32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸಿವಿಸಿ ಹಾಲ್ ಬಳಿಯ ಹೌಸಿಂಗ್ ಬೋರ್ಡ್ ತಿರುವು ರಸ್ತೆಯಲ್ಲಿ ಅಪಾಯಕಾರಿ ಗುಂಡಿ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸಿವಿಸಿ ಹಾಲ್‌ನಿಂದ ಸ್ವಲ್ಪ ಮುಂದೆ ಹೌಸಿಂಗ್ ಬೋರ್ಡ್ ಕಾಲನಿ ತಿರುವಿನಲ್ಲಿ ರಸ್ತೆ ಬದಿ ಹೊಂಡವೊಂದು ವಾಹನ ಚಾಲಕರಿಗೆ ಅಪಾಯವನ್ನು ತಂದೊಡ್ಡಿದೆ.

ಹೌಸಿಂಗ್ ಬೋರ್ಡ್ ಕಾಲನಿಗೆ ತಿರುಗುವ ರಸ್ತೆ ಬದಿಯಲ್ಲೇ ಈ ಹೊಂಡವಿದ್ದು, ಇದರ ಅಪಾಯವನ್ನು ಅರಿತ ಸ್ಥಳೀಯರು ಅಲ್ಲಿ ಕೋಲಿಗೆ ಪ್ಲಾಸ್ಟಿಕ್ ಬಾಟಲಿಯನ್ನು ಕವುಚಿ ಹಾಕಿ, ತೆಂಗಿನ ಸೋಗೆಯ ದಿಂಡು(ಕೊತ್ತಲಿAಗೆ) ಇಟ್ಟು, ಈ ಜಾಗ ಅಪಾಯಕಾರಿಯಾಗಿದೆ ಎಂಬ ಎಚ್ಚರಿಕೆಯನ್ನು ವಾಹನ ಚಾಲಕರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ.
ಇದು ಮಳೆಯ ನೀರು ಹರಿದು ಹೋಗಿ ನಿರ್ಮಾಣವಾದ ಗುಂಡಿಯಲ್ಲ, ಮಾನವ ನಿರ್ಮಿತ ಗುಂಡಿ, ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಕಾಮಗಾರಿ ಮಾಡಿದವರು ಪೈಪ್ ಹಾಕಿ, ಹೊಂಡವನ್ನು ಮುಚ್ಚದೆ ಹಾಗೇ ಬಿಟ್ಟಿದ್ದರಿಂದ ಮಳೆಗಾಲದಲ್ಲಿ ನೀರು ಹರಿದು ದೊಡ್ಡ ಹೊಂಡ ನಿರ್ಮಾಣವಾಗಿದೆ ಎಂದು ಪಟ್ಟಣ ಪಂಚಾಯತ್ ಮಾಜಿ ಹಿರಿಯ ಸದಸ್ಯ ಜಗದೀಶ್ ಡಿ. ತಿಳಿಸಿದ್ದಾರೆ.

ಇದರ ಹತ್ತಿರವೇ ತಹಶೀಲ್ದಾರರ ಮನೆಯಿದೆ. ಹೌಸಿಂಗ್ ಬೋರ್ಡ್ ಕಾಲನಿ ತಿರುವ ರಸ್ತೆ ಬದಿಯಲ್ಲಿ ಹೊಂಡವಿದ್ದು, ಹೌಸಿಂಗ್ ಬೋರ್ಡ್ಗೆ ಹೋಗುವ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಈ ಪ್ರದೇಶಗಳಿಗೆ ವಾಹನಗಳಲ್ಲಿ ಬರುವ ಸಾರ್ವಜನಿಕರು ಹಾಗೂ ಪಾದಾಚಾರಿಗಳು ರಸ್ತೆ ಬದಿಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಯಾವುದೇ ಅಪಾಯವಾಗುವ ಮುನ್ನ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Related posts

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ತ್ವರಿತವಾಗಲಿ ಬೆಳೆ ವಿಮೆ ಕಂತು ಪಾವತಿ: ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು

Suddi Udaya

ಚಾರ್ಮಾಡಿ ಸಾರ್ವಜನಿಕ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜರಿಂದ ಭರವಸೆ

Suddi Udaya

ಬಾರ್ಯ : ಪಿಲಿಗೂಡು ಬನ್ನೆಂಗಳ ಹಾಲು ಉತ್ಪಾದಕರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಎರಡು ಲಕ್ಷ ದೇಣಿಗೆ ಹಸ್ತಾಂತರ

Suddi Udaya

ವೇಣೂರು: ಸುದೇರ್ದು ನಿವಾಸಿ ಸುರೇಶ ಮೂಲ್ಯ ನಿಧನ

Suddi Udaya

ನಾವೂರು ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Suddi Udaya
error: Content is protected !!