30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡುರಂಗ ಶಾಖೆಯ ವಾರ್ಷಿಕೋತ್ಸವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡುರಂಗ ಶಾಖೆಯ ವಾರ್ಷಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಪಣೆಜಾಲ್ ನ ಸಂಭ್ರಮ ಸಭಾ ಭವನದಲ್ಲಿ ನೆರವೇರಿತು.

ಮಂಗಳೂರಿನ ಹಿರಿಯ ಯೋಗ ಶಿಕ್ಷಕರಾದ ರವೀಶ್ ಅಣ್ಣ ಭಾಗವಹಿಸಿ, ಯೋಗವು ಆರೋಗ್ಯಕರ ಜೀವನಕ್ಕೆ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಭಾಧ್ಯಕ್ಷತೆಯನ್ನು ಪಾಂಡುರಂಗ ಶಾಖೆಯ ಸಂಚಾಲಕರಾದ ದಿನೇಶ್ ವಹಿಸಿ ಮಾತನಾಡಿ ಶಾಖೆಯ ಬೆಳವಣಿಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ನಮ್ಮ ಮನೆ ಶಾಖೆಯ ಸಂಚಾಲಕರಾದ ಸುಮಲತಾ ಉಪಸ್ಥಿತರಿದ್ದರು. ಪಾಂಡುರಂಗ ಶಾಖೆಯ ಆನಂದ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಪಾಂಡುರಂಗ ಶಾಖೆಯ ಶಿಕ್ಷಕ ದಯಾನಂದರವರು ವಾಚಿಸಿದರು. ಪಾಂಡುರಂಗ ಶಾಖೆಯ ಜಯಂತಿ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ನಂತರ ಶ್ರೀ ಪಾಂಡುರಂಗ ಶಾಖೆ ಹಾಗೂ ಮದ್ದಡ್ಕ ಶಾಖೆಯ ಯೋಗ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಪಾಂಡುರಂಗ ಶಾಖೆಯ ಯೋಗ ಬಂಧು ವಿಧ್ಯಾ ವಿಶೇಷ ಮುತುವರ್ಜಿಯಿಂದ ಹಿರಿಯ ಯೋಗ ಬಂಧುಗಳಾದ ರಾಮಕೃಷ್ಣ , ಯೋಗೀಶ್ ರವರ ಸಲಹೆ ಸಹಕಾರದೊಂದಿಗೆ ಪಾಂಡುರಂಗ ಶಾಖೆ, ನಮ್ಮ ಮನೆ ಶಾಖೆ ಮದ್ದಡ್ಕ ಶಾಖೆಯ ಯೋಗ ಬಂಧುಗಳ ಒಗ್ಗೂಡುವಿಕೆಯಿಂದ ಶಿಕ್ಷಕರಾದ ಪ್ರದೀಪ್ ,ಆನಂದ ಸಹಕರಿಸಿದರು.ಚಿದಾನಂದ ಇಡ್ಯಾ ನಿರೂಪಿಸಿದರು.

Related posts

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ನಾಳ : ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಸಂಧ್ಯಾ , ಕಾರ್ಯದರ್ಶಿಯಾಗಿ ರಾಜೀವಿ

Suddi Udaya

ಜ.28 ರಂದು ಉಜಿರೆಯ ಆರು ಕೇಂದ್ರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

Suddi Udaya

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ ಪ್ರಾಯೋಜಿತ ಕೌಶಲ್ಯ ಅಭಿವೃದ್ಧಿ ಸ್ವ ಉದ್ಯೋಗ ತರಬೇತಿಯ ಉದ್ಘಾಟನೆ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ಕುವೆಟ್ಟು ಗ್ರಾ.ಪಂ.ನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!