25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಬೆಳ್ತಂಗಡಿ:ಚಿಕ್ಕಮಗಳೂರು-ದಕ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಎ.29ರಂದು ಒಂಟಿ ಸಲಗ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಘಾಟಿ ತಿರುವಿನ ಎತ್ತರದ ಪ್ರದೇಶದಲ್ಲಿ ನಿಂತಿದ್ದ ಕಾಡಾನೆ ರಸ್ತೆ ಕಡೆ ಇಳಿಯಲು ಜಾಗ ಹುಡುಕುತ್ತಿದ್ದು,ಕೆಳಗಿಳಿಯಲು ಹೆದರಿ ಕೆಲಕಾಲ ಅಲ್ಲೇ ನಿಂತಿತ್ತು. ಮೇಲ್ಭಾಗದಿಂದ ಬೀಳುವ ಭೀತಿಯಿಂದ ಸುರಕ್ಷಿತ ದಾರಿ ಹುಡುಕುತ್ತಿದ್ದ ಸಲಗವನ್ನು ಕಂಡು ವಾಹನ ಸವಾರರು ಭಯಗೊಂಡು ತಮ್ಮ ವಾಹನಗಳನ್ನು ನಿಲ್ಲಿಸಿದರು.

ಘಟನಾ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದರು. ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಹೆಚ್ಚು ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

Related posts

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಡಂತ್ಯಾರು ವಲಯದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಕಳೆಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಸೆ.23: ಮಡಂತ್ಯಾರು ಪ್ರಾ.ಕೃ.ಪ.ಸ. ಸಂಘದ 50 ರ ಸುವರ್ಣ ಮಹೋತ್ಸವ ಸಂಭ್ರಮ: ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಇದರ ಉದ್ಘಾಟನಾ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ‌ ಶುಭ ಹಾರೈಸಿದ ಸಹಕಾರ ರತ್ನ ಡಾ‌. ಎಂ.ಎನ್ ರಾಜೇಂದ್ರ ಕುಮಾರ್

Suddi Udaya

ಕುಂಟಿನಿ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ

Suddi Udaya
error: Content is protected !!