31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇ 17: ಬೆಳ್ತಂಗಡಿ ರೋಟರಿ ಸಂಸ್ಥೆಯಿಂದ “ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿ ಗೋಷ್ಠಿ” ಸಮ್ಮೇಳನ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಸಂಸ್ಥೆ ಒಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆ. ಆದರೆ ಅದರ ಸದಸ್ಯರಲ್ಲಿ ಅನೇಕ ಉತ್ತಮ ವಾಗ್ಮಿಗಳು, ಲೇಖಕರು, ಸಾಹಿತಿಗಳು ಇದ್ದಾರೆ. ಪ್ರಸಕ್ತ ಸಾಲಿನ ಅಧ್ಯಕ್ಷ ರೋ. ಡಾ ಪ್ರಕಾಶ ಪ್ರಭು ಹಾಗೂ ಕಾರ್ಯದರ್ಶಿ ಡಾ ಎಂ ಎಂ ದಯಾಕರರು, ಹಾಗೂ ಸದಸ್ಯ ರೋ. ಸೋಮಶೇಖರ ಶೆಟ್ಟಿಯವರು ಉತ್ತಮ ಲೇಖಕರು ಮತ್ತು ಸಾಹಿತಿಗಳು, ಡಾ ಪ್ರದೀಪ, ಪ್ರತಾಪ ಸಿಂಹ ನಾಯಕ್, ಧನಂಜಯ್ ರಾವ್ ಮುಂತಾದ ಅನೇಕ ಸದಸ್ಯರು ಉತ್ತಮ ವಾಗ್ಮಿಗಳು. ಹಾಗಾಗಿ ಸಹಜವಾಗಿ ಸಾಹಿತ್ಯದೆಡೆಗೂ ಆಸಕ್ತಿಯನ್ನು ಬೆಳ್ತಂಗಡಿ ರೋಟರಿ ಸಂಸ್ಥೆ ಹೊಂದಿದೆ.

ಈ ವರೇಗೆ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 450ಕ್ಕೂ ಮಿಕ್ಕಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿರುವ ಈ ಸಂಸ್ಥೆ, ಈ ವರ್ಷದ ಕೊನೆಯ ಸೇವಾ ಕಾರ್ಯಕ್ರಮವಾಗಿ ಬೆಳ್ತಂಗಡಿಯ ರೋಟರೀ ಕ್ಲಬ್ ನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾಹಿತ್ಯ ಕ್ಷೇತ್ರವನ್ನು ಆಯ್ದುಕೊಂಡಿದೆ.

