30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜು

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ-2026ರ ಸಮಾರೋಪ

ಮೊಗ್ರು: ಪ್ರಸ್ತುತ ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಮೊಬೈಲ್ ಬಳಕೆ ಅತಿಯಾಗಿರುವುದು ಅಪಾಯಕಾರಿ ಬೆಳವಣಿಗೆ, ಹುಟ್ಟಿನಿಂದ 8 ವರ್ಷದ ವರೆಗೆ ಮಕ್ಕಳ ಮೆದುಳು ಸೂಕ್ಷ್ಮ ಬೆಳವಣಿಗೆಗಳು ನಡೆಯುತ್ತಿರುವಾಗ ಅತಿಯಾದ ಮೊಬೈಲ್ ಬಳಕೆ ಮಗುವಿನ ಸಮಗ್ರ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಡಾ| ರಾಮನಾಥ ಮಹಲೆ, ಮಕ್ಕಳ ತಜ್ಞರು, ಯೇನೆಪೋಯ ವೈದ್ಯಕೀಯ ಕಾಲೇಜು, ಆಸ್ಪತ್ರೆ ಇವರು ಅಭಿಪ್ರಾಯ ಪಟ್ಟರು.

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು, ಬೆಳ್ತಂಗಡಿ ಇವರು ಮೊಗ್ರು ಶಾಲೆಯಲ್ಲಿ ಆಯೋಜಿಸಿದ ಬೇಸಿಗೆ ಶಿಬಿರ-2026ರ ಸಮಾರೋಪದಲ್ಲಿ ನಡೆದ ಶೈಕ್ಷಣಿಕ ಸಭಾ ಕಾರ್ಯಕ್ರಮ ಶೈಕ್ಷಣಿಕ ಸಾಧನೆಗೆ ಆರೋಗ್ಯದ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಖ್ಯಾತ ದಂತ ವೈದ್ಯ ಡಾ| ಜಗದೀಶ್ ಚಂದ್ರ ಹಿಲ್ಯಾರು ಆತ್ಮ ವಿಶ್ವಾಸಕ್ಕೆ ಹಲ್ಲಿನ ಮಹತ್ವದ ಕುರಿತು ಮಾರ್ಗದರ್ಶನ ಮಾಡಿದರು. ಸಮಾಜಸೇವಕ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ವಿದ್ಯಾದೇಗುಲ ಒಂದು ಊರಿನ ಅಸ್ತಿತ್ವ ಅದನ್ನು ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕು ಇದಕ್ಕಾಗಿ ಟ್ರಸ್ಟ್ ನ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಭಾರತೀಯ ಸೈನ್ಯ ವ್ಯವಸ್ಥೆಯ ತಾಂತ್ರಿಕ ಸಿಬ್ಬಂದಿ ವಿಮಲಾ ಮಂಟಮೆ ಬೆಂಗಳೂರು ಮಾತನಾಡಿ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಉನ್ನತ ಉದ್ಯೋಗ ಪಡೆಯಬಹುದು ಎಂದು ಸಲಹೆ ನೀಡಿದರು. ನೃತ್ಯ ಗುರು ವಿದೂಷಿ ಸುರಕ್ಷಾ ಮಹೇಶ್ ವಜ್ರಾಂಗಿ ಮಾತನಾಡಿ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ಎಂದರು.

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಸ್ಥಾಪಕ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕರಾಜೆ ಮಾತನಾಡಿ ಗ್ರಾಮೀಣ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ತಲುಪಲು ಆಂಗ್ಲ ಭಾಷೆಯ ಹಾಗೂ ಕಂಪ್ಯೂಟರ್ ಶಿಕ್ಷಣ ಅಗತ್ಯ ಆ ದೃಷ್ಟಿಯಿಂದ ಟ್ರಸ್ಟ್ ಶಾಲೆಯ ಅಭಿವೃದ್ಧಿಗೆ ತೊಡಗಿಸಿಕೊಂಡಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ ಟ್ರಸ್ಟ್ನ ಕೋಶಾಧಿಕಾರಿ ಪುರಂದರ ಗೌಡ ಮಾತನಾಡಿ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿ ಗುಣಮಟ್ಟದ ಶಿಕ್ಷಣ ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಒದಗಿಸಿದಾಗ ಉನ್ನತಮಟ್ಟದ ಶಿಕ್ಷಣದ ಸಂದರ್ಭದಲ್ಲಿ ಹಣಕಾಸಿನ ಸದುಪಯೋಗ ಪಡೆಯಬಹುದು ಎಂದರು.

ಮೊಗ್ರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರಜ್ಞಾ ಪರಾರಿ, ಮುಖ್ಯೋಪಾಧ್ಯಾಯ ಮಾಧವ ಗೌಡ, ಮೊಗ್ರುಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ ಅರ್ಬಿ ಟ್ರಸ್ಟಿನ ಉಪಾಧ್ಯಕ್ಷ ಚಂದ್ರಹಾಸ ದೇವಸ್ಯ ಉಪಸ್ಥಿತರಿದ್ದರು.

22 ಸಂಪನ್ಮೂಲ ವ್ಯಕ್ತಿಗಳು 180 ಶಿಬಿರಾರ್ಥಿಗಳು: ಭಾರತೀಯ ಸಾಂಸ್ಕೃತಿಕ ವೈವಿಧ್ಯ ಎಂಬ ಪರಿಕಲ್ಪನೆಯೊಂದಿಗೆ ಎಪ್ರಿಲ್ ೨೦ ರಿಂದ ೨೫ರವರೆಗೆ ಬೆಳಿಗ್ಗೆ ೯ ರಿಂದ ಸಂಜೆ ೪ರವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು, ಮುಗೇರಡ್ಕದಲ್ಲಿ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ವಿವಿಧ ಕ್ಷೇತ್ರದ ಅನುಭವಿ 22 ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ ನೀಡಲಾಯಿತು. ಹಲವಾರು ಶಾಲೆಗಳ ೧೮೦ ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.

