23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಹರೀಶ್ ಶೆಟ್ಟಿ ಸಬ್ ಲೆಫ್ಟಿನೆಂಟ್ ರ‍್ಯಾಂಕ್ 

ಉಜಿರೆ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಶೆಟ್ಟಿ ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಕಾಂಪ್ಟಿಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಪ್ರತಿಷ್ಠಿತ ಪ್ರೀ-ಕಮಿಷನ್ ಕೋರ್ಸ್ (PRCN) ಯಶಸ್ವಿಯಾಗಿ ಪೂರ್ಣಗೊಳಿಸಿ ರಾಷ್ಟ್ರೀಯ ಕೆಡೆಟ್ ಕೋರ್ (NCC) ನೌಕ ವಿಭಾಗದಲ್ಲಿ ಸಬ್ ಲೆಫ್ಟಿನೆಂಟ್ ರ‍್ಯಾಂಕ್  ಪಡೆಯುದರ ಮೂಲಕ ಎನ್.ಸಿ.ಸಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇವರು ಜನವರಿ 5 ರಿಂದ ಏಪ್ರಿಲ್ 4ರ ವರೆಗೆ ನಡೆದ ತರಬೇತಿಯಲ್ಲಿ, ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾದ ನಾಯಕತ್ವ, ಶಿಸ್ತು, ಸಂಘಟನಾ ಚಾತುರ್ಯ ಮತ್ತು ಡ್ರಿಲ್ ಮುಂತಾದ ವಿಷಯಗಳ ಕುರಿತು ತರಬೇತಿ ಪಡೆದುಕೊಂಡಿದ್ದಾರೆ. ಇವರಿಗೆ ಎನ್.ಸಿ.ಸಿ.ಯ ಮಹಾನಿರ್ದೇಶಕರು (DGNCC) ಸಬ್ ಲೆಫ್ಟಿನೆಂಟ್ ಪದವಿಯನ್ನು ನೀಡಿ ಗೌರವಿಸಿದ್ದಾರೆ.

ಮೂಲತಃ ಉಡುಪಿಯ ಕುಂದಾಪುರ ತಾಲೂಕಿನ ಮುದೂರಿನವರಾಗಿದ್ದು, ಧಾರವಾಡದ ಡಾ. ಡಿ ಜಿ ಶೆಟ್ಟಿ ವಿದ್ಯಾ ಸಂಸ್ಥೆಯಲ್ಲಿ ಪದವಿಯನ್ನು ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್‌ , ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

“ಹರೀಶ್ ಶೆಟ್ಟಿಯವರು ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ. ಹನ್ನೊಂದು ವರ್ಷಗಳಿಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಎನ್.ಸಿ.ಸಿ ನೌಕ ವಿಭಾಗದಲ್ಲಿ ಕೇರ್ ಟೇಕರ್ ಆಗಿ ನೇಮಕಗೊಂಡಿದ್ದರು. ಇದೀಗ ಕಠಿಣ ಪರಿಶ್ರಮ, ಶಿಸ್ತು ಮತ್ತು ದೃಢತೆಯಿಂದ PRCN ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿ, ಸಬ್ ಲೆಫ್ಟಿನೆಂಟ್ ರ್ಯಾಂಕ್ ಪಡೆಯುವುದರ ಮೂಲಕ ಕಾಲೇಜಿನ ಎನ್. ಸಿ.ಸಿ ನೌಕ ವಿಭಾಗದ ಅಸೋಸಿಯೇಟ್ ಎನ್.ಸಿ.ಸಿ ಆಫೀಸರ್ ಆಗಿ ನೇಮಕಗೊಂಡಿರುವುದು ಪ್ರಶಂಸನೀಯ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
– ಪ್ರೊ. ವಿಶ್ವನಾಥ ಪಿ. ಪ್ರಾಂಶುಪಾಲರು, ಎಸ್‌.ಡಿ.ಎಂ ಕಾಲೇಜು ಉಜಿರೆ

Related posts

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya

ವಾಣಿ ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋಧಿ ದಿನಾಚರಣೆ

Suddi Udaya

ಅಳದಂಗಡಿ: ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಉದ್ಘಾಟನೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!