25 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಭವನದಲ್ಲಿ “ಆಟಿದ ನೆಂಪು” ವಿಶೇಷ ಕಾರ್ಯಕ್ರಮ: ಮನಸೆಳೆದ 8 ವರ್ಷದ ಪೋರನ ಆಟಿ ಕಳೆಂಜ ವೇಷ

ಬೆಳ್ತಂಗಡಿ: ವಕೀಲರ ಸಂಘ (ರಿ) ಬೆಳ್ತಂಗಡಿ ವತಿಯಿಂದ ತುಳುನಾಡ ಸಂಸ್ಕಾರ, ಸಂಸ್ಕೃತಿ, ಕೃಷಿ ಕಾಯಕ, ಜನರ ಆಚಾರ-ವಿಚಾರ, ಆಹಾರ ಪದ್ಧತಿಯ ವೈಶಿಷ್ಟ್ಯಗಳನ್ನು ಪುನರಪಿ ನೆನಪಿಸುವ “ಆಟಿದ ನೆಂಪು” ಕಾರ್ಯಕ್ರಮ ಆ.13ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಮುನ್ನ ವೇದಿಕೆಯಲ್ಲಿ ಮಾಲಾಡಿ ಶಶಿಧರ್ ಮತ್ತು ತಂಡದಿಂದ ಆಟಿ ಕಳೆಂಜ ಪ್ರದರ್ಶನ ನಡೆಯಿತು. ಎಂಟು ವರ್ಷದ ಬಾಲಕ ಸಿರಿನ್ ರವರ ಆಟಿ ಕಳೆಂಜ ವೇಷ ಎಲ್ಲಾ ವಕೀಲರುಗಳ ಮನ ಸೆಳೆಯಿತು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ.ಎಫ್.ಸಿ, ಮನು ಬಿ.ಕೆ. ಅವರು ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವಕೀಲರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಮ ಲಿಂಗಪ್ಪ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ.ಎಫ್.ಸಿ, ಬೆಳ್ತಂಗಡಿ, ಶಶಾಂಕ್ ನಾಗೇಂದ್ರ ಭಟ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ಬೆಳ್ತಂಗಡಿ, ಶಿವಕುಮಾ‌ರ್ ಎಸ್.ಎಮ್. ಅಧ್ಯಕ್ಷರು, ಹಿರಿಯ ಸಮಿತಿ ವಕೀಲರ ಸಂಘ ಬೆಳ್ತಂಗಡಿ, ಶ್ರೀನಿವಾಸ ಗೌಡ ಉಪಾಧ್ಯಕ್ಷರು, ವಕೀಲರ ಸಂಘ ಬೆಳ್ತಂಗಡಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ, ಉಜಿರೆ ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ. ಮಹಾವೀರ ಜೈನ್ ಅವರು ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.

ವಿಶೇಷ ಆಕರ್ಷಣೆ : ವಿವಿಧ ಬಗೆಯ ಆಟಿಯ ತಿಂಡಿ ತಿನಸುಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಸ್ವಾಗತಿಸಿ, ಖಜಾಂಜಿ ಮುಲ್ತಾಜ್ ಬೇಗಂ ವಂದಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ವಸಂತ ಮರಕಡ, ಹರ್ಷಿತ್ ಕುಮಾರ್ ಹೆಚ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಕೋಟಕ್ ಲೈಫ್ 3 ನೇ ವರ್ಷದ ಪಾದರ್ಪಣೆಯ ಸಂಭ್ರಮಾಚರಣೆ

Suddi Udaya

ಬಂದಾರು: ಮನೆ ಮೇಲೆ ಕುಸಿದು ಬಿದ್ದ ಧರೆ

Suddi Udaya

ಬೆಳ್ತಂಗಡಿ : ಯುವ ವಕೀಲರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಕಟ್ಟೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಪುತ್ತಿಲ‌ ಗ್ರಾಮದ ಪಲ್ಕೆ ಎಂಬಲ್ಲಿ ಕಾಯಾ೯ಚರಿಸುತ್ತಿದ್ದ ಆಕ್ರಮ‌ ಕಾಸಾಯಿಖಾನೆಗೆ ಪೊಲೀಸರು ದಾಳಿ: ಆರೋಪಿಗಳು ಪರಾರಿ, ಜಾನುವಾರು ಹಾಗೂ ಸೋತ್ತುಗಳ ವಶ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!