31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ರಾಡಿ -ಸಾವ್ಯ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕು ನಾರಾವಿ ವಲಯ ಕೊಕ್ರಾಡಿ ಸಾವ್ಯ ಒಕ್ಕೂಟದ ವತಿಯಿಂದ ಶಾಲೀಪುರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. 30ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಸಾಧನ ಸಮಾವೇಶ ಹಾಗೂ ಧಾರ್ಮಿಕ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿ ವಹಿಸಿಕೊಂಡು ಮುಖ್ಯ ಅತಿಥಿಯಾಗಿ ಉಡುಪಿ ಪ್ರಾದೇಶಿಕ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಇವರು ಯೋಜನೆ ನಡೆದು ಬಂದ ದಾರಿ ಪೂಜ್ಯರು ರಾಜ್ಯದ ಜನತೆಗೆ ಕೊಟ್ಟ ಅನುದಾನಗಳ ಬಗ್ಗೆ ಬೆಳ್ತಂಗಡಿ ತಾಲೂಕನ್ನು ಪರಿವರ್ತನೆ ಮಾಡಿದ ರೀತಿಯನ್ನು ತಿಳಿಸಿದರು. ತಾಲೂಕು ಯೋಜನಾಧಿಕಾರಿ ಹರೀಶ್ ಹೆಚ್ಎಸ್ ಶುಭ ಹಾರೈಸಿದರು. ಡಾ. ವಿಷ್ಣುಕುಮಾರ್ ಹೆಗ್ಡೆ ಇವರು ಯೋಜನೆಯಿಂದ ಕೊಕ್ರಾಡಿ ಭಾಗದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳ ಬಗ್ಗೆ ಇದರಲ್ಲಿ ತನ್ನನ್ನು ತಾನು ಭಾಗಿಯಾಗುವ ಬಗ್ಗೆ ಯೋಜನೆಯಿಂದ ಗ್ರಾಮದಲ್ಲದ ಬದಲಾವಣೆಯ ಬಗ್ಗೆ ತಿಳಿಸಿದರು.

ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ರಾಜು ಶೆಟ್ಟಿ ಪೊನ್ನೆಮರಾಡ್ಡ, ಜಯರಾಜ ಹೆಗ್ಡೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ, ಜಗದೀಶ್ ಹೆಗ್ಡೆ, ಕೊಕ್ರಾಡಿ ಒಕ್ಕೂಟ ಅಧ್ಯಕ್ಷೆ ವಾರಿಜಾ, ಸಾವ್ಯ ಒಕ್ಕೂಟ ಅಧ್ಯಕ್ಷೆ ಯಮುನಾ ಉಪಸ್ಥಿತರಿದ್ದರು .

ಈ ಸಂದರ್ಭ 60 ವರ್ಷ ಮೇಲ್ಪಟ್ಟ 42 ಮಂದಿ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಅತ್ಯುತ್ತಮ ಸ್ವಸಹಾಯ ಸಂಘ ಪ್ರಗತಿಬಂಧು ತಂಡವನ್ನು ಗುರುತಿಸಿ ಗೌರವಿಸಲಾಯಿತು. ಅತಿಹೆಚ್ಚು ಸದಸ್ಯರು ಸೇರ್ಪಡೆ ಮಾಡಿದ ಸಂಘವನ್ನು ಗೌರವಿಸಲಾಯಿತು. ಒಕ್ಕೂಟದ ಕ್ರೀಡಾಕೂಟದ ಹಲವು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹಿಳೆಯರಿಗೆ ಹಾಗೂ ಪುರುಷ ವಿಭಾಗದವರಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜನಜಾಗೃತಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಜಯರಾಜ ಹೆಗ್ಡೆ ಮತ್ತು ರಾಜ ಶೆಟ್ಟಿ ಪೊನ್ನಮರಡ್ಡ ಹಾಗೂ ಯೋಜನೆಯ ಸ್ಥಾಪಕ ಅಧ್ಯಕ್ಷ ಕೊರಗಪ್ಪ ಪೂಜಾರಿ ಇವರನ್ನು ಗೌರವಿಸಲಾಯಿತು. ಸಿಎಸ್ಸಿ ಒಲಿಂಪ್ಯಾಡ್ ಪರೀಕ್ಷೆ 7 ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.

ಕೊಕ್ರಡಿ ಸಾವ್ಯ ಒಕ್ಕೂಟದ ಸೇವಾ ಪ್ರತಿನಿಧಿ ಶಶಿಧರ್ ಕುಲಾಲ್ ವರದಿ ಮಂಡನೆ ಮಾಡಿದರು. ಪ್ರೀತಮ ಕುಲಾಲ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ನಾರಾವಿ ವಲಯ ಮೇಲ್ವಿಚಾರಕರು ವಿಶಾಲ ಕೆ ಸ್ವಾಗತಿಸಿ, ಗ್ರಾಮ ಸಮಿತಿ ಅಧ್ಯಕ್ಷ ಶೇಖರ್ ಸುವರ್ಣ ವಂದಿಸಿದರು.

ಒಕ್ಕೂಟ ಸದಸ್ಯರು ವ್ರತದಾರಿಗಳಾಗಿ ಭಾಗವಹಿಸಿ ದರು. ಪೆರಾಡಿ ಸೇವಾದಾರರಾದ ಭವ್ಯ , ಅರ್ಚನಾ, ಸೇವಪ್ರತಿನಿಧಿ ಉಷಾ, ಮಮತಾ, ಹರಿಣಾಕ್ಷಿ ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯಕ್ಷಗಾನ ತರಗತಿ ಆರಂಭ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಆಯುಧ ಪೂಜೆ

Suddi Udaya

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ : ಶ್ರೀ ಧ.ಮಂ.ಆಂ.ಮಾ. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

Suddi Udaya
error: Content is protected !!