30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ೧೮ನೇ ಶಿರ್ತಾಡಿ ಶಾಖೆಯ ಉದ್ಘಾಟನೆ: ಸಂಘ ಬೆಳೆದಂತೆ ಇನ್ನಷ್ಟು ಶಾಖೆಗಳು ತಲೆಎತ್ತಿ ನಿಲ್ಲುವುದಕ್ಕಿದೆ: ಸಂಜೀವ ಪೂಜಾರಿ

ಬೆಳ್ತಂಗಡಿ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ೧೮ನೇ ಶಿರ್ತಾಡಿ ಶಾಖೆಯ ಉದ್ಘಾಟನಾ ಸಮಾರಂಭವು ಮೇ೩ರಂದು ಶಿರ್ತಾಡಿ ಮಕ್ಕಿ ಹೈಸ್ಕೂಲ್ ರೋಡ್ ಬಳಿಯ ಕಟ್ಟಡದಲ್ಲಿ ಜರುಗಿತು.

ನೂತನ ಶಿರ್ತಾಡಿ ಶಾಖೆಯನ್ನು ಮಾಜಿ‌ ಸಚಿವ ರಮಾನಾಥ ರೈ ಉದ್ಘಾಟಿಸಿ ಸಂಜೀವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಸಂಘವು ವಿಶೇಷವಾದ ಸಾಧನೆ ಮಾಡಿದೆ ಎಂದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ನಮ್ಮ ಸಂಘ ಇಂದು ಸಾಧನೆಯ ಹಾದಿಯನ್ನು ಹಿಡಿದು, ಹೊಸ ಭಾಷ್ಯವನ್ನು ಬರೆದಿದೆ ಎನ್ನುವುದಕ್ಕೆ ಶಿರ್ತಾಡಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ೧೮ನೇ ಶಾಖೆಯೇ ಸಾಕ್ಷಿಯಾಗಿದೆ. ಸಂಘ ಬೆಳೆದಂತೆ ಇನ್ನಷ್ಟು ಶಾಖೆಗಳು ತಲೆಎತ್ತಿ ನಿಲ್ಲುವುದಕ್ಕಿದೆ. ಮಹಿಳೆಯರು ಸದೃಢರಾಗಬೇಕು ಎಂಬ ಉದ್ದೇಶದಿಂದ ಸಂಘದಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದೇವೆ. ಇದೀಗ ಶಿರ್ತಾಡಿ ಭಾಗದ ಜನಸಾಮಾನ್ಯರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ೧೮ನೇ ಶಾಖೆ ತೆರದುಕೊಂಡಿದೆ ಎಂದರು.

ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಶಿರ್ತಾಡಿ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಸೋಮನಾಥ ಶಾಂತಿ, ಶಿರ್ತಾಡಿ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ ಕಾಶಿಪಟ್ಟ, ಶಿರ್ತಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಫೆಡ್ರಿಕ್ ಪಿಂಟೊ, ನವಮೈತ್ರಿ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಕಟ್ಟಡ ಮಾಲೀಕ ರತ್ನಾಕರ ಬುಣ್ಣನ್,ಪ್ರಮುಖರಾದ ಬೇಬಿ ಕುಂದರ್, ಮಹಮ್ಮದ್ ಶಿರ್ತಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ ಚೇಳೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಶಾಖಾ ವ್ಯವಸ್ಥಾಪಕಿ ಅಕ್ಷಿತಾ ಕೆ, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತಾ ಎಂ, ವಾಣಿ ವಸಂತ, ಆಶಿಶ್ ಪೂಜಾರಿ, ಚಿದಾನಂದ ಎಂ.ಕಡೇಶ್ವಾಲ್ಯ, ಎಂ.ಕೆ. ಪ್ರಸಾದ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು ಮ ಸಂಘದ ನಿರ್ದೇಶಕ ಎಂ.ಕೆ ಪ್ರಸಾದ್ ಸ್ವಾಗತಿಸಿ,ಜಯಶಂಕರ್ ಕಾನ್ಸಾಲೆ ವಂದಿಸಿದರು.

Related posts

ನೆರಿಯ: ಆಲಂಗಾಯಿ ನಿವಾಸಿ ಕೋಟಿಯಪ್ಪ ಮಲೆಕುಡಿಯ ನಿಧನ

Suddi Udaya

ಯಕ್ಷ ಭಾರತಿ ಕನ್ಯಾಡಿ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜಿಲ್ಲಾ ಮಟ್ಟದ ಸಹಕಾರಿಗಳ ಹಾಗೂ ನವೋದಯ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಗುರುವಾಯನಕೆರೆಯ ಸಿಬ್ಬಂದಿ ಪ್ರವೀಣ್ ಕುಮಾರ್ ರವರಿಗೆ ಪ್ರಶಸ್ತಿ

Suddi Udaya

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ’ ತರಬೇತಿ: ಅರ್ಜಿ ಆಹ್ವಾನ

Suddi Udaya

ವಿಧಾನ ಸಭಾ ಚುನಾವಣೆ: ಸಿ.ಆರ್.ಪಿ.ಎಫ್ ತಂಡ ಬೆಳ್ತಂಗಡಿಗೆ

Suddi Udaya
error: Content is protected !!