ಮೇ 17 ಉಜಿರೆಯ ಅರಳೀ ರಸ್ತೆಯಲ್ಲಿರುವ ರೋಟರೀ ಸೇವಾ ಭವನದಲ್ಲಿ “ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿ ಗೋಷ್ಠಿ” ಸಮ್ಮೇಳನ ನಡೆಯಲಿದೆ. ಶರತ್ ಕೃಷ್ಣ ಪಡ್ವೆಟ್ನಾಯರ ಗೌರವ ಅಧ್ಯಕ್ಷತೆಯಲ್ಲಿ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ ಎಂ ಎಂ ದಯಾಕರ ರವರ ನೇತೃತ್ವದಲ್ಲಿ ನಡೆಯಲಿದೆ. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯದುಪತಿ ಗೌಡರು ಸಮ್ಮೇಳನ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ ಕಲ್ಕೂರರು ಉದ್ಘಾಟಕರಾಗಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಎಂ ಪಿ ಶ್ರೀನಾಥ , ಊರಿನ ಗಣ್ಯ ವ್ಯಕ್ತಿಗಳಾದ ಸಂಧ್ಯಾ ಗ್ರೂಪ್ಸ ನ ಮಾಲಕ ರಾಜೇಶ ಪೈ, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ ಕುಮಾರ್ ಜೈನ್, ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ ಭಿಡೆ, ವಸಂತ ಶೆಟ್ಟಿ, ಶ್ರದ್ಧಾ ಪ್ರಿಂಟರ್ಸ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 9:30 ಕ್ಕೆ ಉದ್ಘಾಟನೆ ಮತ್ತು ಪ್ರಬುದ್ಧ ಗೋಷ್ಠಿಗಳು “ಎಕ್ಸೆಲ್ ವಿದ್ಯಾ ಸಂಸ್ಥೆ ಸಾಹಿತ್ಯ ವೇದಿಕೆ”ಯ ಮೇಲೆ ಹಾಗೂ ಮಧ್ಯಹ್ನ 1:45 ಕ್ಕೆ ಬಹುಭಾಷಾ ಕವಿ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ, ಹಿರಿಯ ಸಾಹಿತಿ ದಿವಂಗತ “ಎನ್ ಜಿ ಪಟವರ್ಧನ್ ಕಲಾ ವೇದಿಕೆ”ಯ ಮೇಲೆ ನಡೆಯಲಿರುವುದು. ಬೆಳಗ್ಗೆ ಉದ್ಛಾಟನಾ ಕಾರ್ಯಕ್ರಮದ ಬಳಿಕ ಡಾ. ಹಳೆಮನೆ ರಾಜ ಶೇಖರ್ ರವರಿಂದ “ಹೊಸ ತಲೆ ಮಾರು ಮತ್ತು ಓದಿನ ಅಭಿರುಚಿ”, ಡಾ ದಿವಾ ಕೊಕ್ಕಡ ರವರಿಂದ “ಮನುಜ ಮತ ವಿಶ್ವ ಪಥ”, ಡಾ ರವೀಶ ಪಡಿಮಲೆ ಯವರಿಂದ “ತುಳುನಾಡಿನ ದೈವಾರಾಧನೆ”ಪ್ಪಬುದ್ಧ ಗೋಷ್ಠಿಗಳು ಹಾಗೂ ಡಾ ಪ್ರದೀಪ ಆಟುಕುಕ್ಕೆ ಅವರಿಂದ ಸಂವಹನ ಕಾರ್ಯಕ್ರಮ ನಡೆಯಲಿವೆ. ಮಧ್ಯಾಹ್ನ ಬಹುಭಾಷ ಕವಿಗೋಷ್ಠಿನಡೆಯಲಿರುವುದು. ಬೆಳಗ್ಗೆಯಿಂದ ಸಾಯಂಕಾಲದವರೇಗೆ ನಿರಂತರ ಊಟ ತಿಂಡಿ , ತಂಪು ಪಾನೀಯದ ಉಪಚಾರ ಇರುತ್ತದೆ.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಸಾಮೂಹಿಕ ಛಾಯಾಚಿತ್ರ ಸ್ಪರ್ಧೆ ಇರುತ್ತದೆ. ಕನಿಷ್ಠ 7 ಜನರು, ಆಕರ್ಷಕ ಸಮವಸ್ತ್ರಧಾರಿಗಳಾಗಿ, ಇಡೀ ದಿನದ ಕಾರ್ಯಕ್ರಮವನ್ನು ಒಟ್ಟಿಗೆ ಕೂತು ವೀಕ್ಷಣೆ ಮಾಡಿ, ಛಾಯಾಚಿತ್ರ ತೆಗೆದು ಅಥವ ರೀಲ್ಸ್ ಮಾಡಿ ಅಧ್ಯಕ್ಷರ ವಾಟ್ಸಪ್ ಗೆ ಕಳುಹಿಸಬೇಕು. ಪ್ರಥಮ ತಂಡಕ್ಕೆ ರೂ 2,000/-, ದ್ವಿತಿಯ ತಂಡಕ್ಕೆ 1,000/-, ತೃತೀಯ ತಂಡಕ್ಕೆ ರೂ 500 ಬಹುಮಾನ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷರ ವಾಟ್ಸಪ್ ಸಂಖ್ಯೆ 9448060206 ಕ್ಕೆ ಕರೆ ಮಾಡಿ ವಿಚಾರಿಸಬಹುದು.

Related posts

ಮೊಬೈಲ್ ಹಿಂದಿರುಗಿಸಿಕೊಟ್ಟು ಮಾನವೀಯತೆ ಮೆರೆದ ಬೆಳ್ತಂಗಡಿ ಸಂತೆಕಟ್ಟೆ ಗಣೇಶ್ ಮೆಡಿಕಲ್ ಮಾಲೀಕ

Suddi Udaya

ಆಟೋರಿಕ್ಷಾ ಕಾರ್ಮಿಕರ ಬದುಕು ಉಳಿಸಲು ದರ ಪರಿಷ್ಕರಣೆ ಅನಿವಾರ್ಯ: ಬಿ.ಎಂ.ಎಸ್

Suddi Udaya

ತೆರೆದ ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯಿಂದ ರಕ್ಷಣೆ

Suddi Udaya

ಶಿಶಿಲ : ಕಂಡೆಚ್ಚಾರು ನಿವಾಸಿ ಶ್ರೀಮತಿ ಪೂರ್ಣಿಮಾ ನಿಧನ

Suddi Udaya

ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗೌರವಾರ್ಪಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!