September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕರೆ ಮಾಡಿ ಕಲಾವಿದರಿಗೆ ಅವಹೇಳನಕಾರಿ ಮಾತಾನಾಡಿರುವವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಪ್ರಿಲ್ 21 ರಂದು ಸತೀಶ್ ಕುಮಾರ್ ರೈ ಪಡುಮಲೆ ಕಲಾವಿದ ಸುಂದರ್ ರೈ ಮಂದರ ಅವರಿಗೆ ಕರೆ ಮಾಡಿ ತಿಮರೋಡಿ ವಿರುದ್ಧ ನೀಡಿದ ಕೇಸ್ ವಿಚಾರದಲ್ಲಿ ಹೆದರಿಸಿ ಬೆದರಿಕೆ ಹಾಕಿ ಮುಂಬಯಿಯಲ್ಲಿ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ಬಗ್ಗೆ ಎಪ್ರಿಲ್ 29 ರಂದು ಕೆಟ್ಟದಾಗಿ ಬರೆದು ಪ್ರಸಾರ ಮಾಡಲಾಗಿದೆ ಅದಲ್ಲದೆ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸನ್ನ ರವಿ ಮತ್ತು ಇತರರು ಈ ರೀತಿಯ ಪ್ರಯತ್ನ ಮಾಡಿರುತ್ತಾರೆ. ತಿಮರೋಡಿ ವಿರುದ್ಧ ನೀಡಿದ ಪ್ರಕರಣವನ್ನು ವಾಪಸ್ ಪಡೆದು, ತಿಮರೋಡಿ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಕಲಾವಿದ ಸುಂದರ್ ರೈ ಮಂದರ ಮೇ.7 ರಂದು ದೂರು ನೀಡಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೇ.7 ರಂದು ರಾತ್ರಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಯೂಟ್ಯೂಬ್, ಪ್ರಸನ್ನ ರವಿ ಹಾಗೂ ಇತರರ ವಿರುದ್ಧ BNS-2023 (u/s-351(2),232)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಬಂಟ್ವಾಳದಲ್ಲಿ ಸಮರ ಸೌಗಂಧಿಕೆ ತಾಳಮದ್ದಳೆ

Suddi Udaya

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಮಾಜಮುಖಿ ಚಿಂತನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಸ್ತುತ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮತ್ತು ಆಡಳಿತ ಮಂಡಳಿಯ ಸದಸ್ಯರಿಂದ ನಾಳೆ ಪ್ರಶಸ್ತಿ ಸ್ವೀಕಾರ

Suddi Udaya

ಬಂದಾರು: ಮೈರೋಳ್ತಡ್ಕ-ವಿವೇಕಾನಂದ ನಗರ-ಕುರಾಯ ದೇವಸ್ಥಾನ ಸಂಪರ್ಕ ರಸ್ತೆ ಮರು ಡಾಮರೀಕರಣ-ಶಾಸಕರಿಗೆ ಗ್ರಾಮಸ್ಥರ ಕೃತಜ್ಞತೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ನಮೃತ ರಾಜ್ಯಕ್ಕೆ ಹತ್ತನೇ ಸ್ಥಾನ

Suddi Udaya

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ತಾಲೂಕು ಆಸ್ಪತ್ರೆಯ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

Suddi Udaya

ಇಂದಬೆಟ್ಟು: ಇಬ್ರಾಹಿಂ ಹಾಗೂ ಮುಹಮ್ಮದ್ ಸಾಝಿನ್ ಸ್ಮರಣಾರ್ಥ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

Suddi Udaya
error: Content is protected !!