31.9 C
ಪುತ್ತೂರು, ಬೆಳ್ತಂಗಡಿ
September 30, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಲಿಫ್ಟ್‌ನಲ್ಲಿ ಸಿಲುಕಿ ಬೆಳಾಲಿನ ಯುವಕ ಸಾವು

ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಬೆಳ್ತಂಗಡಿಯ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಮೃತ ಯುವಕ ಎಂದು ತಿಳಿದು ಬಂದಿದೆ.

ನೌಫಲ್ ಕಾರ್ಯನಿಮಿತ್ತ ಲಿಫ್ಟ್‌ನಲ್ಲಿ ಮೇಲಕ್ಕೆ ಹೋಗುವಾಗ ಒಂದನೇ ಮಹಡಿ ಮತ್ತು ನೆಲಮಹಡಿ ಮಧ್ಯಭಾಗದಲ್ಲಿ ಲಿಫ್ಟ್ ಕೆಟ್ಟು ನಿಂತಿದೆ. ಈ ಸಂದರ್ಭ ನೌಫಲ್ ಅವರು ಲಿಫ್ಟ್ ನಲ್ಲಿ ಬಾಕಿಯಾಗಿರುವ ಬಗ್ಗೆ ಮಾಹಿತಿ ಪಡೆದ ಅಲ್ಲಿದ್ದ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ.

ಒಂದನೇ ಮಹಡಿಯಲ್ಲಿ ಲಿಫ್ಟ್‌ನ ಅರ್ಧಭಾಗ ಇದ್ದ ಕಾರಣ ಲಿಫ್ಟ್ ಬಾಗಿಲು ಬಲವಂತದಿಂದ ತೆರೆದು ನೌಫಲ್ ರಕ್ಷಣೆಗೆ ಮುಂದಾಗಿದ್ದಾರೆ. ಕೈ ಹಿಡಿದು ಮೇಲೆತ್ತುವ ಸಂದರ್ಭ ಏಕಾಏಕಿ ಲಿಫ್ಟ್ ಚಲಿಸಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ನೌಫಲ್ ಮೃತರಾಗಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related posts

ಕೊಕ್ಕಡ: ಉಪ್ಪಾರಪಳಿಕೆ ಸ.ಉ. ಹಿ. ಪ್ರಾ. ಶಾಲಾ ಕ್ರೀಡೋತ್ಸವ

Suddi Udaya

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

Suddi Udaya

ಮಿತ್ತಬಾಗಿಲು ಪ್ರೌಢ ಶಾಲೆಯಲ್ಲಿಎಸ್ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 549ನೇ ಸೇವಾ ಯೋಜನೆ ಹಸ್ತಾಂತರ

Suddi Udaya

ರಾಜ್ಯಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ತಂಡ ಚಾಂಪಿಯನ್ಸ್

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಬಕ್ರೀದ್ ಆಚರಣೆ

Suddi Udaya
error: Content is protected !!