೂರು ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್,‌ ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಜೋನ್ ಅರ್ವಿನ್ ಡಿಸೋಜ, ಮಂಜುಶ್ರೀ ಜೇಸಿಸ್ ಅಧ್ಯಕ್ಷ ಜಿತೇಶ್, ಬೆಳ್ತಂಗಡಿ ಪತ್ರಕತ೯ರ ಸಂಘದ ಅಧ್ಯಕ್ಷ ತುಕಾರಾಂ, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಮಾ ಆರ್. ರಾವ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ಜಾಗದ ದಾನಿ ವೀರಮ್ಮ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಸ್ಥಳ ದಾನಿ ಹಾಗೂ ಆಥಿ೯ಕ ಸಹಕಾರ ನೀಡಿದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಶ್ರೀಮತಿ ಗೀತಾ ರಮಾನಂದ ರಾವ್ ಪ್ರಾರ್ಥನೆ ಬಳಿಕ ಎಂ.ಎನ್ ಜೋಸೆಫ್ ಸ್ವಾಗತಿಸಿದರು. ಸಮನ್ವಯಕಾರ ವಸಂತ ಸುವರ್ಣ ಧನ್ಯವಾದ ವಿತ್ತರು.

Related posts

ಮುಂಡಾಜೆ : ಹೆದ್ದಾರಿ ಸೇತುವೆಯ ಕಾಮಗಾರಿಯ ವೇಳೆ ಹಿಟಾಚಿ ಪಲ್ಟಿ

Suddi Udaya

ಆ.18: ದೇಶವ್ಯಾಪಿ ಕಾರ್ಮಿಕ ಪ್ರತಿಭಟನೆ: ಬೆಳ್ತಂಗಡಿ ತಾಲೂಕಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು: ಅನಿಲ್ ಕುಮಾರ್ ಯು

Suddi Udaya

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ಕ.ಸಾ.ಪ ಸಮ್ಮೇಳನ: ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅಧಿಕೃತ ಆಮಂತ್ರಣ

Suddi Udaya

ನಿಡ್ಲೆ : ನೆಕ್ಕರೆ ನಿವಾಸಿ ಧರ್ಣಮ್ಮ ನಿಧನ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿಯ ಸಮಾರೋಪ

Suddi Udaya
error: Content is protected !!