24.9 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು: ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ನಿಂದ ನೋಟ್ ಪುಸ್ತಕ ವಿತರಣೆ, ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ

ನಾವೂರು: ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ನಿಂದ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ 15ರಂದು ನಡೆಯಿತು.

ಸಂಜೆ ದೈವ ದೇವರ ಪ್ರಸಾದ ರೂಪದಲ್ಲಿ ನಾವೂರು ಗ್ರಾಮದ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಬರಹ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲಕ್ಷ್ಣಣ ಗೌಡ, ಪ್ರಮುಖರಾದ ಭುಜಬಲಿ ಧರ್ಮಸ್ಥಳ, ಜಾರಪ್ಪ, ಅರುಣ್, ವಿಜಯ್, ಪತ್ರಕರ್ತ ಮನೀಶ್ ವಿ. ಅಂಚನ್ ಪಾಲೇದು, ರವಿರಾಜ್ ಜೈನ್ ಬಡೆಕ್ಕಾವು ಗುತ್ತು, ವಸಂತ ಇಡ್ಯಲ, ರವಿ, ರಕ್ಷಿತ್ ಅಜಿಲ ಬಡೆಕ್ಕಾವು ಗುತ್ತು ಉಪಸ್ಥಿತರಿದ್ದರು.

ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು. ರತ್ನಾಕರ ಬಿ. ನಾವೂರು ಪ್ರಾಸ್ತಾವಿಕವಾಗಿ ಮಾತನಾಡಿ ಧನ್ಯವಾದವಿತ್ತರು.

ಬಳಿಕ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ನಡೆದು ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಸೇವೆ ನಡೆಯಿತು. ನೂರಾರು ಮಂದಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು. ಬಡೆಕ್ಕಾವು ಗುತ್ತು ಹಿರಿಯರು, ಚಾಕಿರಿ ವರ್ಗದವರು, ಊರಿನ ಮತ್ತು ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಯೋಗ ಸಪ್ತಾಹಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಬಂಟರ ಸಂಘದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ.ಸದಾನಂದ ಶೆಟ್ಟಿ ರವರಿಗೆ ಗೌರವಾರ್ಪಣೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ. ಓಡೀಲು ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧoತ್ಯುತ್ಸವ

Suddi Udaya

ಯುವ ಕಾಂಗ್ರೆಸ್ ದಕ ಜಿಲ್ಲಾ ಸಮಿತಿಯಿಂದ ಮತಗಳ್ಳತನ ವಿರುದ್ದ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಮಂಗಳೂರಿನಲ್ಲಿ ಬ್ರಹತ್ ಪಂಜಿನ ಮೆರವಣಿಗೆ

Suddi Udaya

ವಿಧಾನಸಭೆಯ ಕಲಾಪದಲ್ಲಿ ದ.ಕ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ

Suddi Udaya

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya
error: Content is protected !!