27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ನಿಟ್ಟಡೆಯ ಬಾಲಪ್ರತಿಭೆ ಯಶ್ವಿತ್ ಎಚ್.ಗೆ ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ

ವೇಣೂರು: ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ವತಿಯಿಂದ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಮೇ 3ರಂದು ನಡೆದ ಕವಿ-ಕಾವ್ಯ ಸಂಭ್ರಮ ಮತ್ತು ರತ್ನ ಸನ್ಮಾನ ಕಾರ್ಯಕ್ರಮದಲ್ಲಿ ವೇಣೂರು ನಿಟ್ಟಡೆಯ ಯಶ್ವಿತ್ ಎಚ್. ಕುಲಾಲ್‌ಗೆ ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಯಶ್ವಿತ್ ಬಹುಮುಖ ಪ್ರತಿಭೆಯಾಗಿದ್ದು, ಹಲವು ಸಂಸ್ಥೆಗಳಿಂದ ಪ್ರಶಸ್ತಿಗಳು ಸಂದಿವೆ. ವಾಯ್ಸ್ ಆಫ್ ಆರಾಧನ ಸಾಂಸ್ಕೃತಿಕ ಸಂಸ್ಥೆಯ ಸದಸ್ಯನಾಗಿರುತ್ತಾನೆ. ಬಂಟ್ವಾಳದ ಲಯನ್ಸ್ ಕ್ಲಬ್, ಕಾರ್ಕಳ ಲಯನ್ಸ್ ಕ್ಲಬ್ ಸೆಂಟ್ರಲ್ ಈತನ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದೆ. 2025ರ ಜುಲೈನಲ್ಲಿ ನಡೆದ ಏರ್ಯ ಆಳ್ವ ಫೌಂಡೇಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ನಡೆಸಿದ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟದ ಕವನ ಸ್ಪರ್ಧೆಯಲ್ಲಿ ಯಶ್ವಿತ್ ಎಚ್. ಕುಲಾಲ್ ದ್ವಿತೀಯ ಸ್ಥಾನ ಪಡೆದಿದ್ದಾನೆ. ಇದೀಗ ನೃತ್ಯದಲ್ಲಿ ಮೆರೆದ ಸಾಧನೆಗಾಗಿ ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಸಂದಿವೆ. ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲೂ ತಾಲೂಕು ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿಕೊಂಡಿರುವ ಯಶ್ವಿತ್ ನಿಟ್ಟಡೆ ಕುಂಭಶ್ರೀ ಶಾಲಾ ಬಳಿಯ ಮೋದಕ ಮನೆ ನಿವಾಸಿ ಹರೀಶ್ ಪಿ. ಮತ್ತು ಶ್ರೀಮತಿ ವನಿತಾ ಕೆ. ದಂಪತಿಯ ಪುತ್ರ.

Related posts

ಇಂದಬೆಟ್ಟು: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರಿಂದ ಮನವಿ

Suddi Udaya

ಆರತಕ್ಷತೆ ಊಟ ಸೇವಿಸಿದ ಮಂದಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು: ಓರ್ವೆ ಮಹಿಳೆ ಸಾವು-ಮತ್ತೋರ್ವೆ ಗಂಭೀರ

Suddi Udaya

ಶಿಬಾಜೆ: ಕಾಂಗ್ರೆಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆ

Suddi Udaya

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜು ಮತ್ತು ಎಸ್ ಡಿ ಎಂ ಕ್ರೀಡಾ ವಿಭಾಗದ ಸಂಯೋಜನೆಯಲ್ಲಿ ಬೇಸಿಗೆ ಶಿಬಿರ

Suddi Udaya

ಕಾಂಗ್ರೆಸ್ ಸರ್ಕಾರ ಬಂದ ನಂತರ ಅಭಿವೃದ್ಧಿ ಶೂನ್ಯ : ಪ್ರತಾಪ್ ಸಿಂಹ ನಾಯಕ್

Suddi Udaya
error: Content is protected !!