23.9 C
ಪುತ್ತೂರು, ಬೆಳ್ತಂಗಡಿ
September 30, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಬೆಳ್ತಂಗಡಿ ಮಹಾಸಭೆ

ದಿನಾಂಕ: ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ) ಬೆಳ್ತಂಗಡಿ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಮಧುರರವರ ಅಧ್ಯಕ್ಷತೆಯಲ್ಲಿ ಮೇ 12ರಂದು ಆಯೋಜಿಸಲಾಯಿತು.

ಸುದರ್ಶನಿ ಸ್ವಾಗತಿಸಿ ವಿನುತಾ ರಜತ್ ಹಾಗೂ ರೂಪ ಪ್ರಭು ಪ್ರಾರ್ಥನೆ ಹಾಡುವುದರೊಂದಿಗೆ ಸಂಜೀವಿನಿ ಒಕ್ಕೂಟದ ಧ್ಯೇಯ ಗೀತೆಯೊಂದಿಗೆ ಮಹಾಸಭೆ ಸಭೆಯ ಪ್ರಾರಂಭವಾಯಿತು. ನೇತ್ರಾವತಿ ಒಕ್ಕೂಟದ ಕಾರ್ಯದರ್ಶಿ ಗಿರಿಜಾ ಒಕ್ಕೂಟದ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ವಾಚಿಸಿ ಸಭೆಯಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಮುಂಚಿತವಾಗಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ತಾಲೂಕು ಮಟ್ಟದ ಒಕ್ಕೂಟದ ನಿಯಮ & ನಿಭಂದನೆಗಳನ್ನು ಸಭೆಯಲ್ಲಿ ಮಂಡಿಸಿದರು. ನಂತರ ಆಯ್ಕೆ ಪ್ರಕ್ಯಿಯೆಯ ಮುಖಾಂತರ ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಧನಲಕ್ಷ್ಮೀ ಜನಾರ್ಧನ್ ಇವರನ್ನು ಕಾರ್ಯದರ್ಶಿಯಾಗಿ ವಿನುತಾ ರಜತ್ ಗೌಡ, ಕೋಶಾಧಿಕಾರಿಯಾಗಿ ಸುದರ್ಶನಿ, ಉಪಾಧ್ಯಕ್ಷರಾಗಿ ಲಿಲ್ಲಿ ವೇಗಸ್, ಸಹ ಕಾರ್ಯದರ್ಶಿಯಾಗಿ ರೂಪ ಪ್ರಭು ಇವರನ್ನು ಸರ್ಮಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರದಲ್ಲಿ ಅಧಿಕಾರ ಹಸ್ತಾಂತರ ನಡೆಸಿ ಸಭೆ ಅಧ್ಯಕ್ಷರು ಹಾಗೂ ನೂತನ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕು ಒಕ್ಕೂಟದ ಕೋಶಾಧಿಕಾರಿ ಬಂದ ಎಲ್ಲರಿಗೂ ಧನ್ಯವಾದ ಸಮರ್ಪಿಸುವ ಮೂಲಕ ಮಹಾಸಭೆಯು ಸಮಾಪ್ತಿಗೊಂಡಿತು. ಕಾರ್ಯಕ್ರಮದಲ್ಲಿ 48 ಗ್ರಾಮ ಮಟ್ಟದ ಒಕ್ಕೂಟಗಳಿಂದ ಅಧ್ಯಕ್ಷರು/ಕಾರ್ಯದರ್ಶಿಗಳು, ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, MIS, BRP-PRI ಉಪಸ್ಥಿತರಿದ್ದರು.

Related posts

ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 11 ಕೆಜಿ 365 ಗ್ರಾಂ ಗಾಂಜಾ ಹಾಗೂ 42.57 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳ ವಿಲೇವಾರಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ

Suddi Udaya

ನೆಟ್ ಬಾಲ್ ಕ್ರೀಡೆಯಲ್ಲಿ ಎಸ್.ಡಿ.ಯಂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

Suddi Udaya

ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರ ಶ್ರೀನಿವಾಸ ಎಂ ಸಿದ್ದಪಡಿಸಿದ ಸಂಶೋಧನಾ ವರದಿ ಬಿಡುಗಡೆ

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya
error: Content is protected !!