31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇ 14: ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ” ಶಾಖೆ” ಉದ್ಘಾಟನೆ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ “ಮುದ್ದಿಗೆ ಶಾಖೆ”ಯ ಉದ್ಘಾಟನಾ ಸಮಾರಂಭವು ಮೇ 14 ರಂದು ಬೆಳಿಗ್ಗೆ 10ಕ್ಕೆ ಹತ್ಯಡ್ಕ ಮುದ್ದಿಗೆ ದಿವಾಕರ ತಾಮ್ಹನ್ ಕಾರ್‌ರವರ ಕಟ್ಟಡದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ , ಅರಸಿನಮಕ್ಕಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಮ್.ಎಸ್., ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷರಾದ ಶ್ರೀಕರ ಭಿಡೆ, ಎಂ. ಕೇಶವ ರಾವ್ , ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ನಿರ್ದೇಶಕರು ಹೆಚ್. ಸುಂದರ ತುಂಬೆತಡ್ಕ, ಸೂರಪ್ಪ ರಾಣೆಯಾರ್ ಸಂಗಮನಗರ ಮುದ್ದಿಗೆ , ಬಾಲಕೃಷ್ಣ ರೈ ಕೃಷಿಕರು, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಾಮನ ತಾಮ್ಹನ್‌ಕಾರ್, ದಿವಾಕರ ತಾಮ್ಹನ್‌ಕಾರ್ ಕಟ್ಟಡ ಮಾಲಕರು, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ. , ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ರವಿಚಂದ್ರ ರಾವ್ ನಿ. ಹಾಗೂ ನಿರ್ದೇಶಕರು, ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.

Related posts

ಕರಿಮಣಿ ಸರ ಸಹಿತ ಅಗತ್ಯ ವಸ್ತುಗಳು ಕಳೆದು ಹೋಗಿದೆ: ಸಿಕ್ಕಿದವರು ಸಂಪರ್ಕಿಸುವಂತೆ ಮನವಿ

Suddi Udaya

ಇಂದಬೆಟ್ಟುವಿನಲ್ಲಿ ದನದ ಕೊಟ್ಟಿಗೆ, ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

Suddi Udaya

ಕಣಿಯೂರು: ಯುವಕೇಸರಿ ತಂಡದ ವತಿಯಿಂದ ಧನಸಹಾಯ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಅಳದಂಗಡಿ ಸಹಕಾರಿ ಸಂಘಕ್ಕೆ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಅಧಿಕೃತ ಪಡಿತರ ಚೀಟಿ ನವೀಕರಣ ಕೇಂದ್ರ, ಬಸ್ ಪಾಸ್ ವಿತರಣಾ ಕೇಂದ್ರವಾದ ಕರ್ನಾಟಕ ಒನ್ ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!