24.9 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನೋಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ: ವಾರೀಸುದಾರರ ಪತ್ತೆಗೆ ಮನವಿ

ಬೆಳ್ತಂಗಡಿ: ಮೇ 5ರಂದು ಲಾಯಿಲ ಗ್ರಾಮದ ಕರ್ನೋಡಿ ಆಕೆಶಿಯ ನೆಡುತೋಪಿನಲ್ಲಿ, ಸುಮಾರು 40-45 ವರ್ಷದ ಅಪರಿಚಿತ ಗಂಡಸು ಲುಂಗಿಯನ್ನು ಹಗ್ಗದಂತೆ ಮಾಡಿಕೊಂಡು, ಕಾಟು ಜಾತಿಯ ಮರದ ಕೊಂಬೆಗೆ ಮತ್ತು ಕುತ್ತಿಗೆಗೆ ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರೀಸುದಾರರು ಪತ್ತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಠಾಣಾ ಯು.ಡಿ.ಆರ್ ನಂಬ್ರ: 24/2026 ಕಲಂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಮೃತರ ವಯಸ್ಸು ಸುಮಾರು 40-45 ವರ್ಷ, ಎತ್ತರ 5ಅಡಿ 5 ಇಂಚು, ಚಹರೆ ಸಾಧಾರಣ ಶರೀರ, ಬಲ ಕೈಯ ಕೋಲು ಕೈಯ ಮುಂಭಾಗದ ಒಳ ಭಾಗದಲ್ಲಿ ಹಸಿರು ಮಿಶ್ರಿತ ಕಪ್ಪು ಬಣ್ಣದಲ್ಲಿ “ಕೃಷ್ಣ” ದೇವರ ಹಚ್ಚೆ ಇದ್ದು, ಅದರ ಕೆಳಗೆ ಆಂಗ್ಲ ಭಾಷೆಯಲ್ಲಿ “B” ಅಕ್ಷರವನ್ನು ಬರೆಯಲಾಗಿದೆ.

ಮೃತ ಗಂಡಸಿನ ವಿಳಾಸ ಅಥವಾ ವಾರೀಸುದಾರರು ಪತ್ತೆಯಾದಲ್ಲಿ ದ.ಕ ಜಿಲ್ಲಾ ಕಂಟ್ರೋಲ್ ರೂಂ ಅಥವಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಸಂಪರ್ಕ ಸಂಖ್ಯೆ: ದ.ಕ ಜಿಲ್ಲಾ ಕಂಟ್ರೋಲ್ ರೂಂ : 9480805300 ಬೆಳ್ತಂಗಡಿ ಪೊಲೀಸ್ ಠಾಣೆ: 08256-232093., ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ : 9480805370.

Related posts

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಸಮಾರೋಪ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆ

Suddi Udaya

ಗೌಡರ ಯಾನೆ ಒಕ್ಕಲಿಗ ಗ್ರಾಮ ಸಮಿತಿ ಹಾಗೂ ಶಿಶಿಲ ಗ್ರಾಮದ ಬೈಲುವಾರು ಸಮಿತಿಯ ಪದಾಧಿಕಾರಿಗಳ ಸಭೆ

Suddi Udaya

ಲೋಕಸಭಾ ಚುನಾವಣೆ ಹಿನ್ನಲೆ: ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ. ಎಫ್ ಯೋಧರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರ ಪಥ ಸಂಚಲನ

Suddi Udaya

ಇಳಂತಿಲ : ಅಣಬೆ ಕೃಷಿ ತರಬೇತಿ

Suddi Udaya
error: Content is protected !!