ಮನರಂಜಿಸಿದ ನೃತ್ಯ ವೈಭವ : ಬೇಸಿಗೆ ಶಿಬಿರದ ಪ್ರಧಾನ ತರಬೇತಿ ಭಾರತೀಯ ಸಾಂಸ್ಕೃತಿಕ ವೈವಿಧ್ಯ ಎಂಬ ಪರಿಕಲ್ಪನೆಯಲ್ಲಿ ಆರು ದಿನ ತರಬೇತಿ ಪಡೆದ 150 ಕಲಾವಿದರ ಶಿಬಿರಾರ್ಥಿಗಳು ಹಾಗೂ 30 ಯೋಗ ಪಟ್ಟುಗಳು ಸಮಾರೋಪ ಕಾರ್ಯಕ್ರಮ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ತ್ಸಯಂ, ಪಂಜಾಬಿ, ಗುಜರಾತಿ, ಜನಪದ, ಯಕ್ಷಗಾನ, ಹುಲಿವೇಷ, ಕುಣಿತಭಜನೆ, ದೇಶ ಭಕ್ತಿಯ ಸೈನ್ಯ ನೃತ್ಯ, ರೂಪಕ ಹಾಗೂ ಯೋಗಾಸನ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು.

ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ಟ್ರಸ್ಟ್‌ನಿಂದ ಸಹಕಾರ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಎಲ್‌ಕೆಜಿ, ಯುಕೆಜಿ ರಿಂದ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮ/ಕನ್ನಡ ಮಾಧ್ಯಮ ದ್ವಿಭಾಷಾ ಶಿಕ್ಷಣಕ್ಕೆ ಸರಕಾರದಿಂದ ಅನುಮತಿ ಪಡೆದಿದ್ದು, ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ನ ಸಹಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಟ್ರಸ್ಟ್ ನ ವತಿಯಿಂದ 2 ಆಂಗ್ಲ ಮಾಧ್ಯಮದ ಶಿಕ್ಷಣ ನೀಡಲು ಶಿಕ್ಷಕಿಯನ್ನು ಒದಗಿಸುವುದರೊಂದಿಗೆ ಶಾಲಾ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಸರಕಾರದಿಂದ ಉಚಿತ ಪಠ್ಯಪುಸ್ತಕ, ಆಹಾರ ಹಾಗೂ ಇನ್ನಿತರ ಸೌಲಭ್ಯಗಳ ಲಭ್ಯವಾಗಿದೆ. ಶಾಲಾ Sಆಒಅ ವತಿಯಿಂದ ಪಠ್ಯೇತರ ಚಟುವಟಿಕೆ, ಶಾಲಾ ಶೈಕ್ಷಣಿಕ ಪ್ರವಾಸ ಇನ್ನಿತರ ಕಾರ್ಯಕ್ರಮದಿಂದ ಪ್ರೋತ್ಸಾಹ ಸಿಗುತ್ತಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಶಾಲಾಭಿವೃದ್ಧಿ ಸಹಕರಿಸುತ್ತಿರುವುದರಿಂದ ಮುಚ್ಚುವ ಹಂತದಲ್ಲಿದ್ದ ಮೊಗ್ರು ಶಾಲೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಏಳು ವಿದ್ಯಾರ್ಥಿಗಳಿದ್ದ ಶಾಲೆ ೨೫ ವಿದ್ಯಾರ್ಥಿಗಳೊಂದಿಗೆ 2025-26ನೇ ಶೈಕ್ಷಣಿಕ ಅವಧಿಯನ್ನು ಪೂರೈಸಿದೆ. ಪ್ರಸ್ತುತ ವರ್ಷ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶಕ್ಕೆ ಆಸಕ್ತಿವಹಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಮಾಧವ ಗೌಡ ಅಭಿಪ್ರಾಯ ಹಂಚಿಕೊಂಡರು.

Related posts

ಬೆಳ್ತಂಗಡಿ ಶ್ರೀ ನಾರಾಯಣ ಸ್ವಾಮಿ ಸೇವಾ ಸಂಘದಿಂದ ಕೆ. ವಸಂತ ಬಂಗೇರ ರವರಿಗೆ ಗೌರವಾರ್ಪಣೆ

Suddi Udaya

ವೇಣೂರು ಪೊಲೀಸ್ ಠಾಣೆಯ ಎಎಸ್ಐ ಆಗಿ ಬೆನ್ನಿಚ್ಛನ್ ಅಧಿಕಾರ ಸ್ವೀಕಾರ

Suddi Udaya

ಎಸ್.ಎನ್.ಡಿ.ಪಿ ತೋಟತ್ತಾಡಿ ಶಾಖೆಯಲ್ಲಿ ಗುರುಪೂಜೆ

Suddi Udaya

ಎ.12:ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ ಅಳದಂಗಡಿಯಲ್ಲಿ ಹನುಮಯಾಗ ಹಾಗೂ ಹನುಮೋತ್ಸವ ಕಾರ್ಯಕ್ರಮ: ಭಾರತೀಯರ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ತುಳು ನಾಟಕ ಪ್ರದರ್ಶನ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಿಂದ ಎನ್ಎಸ್ಎಸ್ ಶಿಬಿರ

Suddi Udaya

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya
error: Content is protected !!