September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ರೋಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ ಜಾಯಿಂಟ್ ರಿಪ್ಲೇಸ್‌ಮೆಂಟ್ ಫೆಲೋಶಿಪ್ ಪೂರ್ಣಗೊಳಿಸಿದ ಮೂಳೆ ತಜ್ಞ ಡಾ. ರಜತ್ ಹೆಚ್.ಪಿ

ಉಜಿರೆ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಕನ್ವೆನ್ಮನಲ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಫೆಲೋಶಿಪ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಉಜಿರೆಯ ಮೂಳೆತಜ್ಞ ಡಾ. ರಜತ್ ಹೆಚ್.ಪಿ ಅವರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಗಿದೆ.

ಆರು ತಿಂಗಳ ಫೆಲೋಶಿಪ್ ಕಾರ್ಯಕ್ರಮವು 2025ರ ನವೆಂಬರ್ 1ರಿಂದ 2026ರ ಏಪ್ರಿಲ್ 30ರವರೆಗೆ ನಡೆದಿದ್ದು, ಖ್ಯಾತ ಅಸ್ಥಿ ಮತ್ತು ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ತಜ್ಞ ಡಾ. ಸುನಿಲ್ ಜಿ ಕಿಣಿ ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ.ಕಾರ್ಯಕ್ರಮದಲ್ಲಿ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ತಂತ್ರಜ್ಞಾನ, ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಹಾಗೂ ಅಸ್ಥಿ ಚಿಕಿತ್ಸೆಯ ನೂತನ ತಂತ್ರಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಸಾಧನೆಗೆ ವೈದ್ಯಕೀಯ ವಲಯದಿಂದ ಹಾಗೂ ಸ್ನೇಹಿತರಿಂದ ಅಭಿನಂದನೆಗಳು ವ್ಯಕ್ತವಾಗಿವೆ.

ಡಾ.ರಜತ್ ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರ ಈ ಸಾಧನೆಗೆ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಜನಾರ್ದನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ದ.ಕ.ಜಿ.ಪಂ.ಹಿ. ಪ್ರಾ. ಕೊಡಿಯಾಲಬೈಲು ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ

Suddi Udaya

ತೆಲಂಗಾಣ ಚುನಾವಣಾ ವಾರ್ ರೂಮ್ ಸಂಯೋಜಕರಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಕಾನೂನು ಸಲಹೆಗಾರರಾಗಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ನೇಮಕ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ನಾಗೇಶ್ ಹೃದಯಾಘಾತದಿಂದ ನಿಧನ

Suddi Udaya

ಕುಕ್ಕಾಜೆ ದಿ. ಕುಶಾಲಪ್ಪ ನಾಯ್ಕರ ಮನೆಯವರಿಗೆ ಧನಸಹಾಯ ಹಸ್ತಾಂತರ

Suddi Udaya

ಬೆಳ್ತಂಗಡಿ : ಸಂತ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!