23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೂ.30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಭಿಯಾನ ಆರಂಭ

ಬೆಂಗಳೂರು : ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್‌ಗೆ (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ದಿನಾಂಕ ಘೋಷಣೆ ಆಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30 ರಿಂದ ಜು.29 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅದ್ಭುಕುಮಾರ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಈಗಾಗಲೇ ಎಸ್‌ಐಆ‌ರ್ ಗಾಗಿ ಮ್ಯಾಪ್ ಕಾರ್ಯ ಮಾಡಲಾಗಿದೆ. ಎಸ್‌ಐಆರ್‌ಗೆ ಈಗಾಗಲೇ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30 ರಿಂದ ಜು.29 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಸೇರಲು 18 ವರ್ಷ ಪೂರ್ಣವಾಗಿರಬೇಕು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ” ಎಂದರು. “5.55 ಕೋಟಿ ಮತದಾರರನ್ನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಒಳಪಡಿಸಲಾಗುತ್ತೆ. ಎಸ್‌ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಅತ್ಯಂತ ಮುಖ್ಯ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ 2 ಸೆಟ್ ಗಣತಿ ನಮೂನೆಗಳನ್ನ ತಲುಪಿಸಲಿದ್ದಾರೆ. ವಿಶೇಷವೆಂದರೆ, ಗಣತಿ ನಮೂನೆಯಲ್ಲಿರುವ ಪ್ರತಿ ಮತದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ. ಬೂತ್‌ ಮಟ್ಟದ ಅಧಿಕಾರಿಗಳು ಗಣತಿ ನಮೂನೆಯನ್ನ ಮನೆಗೆ ತಂದಾಗ ಸಾರ್ವಜನಿಕರು ಅದರಲ್ಲಿ 1 ಸೆಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಮರಳಿ ನೀಡಬೇಕು. ಮತ್ತೊಂದು ಸೆಟ್ ಗಣತಿ ನಮೂನೆಯನ್ನು ಭವಿಷ್ಯದ ಸಾಕ್ಷಿಗಾಗಿ ಮತದಾರರೇ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು. “ಇನ್ನು 2002ರ ಮತದಾರರ ಪಟ್ಟಿಯಲ್ಲಿ ಯಾರ ಹೆಸರು ದಾಖಲಾಗಿದೆಯೋ, ಅಂತಹವರ ಹೆಸರುಗಳನ್ನ ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಓಪನ್ ಮಾಡಲಾಗುತ್ತೆ ಮತದಾರರು ಡೌಟ್ ಇದ್ರೆ ಪರಿಹಾರ ಕಂಡುಕೊಳ್ಳಬಹುದು. ಆಗಸ್ಟ್ 8 ರಂದು ಕರುಡು ಮತದಾರರ ಪಟ್ಟಿ ರಿಲೀಸ್ ಮಾಡಲಾಗುತ್ತೆ ಆಕ್ಷೇಪಣೆಗಳನ್ನ ಸಲ್ಲಿಸಬಹುದು” ಎಂದು ತಿಳಿಸಿದರು.

Related posts

ಸೆ.13, 14 : ವಾಣಿ ಕಾಲೇಜಿನಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ

Suddi Udaya

ಕಕ್ಕಿಂಜೆ ಇಷ್ಟ ದೇವತಾ ಬೆಟ್ಟ ಶ್ರೀ ಇಷ್ಟ ದೇವತಾ ಇದರ ಪ್ರತಿಷ್ಠಾಪನೆಯ ವಿಜ್ಞಾಪನ ಪತ್ರ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತಿಗಾರರ ಸಂಘದ ಅಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ವಿ ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಆಯ್ಕೆ

Suddi Udaya

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಮೀನು ಮರಿಗಳ ಬಿತ್ತನೆ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಉರುವಾಲು: ಬಾಯ್ತಾರು ಕಾರಿಂಜ ಶ್ರೀ ವನಶಾಸ್ತರ ದೇವಸ್ಥಾನಕ್ಕೆ ರಕ್ಷಿತ್ ಶಿವರಾಂ ಭೇಟಿ: ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ

Suddi Udaya

ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಧಾರ್ಮಿಕ ಸಂವಾದ ಕಾರ್ಯಕ್ರಮ

Suddi Udaya
error: Content is protected !!