29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಾರದ ಸಂತೆಗೆ ಸ್ಥಳಾವಕಾಶ ಕೊರತೆ: ವ್ಯಾಪಾರಿಗಳು ವಾಪಾಸು

ಬೆಳ್ತಂಗಡಿ: ಬೆಳ್ತಂಗಡಿಯ ಸೋಮವಾರ ಸಂತೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಡ್ಡಿಯಾಗಿದ್ದು, ಇದರಿಂದ ವ್ಯಾಪಾರಿಗಳು ಬಾರೀ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವಾರ ಬಹಳ ಕಷ್ಟಪಟ್ಟು ವ್ಯಾಪಾರ ನಡೆಸಿದ ಸಂತೆ ವ್ಯಾಪಾರಿಗಳು ಈ ಬಾರೀ ವ್ಯಾಪಾರಕ್ಕೆ ಸ್ಥಳಾವಾಕಾಶ ಇಲ್ಲದೇ ವಾಪಾಸು ತೆರಳುವಂತಾಗಿದೆ.

ಬೆಳ್ತಂಗಡಿಯಲ್ಲಿ ಸಂತೆ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಇಲ್ಲ. ಇರುವ ಸಂತೆ ಪ್ರಾಂಗಣದಲ್ಲಿ ಏಲಂ ಮೂಲಕ ಪಡೆದು ನಿತ್ಯ ವ್ಯಾಪಾರ ನಡೆಸುವವರು ಇದ್ದಾರೆ. ಉಳಿದಂತೆ ನಾಲ್ಕೈದು ವ್ಯಾಪಾರಿಗಳಿಗಷ್ಟೇ ಅವಕಾಶ ಇದೆ. ಉಳಿದವರು ರಸ್ತೆ ಬದಿ ವ್ಯಾಪಾರ ನಡೆಸುವವರು. ಸದ್ಯ, ಹೆದ್ದಾರಿ ಕಾಮಗಾರಿಗೆ ಎರಡೂ ಬಳಿ ಅಗೆಯಲಾಗಿದ್ದು ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಕಳೆದ ಸೋಮವಾರವೂ ರಸ್ತೆ ಬದಿ ಸಂತೆ ವ್ಯಾಪಾರದಿಂದ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಈ ಭಾರಿ ಕಾಮಗಾರಿ ನಡೆಸುವಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ನೀಡಲಿಲ್ಲ. ವ್ಯಾಪಾರಕ್ಕೆ ಅವಕಾಶ ಇಲ್ಲದೇ ಕೆಲ ವ್ಯಾಪಾರಿಗಳು ಮಾರಿಗುಡಿ ಎದುರಿನ ರಸ್ತೆಯಲ್ಲಿ ವ್ಯಾಪಾರ ನಡೆಸಿದರೆ, ಉಳಿದ 15ಕ್ಕೂ ಹೆಚ್ಚು ವ್ಯಾಪಾರಿಗಳು ಸಂತೆ ವ್ಯಾಪಾರಕ್ಕೆ ಅವಕಾಶ ಇಲ್ಲದೇ ವಾಪಾಸು ತೆರಳಿದ್ದಾರೆ.

ಬೆಳ್ತಂಗಡಿ, ದೊಡ್ಡ ನಗರವಾದರೂ ಸಂತೆ ವ್ಯಾಪಾರಕ್ಕೆ ಸುಸರ್ಜಿತ ಮಾರುಕಟ್ಟೆ ಇರದೇ ಇರುವುದು ವಿಪರ್ಯಾಸ. ಸಂತೆ ವ್ಯಾಪಾರದ ಸುಂಕ ತೆಗೆದುಕೊಳ್ಳಲು ಬರುತ್ತಾರೆ ಆದರೆ ಸರಿಯಾದ ವ್ಯವಸ್ಥೆ ಮಾಡುವುದಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ತೋಡಿಕೊಂಡಿದ್ದಾರೆ.

Related posts

ಅಥ್ಲೆಟಿಕ್ಸ್ ಸ್ಪರ್ಧೆ: ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿ ಅನೀಶ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ: ಬಿರ್ವ ಸಂಜೀವ ಪೂಜಾರಿಯವರಿಂದ ನವರಾತ್ರಿ ಮಹೋತ್ಸವ ಉದ್ಘಾಟನೆ

Suddi Udaya

ಜು.1:ವೇಣೂರು ಪೊಲೀಸ್ ಠಾಣೆಯ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡ ಚೆವರ್‌ಲೆಟ್ ಎಂಜಾಯ್ ಕಾರು ಬಹಿರಂಗ ಹರಾಜು

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಕ್ಷೇತ್ರಗಳಲ್ಲೂ ಜಯಭೇರಿ, 1 ಕ್ಷೇತ್ರಕ್ಕೆ ಅವಿರೋಧ ಆಯ್ಕೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ತಣ್ಣೀರುಪಂಥ ವಲಯದ ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!