26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಪಡ್ಡಂದಡ್ಕ: ಎಸ್ ಕೆ ಎಸ್ ಎಸ್ ಫ್ ವತಿಯಿಂದ ಉಚಿತ ಮನೆ ಹಸ್ತಾಂತರ

ವೇಣೂರು: ಪಡ್ಡoದಡ್ಕದ ಸಮೀಪದ ಕಟ್ಟೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಶಾಖಾ ವತಿಯಿಂದ ಉಚಿತ ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮ ಶಾಖಾ ಚೇರ್ಮೆನ್ ಕೆಪಿ ಬಸೀರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಮತ್ತು ಗೃಹ ಪ್ರವೇಶವನ್ನು ಉದ್ಯಮಿ ಹಾಗೂ ಮಸೀದಿ ಮಾಜಿ ಅಧ್ಯಕ್ಷ ಯುಕೆ ಮೊಹಮ್ಮದ್ ಹಾಜಿ ನೆರವೇರಿಸಿದರು. ಮಸೀದಿ ಖತೀಬ್ ಸಮೀರ್ ದಾರಿಮಿ ದುವಾ ನೆರವೇರಿಸಿದರು. ಮನೆಯ ಕೀ ಯನ್ನು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪರಿಂಜೆ ಮುಸ್ತಾಪ ರವರಿಗೆ ಹಸ್ತಾಂತರಿಸಿದರು. ಪಡ್ಡoದಡ್ಕ ಎಸ್ ಕೆ ಎಸ್ ಎಸ್ ಫ್ ಶಾಖೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಬಡ ಆಸಕ್ತರಿಗೆ,ಮದುವೆ ಕಾರ್ಯಕ್ಕೆ, ಅನಾರೋಗ್ಯಕ್ಕೆ ತುತ್ತಾದಾಗ ಹಣ ಸಹಾಯ, ಮೃತರಾದಾಗ ಸ್ವಯಂ ಸೇವೆಯಿಂದ ದಪನ ಕಾರ್ಯದ ಸಂಪೂರ್ಣ ಜವಾಬ್ದಾರಿ ಇತ್ಯಾದಿ ಬಗ್ಗೆ ಸೇವೆ ಮಾಡುತ್ತಿದೆ.

ಈ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಮರೋಡಿ, ಜಿಲ್ಲಾ ಉಪಾಧ್ಯಕ್ಷ ಅಜೀಜ್ ಮಲೀಕ್ ಮೂಡಬಿದ್ರಿ, ವಲಯ ಅಧ್ಯಕ್ಷ ರಜಾಕ್ ಮದನಿ, ಜಿಲ್ಲಾ ವಿಖಾಯ ಕನ್ವೀನರ್ ಪಾರೂಕ್ ವಿಶಾಲ್ ನಗರ ಮೂಡಬಿದ್ರಿ, ಪ್ರಮುಖರಾದ ಖಾಲಿದ್ ಪೂಲಬೆ,ರಫೀಕ್ ಪಡ್ಡ, ಸದರ್ ಅಬ್ದುಲ್ ರಹಿಮಾನ್ನ್ ಯಮಾನಿ, ಹಕೀಮ್ ಜಲಾಲಿ, ಎಸ್ ಕೆ ರಜಾಕ್, ಸ್ವರೂಪ್ ಕಟ್ಟೆ,ಇಕ್ಬಾಲ್ ಕುರ್ಲೊಟ್ಟು, ಹಕೀಂ ಗಾಂಧಿನಗರ, ಶಬ್ಬೀರ್ ಪಡ್ಡ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮೊಹಮ್ಮದ್ ಶಾಫಿ ಕಿರೋಡಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.ವಿಖಾಯ ಚೇರ್ಮನ್ ಮನ್ಸೂರ್ ಮೂಡಬಿದ್ರಿ ವಂದಿಸಿದರು.

Related posts

ಮೈಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಳಂಜ ಶಾಲೆಯಲ್ಲಿ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು : ಕೆಲ್ಲಕೆರೆ ಕೊರಗ ಸಮುದಾಯದ ಕಾಲೋನಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಬೆಂಬಲ

Suddi Udaya

ಅ.8-10: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಎಸ್. ಡಿ. ಎಮ್. ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃ ತಿಕ ಸಂಘದ ವತಿಯಿಂದ ‘ಆಟಿಡ್ ಗೊಬ್ಬುಗ’

Suddi Udaya

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

Suddi Udaya
error: Content is protected !!