31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮದುವೆ ಸಮಾರಂಭದಲ್ಲಿ ಮೊಳಗಿದ ವಿಷ್ಣು ಸಹಸ್ರನಾಮ

ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಪಾಶ್ಚಾತ್ಯ, ಸಿನಿಮಾ ಸಂಸ್ಕೃತಿ, ನೃತ್ಯ ಸಹಿತ ನಾನಾ ಆಡಂಬರಗಳು ಸಾಮಾನ್ಯವಾಗಿದ್ದಾರೆ ಮೇ 14 ರಂದು ನಡೆದ ವಿವಾಹ ಸಮಾರಂಭ ಒಂದರಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮವನ್ನು ಪಠಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಬೆಂಗಳೂರಿನ ಪ್ರಮೀಳಾ ಹಾಗೂ ಅಂತ್ರ ಹರೀಶ್ ರಾವ್ ದಂಪತಿ ಪುತ್ರ ಶ್ರೀಹರಿದಾಸ ಅವರ ವಿವಾಹ ಬೆಂಗಳೂರಿನ ರಶ್ಮಿ ಹಾಗೂ ಶ್ರೀಧರ ಬಿ.ಎಸ್. ಅವರ ಪುತ್ರಿ ಸ್ವಾತಿ ಮನಸ್ವಿನಿಯ ಜತೆ ಜರಗಿತು. ಮಧ್ಯಾಹ್ನ 12.05ರ ಸುಮೂಹೂರ್ತದಲ್ಲಿ ನಡೆದ ವಿವಾಹ ಸಮಾರಂಭದ ಸುಮಾರು 25 ನಿಮಿಷಗಳ ಕಾಲ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇಲ್ಲಿನ ಸದಸ್ಯರು ಹಾಗೂ ಭಕ್ತರು ನಾವೂರಿನ ವೈದ್ಯ ಡಾ. ಪ್ರದೀಪ್ ಆಟಿಕುಕ್ಕೆಯವರ ನೇತೃತ್ವದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದ 400ಕ್ಕಿಂತಲೂ ಅಧಿಕ ಮಂದಿಯ ಜೊತೆ ವಿಷ್ಣು ಸಹಸ್ರನಾಮವನ್ನು ಏಕಕಾಲದಲ್ಲಿ ಪಠಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಹಳೆ ಪದ್ಧತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ನಮ್ಮ ಪದ್ಧತಿಗಳ ಹಿಂದೆ ಅನೇಕ ವೈಜ್ಞಾನಿಕ ಹಿನ್ನೆಲೆಗಳು ಇದ್ದು, ಇವುಗಳ ಮಹತ್ವ ಅರಿತು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವಂತೆ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದು ವರನ ಸೋದರ ಮಾವ ಚಾರ್ಮಾಡಿಯ ಪ್ರಕಾಶ ನಾರಾಯಣ ರಾವ್ ಹೇಳಿದರು.

Related posts

ಮಾ. 22 : ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆಯ ರಥಬೀದಿಯಲ್ಲಿ ಅದ್ದೂರಿಯ ಆಳ್ವಾಸ್ ಸಾಂಸ್ಕೃತಿಕ ವೈಭವ

Suddi Udaya

ನಾರಾವಿ ವಲಯ ಮಟ್ಟದ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಕಡಿರುದ್ಯಾವರ ಮತ್ತು ಮುಂಡಾಜೆ ಪಂಚಾಯತ್ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಮೊಬೈಲ್ ವಿತರಣೆ

Suddi Udaya

ಹಾಪ್ ಕಾಮ್ಸ್ ನಿರ್ದೇಶಕರಾಗಿ  ರತ್ನರಾಜ್ ಪೇರಂದಬೈಲ್ ಆಯ್ಕೆ        

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ವೇಣೂರು ಸಹಕಾರಿ ಸಂಘಕ್ಕೆ ಪ್ರಶಸ್ತಿ

Suddi Udaya

ಮಾ.30: ಲಕ್ಷ್ಮೀ ಇಂಡಸ್ಟೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya
error: Content is protected !!