August 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗುರುವಾಯನಕೆರೆ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ )ಕರ್ನಾಟಕ ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಮಂಗಳೂರು:ಉಪ್ಪಿನಂಗಡಿ ತಾಲೂಕು ಶ್ರೀ ಪಾಂಡುರಂಗ ಶಾಖೆ ಗುರುವಾಯನಕೆರೆ – ವಾರ್ಷಿಕೋತ್ಸವ ವೈಭವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡುರಂಗ ಶಾಖೆಯ ವಾರ್ಷಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಪಣೆಜಾಲ್ ನ ಸಂಭ್ರಮ ಸಭಾ ಭವನದಲ್ಲಿ ನೆರವೇರಿತು. ಯೋಗದ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಅನೇಕ ಯೋಗಬಂಧುಗಳು,ಯೋಗೇತರ ಬಂಧುಗಳು ಹಾಗೂ ಗಣ್ಯರು ಭಾಗವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರಿನ ಹಿರಿಯ ಯೋಗ ಶಿಕ್ಷಕರಾದ ರವೀಶ್ ಭಾಗವಹಿಸಿ, ಯೋಗವು ಆರೋಗ್ಯಕರ ಜೀವನಕ್ಕೆ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಭಾ ಅಧ್ಯಕ್ಷತೆಯನ್ನು ಪಾಂಡುರಂಗ ಶಾಖೆಯ ಸಂಚಾಲಕರಾದ ದಿನೇಶ್ ವಹಿಸಿಕೊಂಡು, ಶಾಖೆಯ ಬೆಳವಣಿಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ನಮ್ಮ ಮನೆ ಶಾಖೆಯ ಸಂಚಾಲಕರಾದ ಸುಮಲತಾ ಉಪಸ್ಥಿತರಿದ್ದರು‌ ಸಭಾ ಕಾರ್ಯಕ್ರಮದ ಸ್ವಾಗತವನ್ನು ಪಾಂಡುರಂಗ ಶಾಖೆಯ ಆನಂದ ಮಾಡಿದರು.ವಾರ್ಷಿಕ ವರಧಿಯನ್ನು ಪಾಂಡುರಂಗ ಶಾಖೆಯ ಶಿಕ್ಷಕ ದಯಾನಂದ ವಾಚಿಸಿದರು. ಪಾಂಡುರಂಗ ಶಾಖೆಯ ಜಯಂತಿ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ನಂತರ ನಮ್ಮ ಮನೆ ಶಾಖೆ, ಶ್ರೀ ಪಾಂಡುರಂಗ ಶಾಖೆ ಹಾಗೂ ಮದ್ದಡ್ಕ ಶಾಖೆಯ ಯೋಗ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಈ ಕಾರ್ಯಕ್ರಮಗಳು ಪ್ರೇಕ್ಷಕರ ಮನಸ್ಸಿಗೆ ಸಂತೋಷವನ್ನುಂಟುಮಾಡಿ ವಿಶೇಷ ಮೆಚ್ಚುಗೆಯನ್ನು ಪಡೆದವು.ಪಾಂಡುರಂಗ ಶಾಖೆಯ ಯೋಗ ಬಂಧು ವಿಧ್ಯಾರವರ ವಿಶೇಷ ಮುತುವರ್ಜಿಯಿಂದ ಹಿರಿಯ ಯೋಗ ಬಂಧುಗಳಾದ ರಾಮಕೃಷ್ಣ, ಯೋಗೀಶ್ ರವರ ಸಲಹೆ ಸಹಕಾರದೊಂದಿಗೆ ಪಾಂಡುರಂಗ ಶಾಖೆ, ನಮ್ಮ ಮನೆ ಶಾಖೆ ಮದ್ದಡ್ಕ ಶಾಖೆಯ ಯೋಗ ಬಂಧುಗಳ ಒಗ್ಗೂಡುವಿಕೆಯಿಂದ ಶಿಕ್ಷಕರಾದ ಪ್ರದೀಪ್ ,ಆನಂದರವರ ಸಹಕಾರ ದಿಂದ ಚಿದಾನಂದ ಇಡ್ಯಾ ರವರ ನಿರೂಪಣೆಯೊಂದಿಗೆ ಈ ವಾರ್ಷಿಕೋತ್ಸವವು ಯೋಗದ ಮಹತ್ವವನ್ನು ಸಮಾಜಕ್ಕೆ ಸಾರುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕಾರ್ಯಕ್ರಮವಾಗಿ ಮೂಡಿಬಂದಿತು.

Related posts

ಬೆಳ್ತಂಗಡಿ ಕಳ್ಳತನ ಪ್ರಕರಣ:ಅಂತರ್ ರಾಜ್ಯ ಕುಖ್ಯಾತ ಕಳ್ಳನಿಗೆ ನ್ಯಾಯಾಂಗ ಬಂಧನ

Suddi Udaya

ತೋಟತ್ತಾಡಿ: ಪಾದೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವಂತೆ ಹೈನುಗಾರರಿಂದ ಸಭೆ

Suddi Udaya

ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

Suddi Udaya

ಪದ್ಮುಂಜದಲ್ಲಿ ವಾಹನ ತಡೆದು ಹಲ್ಲೆ ಪ್ರಕರಣ-ಶರತ್ ಚೌಟನಿಗೆ ಜೈಲು ಶಿಕ್ಷೆ

Suddi Udaya

ಬೆಳ್ತಂಗಡಿ ವಾರದ ಸಂತೆಗೆ ಸ್ಥಳಾವಕಾಶ ಕೊರತೆ: ವ್ಯಾಪಾರಿಗಳು ವಾಪಾಸು

Suddi Udaya

ಮುಂಡಾಜೆ: ರಿಕ್ಷಾ-ಪಿಕಪ್ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

Suddi Udaya
error: Content is protected !!