September 17, 2026
ನಿಧನಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮುಖ್ಯ ರಸ್ತೆಯ ಕಟ್ಟಡ ಕೆಡವ ವೇಳೆ ಗೋಡೆ ಬಿದ್ದು ಕಾರ್ಮಿಕ ಮೃತ್ಯು


ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾಮಗಾರಿ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಖ್ಯ ರಸ್ತೆಯ ಬಳಿಯ ಕಟ್ಟಡವೊಂದನ್ನು ಕೆಡವುತ್ತಿರುವ ಸಂದರ್ಭದಲ್ಲಿ ಗೋಡೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಕಡಬ ನಿವಾಸಿ ಜುಬೇರ್ ಎಂಬ ಕಾರ್ಮಿಕ ಮೃತಪಟ್ಟ ವ್ಯಕ್ತಿಯಾಗಿದ್ದರೆ. ಬೆಳ್ತಂಗಡಿ ಮಾದರಿ ಶಾಲಾ ಬಳಿಯ ಮಹಿಳಾ ಗ್ರಾಹಕರ ಸಹಕಾರಿ ಸಂಘದ ಇದ್ದ ಕಟ್ಟಡವನ್ನು ಕೆಡವುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಕಟ್ಟಡವನ್ನು ಕಂಪ್ರೆಶರ್ ಬಳಸಿ ಕೆವುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೋಡೆ ಬಿದ್ದಿದ್ದು, ಗಾಯಗೊಂಡ ಜುಬೇರ್ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟರೆನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಾಗಿದೆ.

Related posts

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅನುಮತಿ ದೊರಕಿರುವ ಬಗ್ಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಿಂದ ಸ್ಪಷ್ಟೀಕರಣ

Suddi Udaya

ಕರಂಬಾರು ಬೋಟ್ಯಲ್ಮರ್ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

Suddi Udaya

ಮೂಡುಕೋಡಿ ಅರ್ಚಕ ಪುಟ್ಟಪ್ಪಯ್ಯ ನಿಧನ

Suddi Udaya

ರಾತ್ರಿ ವೇಳೆ ಖಾಸಗಿ ಬಸ್‌ಗಳ ಅಜಾಗರೂಕ ಚಾಲನೆ; ಪೊಲೀಸ್ ಠಾಣೆಗೆ ಯುವ ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ದೂರು

Suddi Udaya

ಮಚ್ಚಿನ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

Suddi Udaya
error: Content is protected !!