32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳಕ್ಕೆ ಬಂದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಹೋಗದೆ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಂಜುನಾಥ. ಇ(47) ರವರು ದಿನಾಂಕ 29-04-2026 ರಂದು ತನ್ನ ಮಗಳ ಮದುವೆಗೆಂದು ಮನೆಯವರ ಜೊತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದವರು ದೇವರ ದರ್ಶನ ಮುಗಿಸಿ ದೇವಸ್ಥಾನದ ಮುಂಭಾಗದಲ್ಲಿರುವ ಬೃಂದಾವನ ಪಾರ್ಕಿಗೆ ಹೋಗಿ ವಾಪಾಸ್ಸು ಬರುವ ಸಮಯ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ದೇವಸ್ಥಾನ ಮುಂಭಾಗದಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಮೇ.1 ರಂದು ನಾಪತ್ತೆಯಾದ ಮಂಜುನಾಥ್ ಅವರ ಚಿಕ್ಕಪ್ಪನ ಮಗ ದಿನೇಶ್ ಪಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದ ಮಂಜುನಾಥ್.ಇ(47) ತಂದೆಯ ಹೆಸರು: ದಿ| ಈಶ್ವರಪ್ಪ, ಸುಮಾರು 5 ಅಡಿ ಎತ್ತರ, ಸಪೂರ ಶರೀರ, ಕಪ್ಪು ಮೈಬಣ್ಣ, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ ಧರಿಸಿರುತ್ತಾರೆ. ಭಾಷೆ: ಕನ್ನಡ ಮಾತಾನಾಡುತ್ತಾರೆ. ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಧರ್ಮಸ್ಥಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕುಕ್ಕಳ: ರಬ್ಬರ್ ಟ್ಯಾಪರ್ ನಾಪತ್ತೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ

Suddi Udaya

ಪಡ್ಡಂದಡ್ಕ ಮಂಜುಶ್ರಿ ಭಜನಾ ಮಂಡಳಿಯಲ್ಲಿ ಮಹಿಳಾ ದಿನಾಚರಣೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ಯುವ ನಾಯಕ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆ

Suddi Udaya

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya
error: Content is protected !!