26.1 C
ಪುತ್ತೂರು, ಬೆಳ್ತಂಗಡಿ
September 10, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ : ಅಪರಿಚಿತ ಸುಮಾರು 40 ರಿಂದ 45 ವರ್ಷದ ಗಂಡಸಿನ ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ನೀರಿನ ಡ್ಯಾಂ ನ ನೀರಿನಲ್ಲಿ ಎ.27 ರಂದು ಬೆಳಗ್ಗೆ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತವ್ಯಕ್ತಿಯ ಎತ್ತರ 5.7 ಅಡಿ, ದಪ್ಪ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಅಗಲ ಮುಖ, ಮುಖದಲ್ಲಿ ಕಪ್ಪು ಮಿಶ್ರಿತ ಬಿಳಿ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ಮಿಶ್ರಿತ ಕಪ್ಪು ಕೂದಲು ಇರುವುದು ಕಂಡು ಬರುತ್ತದೆ.ಮೃತದೇಹದ ಮೈಮೇಲೆ ಬಿಳಿ ಬಣ್ಣದಲ್ಲಿ ನೀಲಿ ಬಣ್ಣದ ಅಡ್ಡ ಹಾಗೂ ಉದ್ದ ಗೆರೆಗಳಿರುವ ತುಂಬು ತೋಳಿನ ಶರ್ಟ್‌-1, ಕಾಪಿ ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500 ಗೆ ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ಧರ್ಮಸ್ಥಳ ಪೊಲೀಸರು ತಿಳಿಸಿದ್ದಾರೆ.

Related posts

ಬಳ್ಳಮಂಜದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜ.21- 25: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾದ್ವಾರದ ಉದ್ಘಾಟನೆ

Suddi Udaya

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಡಿ.26 ವಿದ್ಯುತ್ ನಿಲುಗಡೆ

Suddi Udaya

ಅಂಡಿಂಜೆ : ಸಂಕಪ್ಪ ದೇವಾಡಿಗ ನಿಧನ

Suddi Udaya

ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆ: ಶಾಲಾ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!