September 3, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಜಯನಗರ-ಗುರಿಪಳ್ಳದಲ್ಲಿ ರಕ್ತದಾನ ಶಿಬಿರ: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ : ಡಾ| ಗೋಪಾಲ ಕೃಷ್ಣ ಕೆ.

ಉಜಿರೆ: “ಸೇವಾಭಾವನೆ, ಮಾನವೀಯತೆ ಹಾಗೂ ಜನರ ಆರೋಗ್ಯದ ಕಡೆಗಿನ ಸಮರ್ಪಣೆ ಎಲ್ಲರಿಗೂ ಪ್ರೇರಣೆಯಾಗಿದೆ. ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ” ಎಂದು ಉಜಿರೆ ಬೆನಕ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ| ಗೋಪಾಲ ಕೃಷ್ಣ ಕೆ. ಹೇಳಿದರು.

ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಸುವರ್ಣ ಮಹೋತ್ಸವ ಸಮಿತಿ, ಜಯನಗರ-ಗುರಿಪಳ್ಳ ಇವರ ಪ್ರಾಯೋಜಕತ್ವದಲ್ಲಿ, ಬೆನಕ ಹೆಲ್ತ್ ಸೆಂಟರ್, ಉಜಿರೆ – ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ, ಆಳ್ವಾಸ್ ಹೆಲ್ತ್ ಸೆಂಟರ್, ಮೂಡಬಿದಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಭಾಗಿತ್ವದೊಂದಿಗೆ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು 152 ಮಂದಿ ಆರೋಗ್ಯ ತಪಾಸಣೆಗೊಳಪಟ್ಟಿದ್ದು, 84 ಯುನಿಟ್ ರಕ್ತ ಸಂಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ದೇವರ ಕಿರೀಟಕ್ಕೆ ಚಿನ್ನದ ಸತ್ತಿಗೆ ಅರ್ಪಿಸುವ ನೂತನ ಕಾರ್ಯಕ್ರಮದ ಕೂಪನ್‌ನ್ನು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾನಂದ ಪೂಜಾರಿ, ಕೋಡ್ಕಲ್, ಅಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೋ/ ಶ್ರೀಧರ್ ಕೆ.ಪಿ., ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ, ಡಾ ವಿಶ್ವ ವಿಜೇತ್ MBBS, DLO, DNB (ENT Surgeon), ಮಂಗಳೂರು ವೆನ್ಲಾಕ್ಆಸ್ಪತ್ರೆ, ಮಂಗಳೂರು, ಡಾ ಗಣೇಶ್ ಪ್ರಸಾದ್, Asst. Prof. & Medical Officer, ವಾ.ಸಾ.ಪ. ಬೆಂದೆ ಮತ್ತು ಪಶ್ಚಿಮ ವಲಯ, ಧರ್ಮಸ್ಥಳ, ಡಾ ಅಶೋಕ್ ಕೆ.ಎನ್., MD ಹಾಗೂ ಡಾ ಕುಮಾರ್ ಪಾಟೀಲ, ಎಚ್.ಡಿ.ಸಿ. ಆಸ್ಪತ್ರೆ, ಉಜಿರೆ ಭಾಗವಹಿಸಿದ್ದರು.ಶಿಬಿರದಲ್ಲಿ ಡಾ ಅಶ್ವಿನ್ ರಾವ್ (MBBS, DNB), ಡಾ ಅಂಕಿತ್ ಜಿ. ಭಟ್ (MBBS, MS, DNB, FMAS), ಡಾ ರೋಹಿತ್ ಜಿ. ಭಟ್ (MBBS, MS Ortho), ಡಾ ಸ್ನೇಹ ಭಟ್ (MBBS, MS, DNB, FRM) ಹಾಗೂ ಡಾ ರಂಜನ್ ಪ್ರಭು (MBBS, DCH) ಸೇರಿದಂತೆ ವಿವಿಧ ತಜ್ಞ ವೈದ್ಯರು ಪಾಲ್ಗೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಿದರು.

ಕಾರ್ಯಕ್ರಮದ ಯಶಸ್ವಿಗಾಗಿ ರಮಾನಂದ ಶರ್ಮ,ಪ್ರಕಾಶ್ ಕುಮಾರ್, ಸಂತೋಷ್ ಗೋಳಿದೊಟ್ಟು, ಚೇತನ್ ಶೆಟ್ಟಿ ಗುರಿಪಳ್ಳ, ಶಿವಪ್ರಸಾದ್ ಕೆರಿಮಾರ್, ಭರತ ಕುಮಾರ್, ಬಾಲಕೃಷ್ಣ ಗೌಡ, ಮುಂತಾದವರು ಶ್ರಮಿಸಿದರು. ಗುರುರಾಜ ಪೂಜಾರಿ ಗುರಿಪಳ್ಳ ಸ್ವಾಗತಿಸಿ, ನವೀನ್ ಶೆಟ್ಟಿ ಗುತ್ತಿಲಾರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

Related posts

ಉರುವಾಲು ಶ್ರೀ ಮಹಮ್ಮಾಯಿ ದೇವಸ್ಥಾನ ಪ್ರತಿಷ್ಠೋತ್ಸವದ ಪೂರ್ವಭಾವಿ ಸಭೆ

Suddi Udaya

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಟ್ಟೆ ಚೀಲ ವಿತರಣೆ

Suddi Udaya

ದ.ಕ ಲೋಕಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Suddi Udaya

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ವಿದ್ಯುತ್ ಭಾಗ್ಯಕ್ಕೆ ಅನುಮತಿ: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಹಾಗೂ ಸೆಲ್ಕೋ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಸಮೃದ್ಧಿ ಸಂತೃಪ್ತಿ ಸಬಲೀಕರಣ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya
error: Content is protected !!