September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ದುರಸ್ತಿ ಕಾಣದ ರಸ್ತೆ: ಸ್ವಂತ ಖರ್ಚಿನಲ್ಲಿ ರಸ್ತೆ ಸರಿಪಡಿಸಿದ ಆಟೋ ಚಾಲಕರು

ಬೆಳ್ತಂಗಡಿ : ಕೊಕ್ಕಡ ಹೋಬಳಿಯ ಪೇಟೆ ರಸ್ತೆಯ ದುಸ್ಥಿತಿ ಮತ್ತೆ ಜನರ ಅಸಹನೆಗೆ ಕಾರಣವಾಗಿದೆ. ಹೊಂಡ ಗುಂಡಿಗಳಿಂದ ಸಂಚಾರಕ್ಕೆ ಅಸಾಧ್ಯವಾಗಿರುವ ಈ ರಸ್ತೆ, ಅಪಘಾತಗಳಿಗೆ ತಾಣವಾಗಿ ಮಾರ್ಪಟ್ಟಿದ್ದು ಸಾರ್ವಜನಿಕರ ದೈನಂದಿನ ಬದುಕನ್ನೇ ಸಂಕಟಕರಗೊಳಿಸಿದೆ.

ಕೊಕ್ಕಡ ನಾಡಕಚೇರಿ, ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಸರಕಾರಿ ಆಸ್ಪತ್ರೆ ಹಾಗೂ ದೇವಸ್ಥಾನ, ಬ್ಯಾಂಕುಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಜಿ.ಪಂ ರಸ್ತೆ, 27 ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದ್ದು ರಾಷ್ಟ್ರೀಯ ಹೆದ್ದಾರಿಯನ್ನೂ ಸಂಪರ್ಕಿಸುತ್ತದೆ. ಆದರೂ, ವರ್ಷಗಳ ಕಾಲ ಯಾವುದೇ ಶಾಶ್ವತ ದುರಸ್ತಿ ಕಾರ್ಯ ನಡೆಯದೇ ರಸ್ತೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕದೆ ಸಾರ್ವಜನಿಕರಲ್ಲಿ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವು ಗೋಚರಿಸದ ಕಾರಣ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ತುರ್ತು ಸೇವೆಗಳಿಗೂ ಈ ರಸ್ತೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.

ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸ್ಥಳೀಯ ಯುವಕರು ಚೇತನ್ ಟಿ.ಎಲ್. ಮತ್ತು ರೂಪೇಶ್ ಕುಮಾರ್ ನೇತೃತ್ವದಲ್ಲಿ ತಮ್ಮದೇ ಖರ್ಚಿನಲ್ಲಿ ಹಿಂದೆ ಕಾಂಕ್ರೀಟ್ ಹಾಕಿ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ಆದರೆ ವಾಹನಗಳ ಓಡಾಟ ಮತ್ತು ಮಳೆಯ ನೀರಿನ ಪರಿಣಾಮದಿಂದ ಆ ಕಾಂಕ್ರೀಟ್ ಕಿತ್ತು ಹೋಗಿ ಮತ್ತೆ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ.

ಈ ಹಿನ್ನೆಲೆಗಳಲ್ಲಿ ಕೊಕ್ಕಡದ ಆಟೋ ಚಾಲಕ ಮಾಲಕರಾದ ಗಣೇಶ್ ಮಡ್ಯಲಗುಂಡಿ, ದಾಮೋದರ ಮಡ್ಯಲಗುಂಡಿ, ಧನಂಜಯ ಕಾಪಿನಬಾಗಿಲು, ದಾಮೋದರ ಕಾಪಿನಬಾಗಿಲು, ಸಚಿನ್ ಬಜ, ಹರ್ಷೀತ್, ಶುಶಂತ್, ಸಚಿನ್ ಟಿ.ಎಲ್, ಜಿತೇಶ್ ಆರ್.ಸಿ, ವಿನ್ಸೆಂಟ್, ನಾಗೇಶ್, ಉಮೇಶ್, ಜಗದೀಶ್ ಹಾಗೂ ವಿನ್ಸೆಂಟ್ ಮಿನೆಜಸ್ ಒಟ್ಟಾಗಿ ತಮ್ಮ ದುಡಿಮೆಯ ಹಣವನ್ನು ಸೇರಿಸಿ ಸೋಮವಾರದಂದು ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ವಾಹನ ಸಂಚಾರ ಸುಗಮವಾಗಿದ್ದರೂ, ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಥಳೀಯರ ಆತಂಕವಾಗಿದೆ.

Related posts

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ಆಯ್ಕೆ

Suddi Udaya

ಸೆ.28: ಬೆಳ್ತಂಗಡಿ ರಾಜ ಕೇಸರಿ ಸೇವಾ ಟ್ರಸ್ಟ್ ವತಿಯಿಂದ ನಾವೂರಿನಲ್ಲಿ ಉಚಿತ ನೇತ್ರಾ ಮತ್ತು ಹೃದಯ ತಪಾಸಣಾ ಶಿಬಿರ

Suddi Udaya

ಸುಲ್ಕೇರಿ: ಎಸ್.ಡಿ.ಎಂ ಸ್ನಾತಕೋತ್ತರ ಪದವಿ ಕೇಂದ್ರ ಮತ್ತು ಗ್ರಾ.ಪಂ ವತಿಯಿಂದ ಗ್ರಾಮ‌ ಸಮೀಕ್ಷೆ ಕಾರ್ಯಕ್ರಮ

Suddi Udaya

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಕಾರ್ಕಳಕ್ಕೆ ವರ್ಗಾವಣೆಗೊಂಡ ಡಾ. ಚಂದ್ರಕಾಂತ್ ಇವರಿಗೆ ಬೀಳ್ಕೊಡುಗೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಗೀತಾ ಜಯಂತಿ , ವಾರ್ಷಿಕ ಚಟುವಟಿಕೆಗಳ ಸಮಾರೋಪ ಹಾಗೂ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!