25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಎ.10-14: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

ಬೆಳ್ತಂಗಡಿ: ತುಳುನಾಡಿನ ಸತ್ಯನಾಪುರದ ‘ಸತ್ಯದ ಸಿರಿಗಳ’ ಮೂಲ ಆಲಡೆಯ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರಾ ಮಹೋತ್ಸವ-ಶ್ರೀ ನಾಗದರ್ಶನ, ಆಶ್ಲೇಷಾ ಬಲಿ, ದೈವಗಳ ನೇಮೋತ್ಸವವು ಎ.10 ರಂದು ಪ್ರಾರಂಭಗೊಂಡು ಎ.14 ರವರೆಗೆ ವಿವಿಧ ಧಾರ್ಮಿಕ ವೈದಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಎ.10ರಂದು ಬೆಳಿಗ್ಗೆ ಪುಣ್ಯ ನದಿ ನೇತ್ರಾವತಿಯ ಮೈಂದ್ರಣ್ಣಾಯ (ಜಪದ ಗುಂಡಿ) ಗುಂಡಿಯಿಂದ ತೀರ್ಥವನ್ನು ತರುವುದು. ಸ್ವಸ್ತಿ ಪುಣ್ಯಾಹ, ಗಣಯಾಗ ನವಕ ಪ್ರಧಾನ, ಸತ್ಯನಾಪುರ ಅರಮನೆಯಿಂದ ಹೂ-ಹಿಂಗಾರ ತರುವುದು, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಶ್ರೀದೇವರ ಬಲಿ, ಮಹಾಪೂಜೆ, ಮಧ್ಯಾಹ್ನ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯಿAದ ಭಕ್ತಿ ಹೆಜ್ಜೆ – ಕುಣಿತ ಭಜನೆ, ರಾತ್ರಿ ದೇವರ ಉತ್ಸವ, ದೀಪಾರಾಧನೆ, ಭೂತರಾಜ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ ಜರಗಲಿರುವುದು.


ಎ.11 ರಂದು ಬೆಳಿಗ್ಗೆ ಗಣಹೋಮ, ಶತರುದ್ರಾಭಿಷೇಕ, ಶ್ರೀದೇವರ ಉತ್ಸವ, ನಾಗ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಪಜಿರಡ್ಕ ಶ್ರೀ ಓಂಕಾರೇಶ್ವರಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ, ಭಂಡಾರ ಬರುವುದು, ಕುಮಾರ ದರ್ಶನ, ರಾತ್ರಿ ಶ್ರೀದೇವರ ಉತ್ಸವ, ವಸಂತಕಟ್ಟೆ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ, ಸಾರ್ವಜನಿಕ ಅನ್ನಸಂತರ್ಪಣೆ, ಮೂಲ ಮಹಿಷಂತಾಯ ನೇಮ, ರಕ್ತೇಶ್ವರಿ ನೇಮ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ನೇಮೋತ್ಸವ, ಕುಮಾರ – ಪಂಜುರ್ಲಿ ದೈವದ ಭೇಟಿ ಪ್ರಸಾದ ವಿತರಣೆ ಜರಗಲಿರುವುದು. ಸಂಜೆ ನಡೆಯುವ ಭಜನಾ ಸಂಕೀರ್ತನೆಯ ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ನೆರವೇರಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.


ಎ.12 ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಶ್ರೀ ನಾಗಬ್ರಹ್ಮರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಪುಣ್ಯಾಹ, ಸ್ಥಳ ಶುದ್ಧಿ, ಕಲಾತತ್ವ ಹೋಮ, ಸರ್ವಪ್ರಾಯಶ್ಚಿತ್ತ, ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ, ಮಧ್ಯಾಹ್ನ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ, ಮಹಾಪೂಜೆ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಮತ್ತು ಗುರಿಪಳ್ಳ ಶ್ರೀ ಗುರುರಾಘವೆಂದ್ರ ಭಜನಾ ಮಂಡಳಿಯಿಂದ ಭಜನೆ ‘ಭಾವ-ಗಾನ-ಕುಣಿತ’, ರಾತ್ರಿ ಧಾರ್ಮಿಕ ಸಭೆ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನಡ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಇಂಜಿನಿಯರ್ ರಾಕೇಶ್ ಬಂಗೇರ, ಧಾರ್ಮಿಕ ಪರಿಷತ್ ಸದಸ್ಯರಾದ ಯೋಗೀಶ್ ಕುಮಾರ್, ಮಲ್ಲಿಕಾ ಪಕ್ಕಳ ಇನ್ನಿತರರು ಭಾಗವಹಿಸುವರು. ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಮರಿಕೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಲಿರುವರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಟೆ, ನಡ ಗ್ರಾ.ಪಂ ಸದಸ್ಯರಾದ ದಿವಾಕರ, ವಿನುತಾ, ಮಮತಾ ಉಪಸ್ಥಿತರಿರುವರು. ರಾತ್ರಿ ೭:೩೦ರಿಂದ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ “ವಾರ್ಷಿಕ ನಡ್ವಾಲ್ ಸಿರಿಜಾತ್ರೆ”, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಊರ-ಪರವೂರ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಶ್ರೀ ಸಿದ್ಧಿವಿನಾಯಕ ಕಲಾತಂಡ ಗುರಿಪಳ್ಳ ಅಭಿನಯದ ಕುತೂಹಲಭರಿತ ತುಳು ಹಾಸ್ಯಮಯ ನಾಟಕ “ಕಥೆ ಏರ್ ಬರೆಪೆರ್…? ” ಜರುಗಲಿರುವುದು.


ಎ.13ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಶ್ರೀ ದೇವರ ಬಲಿ, ಮಹಾಪೂಜೆ ರಾತ್ರಿ ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಭಜನೆ, ರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ಜಗಲಿರುವುದು. ಎ.14 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಶ್ರೀ ದೇವರ ಬಲಿ ಗ್ರಾಮ ದೈವ ಪಿಲಿಚಾಮುಂಡಿ ದೈವದ ನೇಮ, ಅವಭ್ರತ ಸ್ನಾನ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಧ್ವಜಾವರೋಹಣ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ತಿಳಿಸಿದರು.

Related posts

ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜಿರೆ ಕಾಲೇಜಿನ ವಿದ್ಯಾರ್ಥಿ ವಿನುತಾ ಆರ್. ನಾಯ್ಕ್ ಆಯ್ಕೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ, ನೂತನ ಸಮಿತಿ ರಚನೆ

Suddi Udaya

ಮಾ.21: ಇತಿಹಾಸ ಪ್ರಸಿದ್ದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಮತದಾರರ ಪಟ್ಟಿಯಲ್ಲಿ ಎಡವಟ್ಟು: ಮುಂಡಾಜೆಯ ಅಶ್ವಿನಿ ಎ. ಹೆಬ್ಬಾರ್ ಬಂಟ್ವಾಳ ಆಡಳಿತ ಸೌಧದಲ್ಲಿ ಮತದಾನ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ವೇಣೂರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!