31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಟಿಯು ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿ : ಉಜಿರೆಯ ಎಸ್.ಡಿ.ಎಂ ಗೆ ಪ್ರಶಸ್ತಿ

ಉಜಿರೆ : ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಮಂಗಳೂರು ವಿಭಾಗದ ಅಂತರ್ ಕಾಲೇಜುಗಳ ಕ್ರಿಕೆಟ್ ಪಂದ್ಯಾಟವು ನಿಟ್ಟೆಯಲ್ಲಿ ಜರಗಿತು. ಸಕ್ರೀಯವಾಗಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ಕ್ರಿಕೆಟ್ ತಂಡವು ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಸೆಮಿಫೈನಲ್ ಹಂತದ ಪಂದ್ಯದಲ್ಲಿ ಉಜಿರೆ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ತಂಡವು ಜಿಲ್ಲೆಯ ಕೆನರಾ ಇಂಜಿನಿಯರಿಂಗ್ ಕಾಲೇಜ್ ತಂಡದ ವಿರುದ್ಧ ರೋಚಕ (99/10 – 101/9 ) 1 ವಿಕೆಟ್ ಜಯ ಸಾಧಿಸಿ ಫೈನಲ್ ಪ್ರವೇಶ ಪಡೆಯಿತು. ಬಳಿಕ ಫೈನಲ್ ಹಂತದ ಪಂದ್ಯದಲ್ಲಿ ಸಾಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ತಂಡದ ವಿರುದ್ಧ ಸೆಣಸಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಈ ಮೂಲಕ ಶಿವಮೊಗ್ಗದಲ್ಲಿ ನಡೆಯಲಿರುವ ವಿಟಿಯು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ತಂಡವು ಆಯ್ಕೆಗೊಂಡಿದೆ. ಟೂರ್ನಮೆಂಟ್‌ನ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಎಸ್.ಡಿ.ಎಂ ತಂಡದ ಗೌತಮ್ ಆರ್. ಎಂ. ಪಡೆದುಕೊಂಡರು. ತಂಡಕ್ಕೆ ಉಜಿರೆಯ ತಾಂತ್ರಿಕ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಭಾಕರ್ ತರಬೇತಿಯನ್ನು ನೀಡಿರುತ್ತಾರೆ.

ಪ್ರಶಸ್ತಿ ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ಅಯಾನ್ ಖಾನ್ (ನಾಯಕ), ಸಾಹಿಲ್ ಬೋವಿ, ಅಭಯಚಂದ್ರ, ಆರ್ಯನ್ , ಶ್ರೀರಾಮ್ , ಪ್ರಜ್ವಲ್ , ಆಕಾಶ್ , ಶ್ರೇಯಸ್, ಗೌತಮ್ , ಬಸವರಾಜ್ , ಶಿಶಿರ್ , ತ್ರೈಲೋಕ್ಯಾ , ವಿವೇಕ್, ಸಾತ್ವಿಕ್ ಮತ್ತು ವಿಕ್ರಮ್ ಭಾಗವಹಿಸಿರುತ್ತಾರೆ.

Related posts

ಬೆಳ್ತಂಗಡಿ : ಬಿಜೆಪಿ ಮಂಡಲದ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ

Suddi Udaya

ಅರಸಿನಮಕ್ಕಿ: ಕಾಪು-ಉಪರಡ್ಕ ಬಳಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು 2 ವಿದ್ಯುತ್ ಕಂಬಗಳಿಗೆ ಹಾನಿ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಸಹರಾ ಆ್ಯಂಬುಲೆನ್ಸ್ ಪಲ್ಟಿ: ಮಾಲಾಡಿ ನಿವಾಸಿ ಶಬೀರ್ ಸಾವು

Suddi Udaya

ಬೆನಕ  ಹೆಲ್ತ್ ಸೆಂಟರ್ ನ ಔಷಧಾಲಯ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಸರ್ಕಾರಿ ಅಧಿಕಾರಿ, ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಯಲ್ಲಿರಬೇಕು: ಸಿಎಂ ಡಿಕೆಶಿ ಸೂಚನೆ -ರಾಜ್ಯ ಸರ್ಕಾರದಿಂದ ಆದೇಶ

Suddi Udaya
error: Content is protected !!